ಶಾಲಲ್ಲಿ ಚಪ್ಪಲಿ ಸುತ್ತಿ ಹೊಡೆದ ಗಿಲ್ಲಿ ನಟ; ಅಶ್ವಿನಿ-ಜಾನ್ವಿ ಗಪ್ ಚುಪ್

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅಶ್ವಿನಿ ಮತ್ತು ಜಾನ್ವಿ ವಿರುದ್ಧ ಸಮರ ಸಾರಿದ್ದಾರೆ. ರಕ್ಷಿತಾಗೆ ಕಿರುಕುಳ ನೀಡಿದ ವಿಚಾರಕ್ಕೆ, ಗಿಲ್ಲಿ ನಟ ಹಾಡಿನ ಮೂಲಕ ಹಾಗೂ ಖಡಕ್ ಮಾತುಗಳಿಂದ ಇಬ್ಬರಿಗೂ ತಕ್ಕ ಪಾಠ ಕಲಿಸಿದ್ದಾರೆ. ಸುದ್ದಿಗೋಷ್ಠಿಯ ವೇಳೆ ಅಶ್ವಿನಿ ಪ್ರಶ್ನೆಗಳಿಗೆ ದಿಟ್ಟ ಉತ್ತರ ನೀಡಿದ್ದಾರೆ. ಜಾನ್ವಿ ಅವರಿಗೂ ತಮ್ಮದೇ ಶೈಲಿಯಲ್ಲಿ ಗಪ್ ಚುಪ್ ಆಗಿಸಿದ್ದಾರೆ.

ಶಾಲಲ್ಲಿ ಚಪ್ಪಲಿ ಸುತ್ತಿ ಹೊಡೆದ ಗಿಲ್ಲಿ ನಟ; ಅಶ್ವಿನಿ-ಜಾನ್ವಿ ಗಪ್ ಚುಪ್
ಅಶ್ವಿನಿ-ಗಿಲ್ಲಿ-ಜಾನ್ವಿ

Updated on: Oct 18, 2025 | 7:31 AM

ಬಿಗ್ ಬಾಸ್ (Bigg Boss) ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಜಾನ್ವಿ ಹಾರಾಟ ಜೋರಾಗಿದೆ. ಇವರಿಬ್ಬರೂ ಮನಸ್ಸಿಗೆ ತೋಚಿದಂತೆ ನಡೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ರಕ್ಷಿತಾ ಅವರಿಗೆ ತಮ್ಮ ಮಾತುಗಳಿಂದಲೇ ಕಿರುಕುಳ ನೀಡಿದ್ದಾರೆ. ಈ ವಿಚಾರದಲ್ಲಿ ಗಿಲ್ಲಿ ನಟ ಅವರಿಗೆ ಕೋಪ ಇದೆ. ಅವರು ಅಶ್ವಿನಿ ಹಾಗೂ ಜಾನ್ವಿಗೆ ಕಂಡ ಕಂಡಲ್ಲಿ ತಿರುಗೇಟು ಕೊಡುತ್ತಿದ್ದಾರೆ. ಇದರಿಂದ ಇಬ್ಬರೂ ಗಪ್-ಚುಪ್ ಆಗಿದ್ದಾರೆ.

ಹಾಡಿನ ಮೂಲಕ ಟೀಕೆ

ಜಾನ್ವಿ ಅವರು ರಕ್ಷಿತಾ ಅವರನ್ನು ಟೀಕಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಹಾಡಿನ ಮೂಲಕವೇ ಜಾನ್ವಿಗೆ ತಿರುಗೇಟು ಕೊಟ್ಟಿದ್ದಾರೆ. ‘ಗೆಜ್ಜೆ ಚೈನು ಕೈಯಾಗ, 12 ಗಂಟೆ ರಾತ್ರಿಯಾಗ..’ ಎಂದು ತಮ್ಮದೇ ಸಾಲುಗಳನ್ನು ಬರೆದು ಹಾಡಿದ್ದಾರೆ. ಈ ಹಾಡನ್ನು ಕೇಳಿ ಜಾನ್ವಿಗೆ ಮಾತೇ ಬರದಂತೆ ಆಯಿತು.

ಇದನ್ನೂ ಓದಿ
ಒಂದೇ ದಿನ ಒಟಿಟಿಗೆ ಕಾಲಿಟ್ಟ ಕನ್ನಡದ ಎರಡು ಹಿಟ್ ಚಿತ್ರಗಳು; ಮಿಸ್ ಮಾಡಬೇಡಿ
ಅಶ್ವಿನಿಯ ಚಮಚ ಆದ ಜಾನ್ವಿ; ಹೇಳಿದಂತೆ ಕುಣೀತಾರೆ ತಕತೈ, ತಕತೈ
ರಕ್ಷಿತಾ ಗುಂಡಿಗೆ ಮೆಚ್ಚಲೇಬೇಕು; ಅಶ್ವಿನಿ-ಜಾನ್ವಿ ಕೂಗಾಡಿದರೂ ಜಗಲ್ಲೂ ಇಲ್ಲ
ಆಲಿಯಾ ಹೊಸ ಮನೆಯಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ

ಅಶ್ವಿನಿಗೂ ಖಡಕ್ ಉತ್ತರ

ಬಿಗ್ ಬಾಸ್ ಮನೆಯಲ್ಲಿ ಸುದ್ದಿಗೋಷ್ಠಿ ಆಯೋಜನೆ ಮಾಡಲಾಗಿತ್ತು. ನಾಮಿನೇಟ್ ಆದ ಸ್ಪರ್ಧಿಗಳು ತಮ್ಮನ್ನು ತಾವು ಸಮರ್ಥಿಸಿಕೊಳ್ಳಬೇಕಿತ್ತು. ಫಿನಾಲೆ ಸ್ಪರ್ಧಿಗಳು ಪತ್ರಕರ್ತರ ಸ್ಥಾನದಲ್ಲಿ ಕುಳಿತು ಪ್ರಶ್ನೆ ಕೇಳಬೇಕಿತ್ತು. ಈ ವೇಳೆ ಅಶ್ವಿನಿ ಅವರು ಗಿಲ್ಲಿ ನಟನ ಮೇಲೆ ಹರಿಹಾಯಲು ಪ್ರಯತ್ನಿಸಿದ್ದಾರೆ. ಇದಕ್ಕೆ ಅವರು ಖಡಕ್ ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆ ಒಳಗೆ ಸುದ್ದಿಗೋಷ್ಠಿ: ಬಾಣದಂತಹ ಪ್ರಶ್ನೆಗಳಿಗೆ ತತ್ತರಿಸಿ ಹೋದ ರಕ್ಷಿತಾ ಶೆಟ್ಟಿ

‘ಏನು ದಬಾಕಿದೀರಾ ಹೇಳಿ’ ಎಂದು ಅಶ್ವಿನಿ ಕೇಳಿದರು. ಇದಕ್ಕೆ ಉತ್ತರಿಸಿದ ಗಿಲ್ಲಿ, ‘ಸ್ನಾನ ಮಾಡಿದ ಬಕೇಟ್​​ನ ತಿರುಗಿ ಹಾಕಿದ್ದೇನೆ’ ಎಂದರು. ‘ಬನಿಯಾನ್ ಹಾಕ್ಕೊಂಡೇ ಓಡಾಡ್ತೀಯಲ್ಲ, ಹೊರಗೆ ಯಾವುದಾದರೂ ಕಂಪನಿ ಜೊತೆ ಕೊಲ್ಯಾಬರೇಟ್ ಆಗಿದ್ದೀಯಾ’ ಎಂದು ಅಶ್ವಿನಿ ಪ್ರಶ್ನೆ ಮಾಡಿದರು. ‘ಕೆಲವರು (ಅಶ್ವಿನಿ) ಸೀರೆ ಉಟ್ಟಿಕೊಂಡೇ ಓಡಾಡ್ತಾರೆ. ಹಾಗಂತ ಅವರು ಯಾವುದೋ ಸ್ಯಾರಿ ಕಂಪನಿ ಜೊತೆ ಕೊಲ್ಯಾಬರೇಟ್ ಆಗಿದ್ದಾರೆ ಎಂದು ಹೇಳಲು ಸಾಧ್ಯವೇ’ ಎಂದು ಅಶ್ವಿನಿಗೆ ತಿರುಗೇಟು ಕೊಟ್ಟರು.

ಪದೇ ಪದೇ ಜಾನ್ವಿ ಕಾಲೆಳೆದ ಗಿಲ್ಲಿ

ನಾಮಿನೇಟ್ ಆದ ಸ್ಪರ್ಧಿಗಳು ನೀಡಿದ ಸಮರ್ಥನೆ ಆಧರಿಸಿ ಒಬ್ಬರನ್ನು ನಾಮಿನೇಷನ್​ನಿಂದ ಹೊರಗೆ ಇಡಬೇಕಿತ್ತು. ಇದನ್ನು ಫಿನಾಲೆ ಸ್ಪರ್ಧಿಗಳೇ ನಿರ್ಧರಿಸಬೇಕಿತ್ತು. ನಾಲ್ವರು ಫಿನಾಲೆ ಸ್ಪರ್ಧಿಗಳು ಒಳಗೆ ಹೋಗುತ್ತಿದ್ದಂತೆ ಗಿಲ್ಲಿ ಅವರು, ‘ಜಾನ್ವಿ ಅವರೇ ಸರ್ಕಾರ ನಿಮ್ಮದೇ. ನೀವೇ ಸೇವ್ ಆಗ್ತೀರಾ ಬಿಡಿ’ ಎಂದಾಗ ಜಾನ್ವಿಗೆ ಮಾತೇ ಬರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Published On - 7:02 am, Sat, 18 October 25