
‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಧ್ರುವಂತ್, ರಾಶಿಕಾ ಶೆಟ್ಟಿ, ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ ಶೈವ, ಧನುಷ್, ರಕ್ಷಿತಾ ಶೆಟ್ಟಿ, ಮ್ಯಾಟೆಂಟ್ ರಘು ಅವರು ಕೊನೇ ಹಂತದ ತನಕ ಬಂದಿದ್ದಾರೆ. ಈ ಸೀಸನ್ನ ಫಿನಾಲೆ ಶೀಘ್ರದಲ್ಲೇ ಬರಲಿದೆ. ಕೊನೇ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಇರುವುದು ಕೇವಲ 8 ಜನರು ಆದ್ದರಿಂದ ಅವರ ನಡುವೆಯೇ ಜಗಳ ಜೋರಾಗಿದೆ. ಧನುಷ್ ಅವರು ಕ್ಯಾಪ್ಟನ್ ಆದ್ದರಿಂದ ನಾಮಿನೇಷನ್ನಿಂದ ಸೇಫ್ ಆಗಿದ್ದಾರೆ. ಇನ್ನುಳಿದ ಎಲ್ಲರೂ ಈ ವಾರ ನಾಮಿನೇಟ್ ಆಗಿದ್ದಾರೆ. ಕೇವಲ ಒಂದೇ ವೋಟ್ನಿಂದ ಗಿಲ್ಲಿ ನಟ (Gilli Nata) ಕೂಡ ನಾಮಿನೇಟ್ ಆಗಿದ್ದಾರೆ. ಹಾಗಾಗಿ ಅವರಿಗೆ ಶಾಕ್ ಆಗಿದೆ.
ಈ ವಾರ ಅಶ್ವಿನಿ ಗೌಡ ಮಾತ್ರವೇ ಗಿಲ್ಲಿ ನಟ ಅವರನ್ನು ನಾಮಿನೇಟ್ ಮಾಡಿದರು. ಒಬ್ಬರೇ ನಾಮಿನೇಟ್ ಮಾಡಿದ್ದರಿಂದ ತಾವು ಈ ವಾರ ನಾಮಿನೇಷನ್ನಿಂದ ಪಾರಾಗಬಹುದು ಎಂದು ಗಿಲ್ಲಿ ನಟ ಅವರು ಭಾವಿಸಿದ್ದರು. ಆದರೆ ಅವರು ಕೂಡ ನಾಮಿನೇಟ್ ಆಗಿದ್ದಾರೆ. ವೀಕ್ಷಕರ ಬೆಂಬಲದಿಂದ ತಾನು ಖಂಡಿತಾ ಸೇಫ್ ಆಗುತ್ತೇನೆ ಎಂಬ ಆತ್ಮವಿಶ್ವಾಸ ಕೂಡ ಅವರಿಗೆ ಇದೆ.
ಬಿಗ್ ಬಾಸ್ ಆಟದಲ್ಲಿ ನೂರು ದಿನಗಳು ಕಳೆದಿವೆ. ಇಲ್ಲಿಯ ತನಕ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುವುದು ಎಂದರೆ ತಮಾಷೆಯ ವಿಷಯ ಅಲ್ಲ. ಹಲವು ಬಗೆಯ ವ್ಯಕ್ತಿತ್ವ ಇರುವ ಸ್ಪರ್ಧಿಗಳ ಜೊತೆ ಪೈಪೋಟಿ ನೀಡಬೇಕು. ಹಲವಾರು ಟಾಸ್ಕ್ ಗೆಲ್ಲಬೇಕು. ಆ ಎಲ್ಲ ಹಂತಗಳನ್ನು ದಾಟಿಕೊಂಡು ಈ 8 ಮಂದಿ ಸ್ಪರ್ಧಿಗಳು ಕೊನೇ ವಾರದ ನಾಮಿನೇಷನ್ ತನಕ ಬಂದಿದ್ದಾರೆ.
ಗಿಲ್ಲಿ ನಟ ಅವರು ಆರಂಭದಿಂದಲೂ ಒಂದೇ ರೀತಿಯ ಟ್ರ್ಯಾಕ್ ನಿಭಾಯಿಸುತ್ತಿದ್ದಾರೆ. ಅವರ ಆಟವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಕ್ಯಾವ್ಯಾ ಶೈವ ಜೊತೆಗಿನ ಸ್ನೇಹದ ಕಾರಣದಿಂದ ಹಲವು ಬಾರಿ ಗಿಲ್ಲಿ ಅವರು ಟೀಕೆಗೆ ಒಳಗಾಗಿದ್ದಾರೆ. ಆದರೂ ಕೂಡ ಅವರು ಕಾವ್ಯಾನ ಬಿಟ್ಟುಕೊಟ್ಟಿಲ್ಲ. ಅಂತಿಮವಾಗಿ ಕಾವ್ಯಾ ವರ್ಸಸ್ ಗಿಲ್ಲಿ ಎಂಬ ವಾತಾವರಣ ನಿರ್ಮಾಣ ಆದರೂ ಅಚ್ಚರಿ ಏನಿಲ್ಲ.
ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ರಾಶಿಕಾ ಶೆಟ್ಟಿ ಮತ್ತು ರಕ್ಷಿತಾ ಶೆಟ್ಟಿ ನಡುವೆ ದೊಡ್ಡ ಜಗಳ ಆಗಿದೆ. ಇಬ್ಬರೂ ಕೂಡ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಅದೇ ರೀತಿ ಮ್ಯೂಟೆಂಟ್ ರಘು ಮತ್ತು ಧ್ರುವಂತ್ ಕೂಡ ಜಗಳ ಮಾಡಿಕೊಂಡಿದ್ದಾರೆ. ಕೊನೇ ಹಂತದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಎಲ್ಲರೂ ಅಗ್ರೆಸಿವ್ ಆಗಿ ನಡೆದುಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಯಾರು ವಿನ್ ಆಗುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.