‘ಹೊರಗೆ ಹನುಮಂತನ ಬಗ್ಗೆ ಒಳ್ಳೆಯ ಟಾಕ್ ಇದೆ’; ಶಿಶಿರ್​ಗೆ ಹೊರಗಿನ ಮಾಹಿತಿ ಸಿಕ್ಕಿದ್ದು ಹೇಗೆ?

ಹನುಮಂತ ಅವರು ಹಂಗಾಮಿ ಕ್ಯಾಪ್ಟನ್ ಆಗಿದ್ದರು. ಆ ಬಳಿಕ ಅವರು ಪೂರ್ಣ ಪ್ರಮಾಣದ ಕ್ಯಾಪ್ಟನ್ ಆದರು. ಅಷ್ಟೇ ಅಲ್ಲ ಕಿಚ್ಚನ ಚಪ್ಪಾಳೆ ಕೂಡ ಪಡೆದರು. ಆರಂಭದಿಂದ ಇದ್ದವರು ಮಾಡಲಾಗದ ಸಾಧನೆಯನ್ನು ವೈಲ್ಡ್ ಕಾರ್ಡ್ ಮೂಲಕ ಬಂದ ಹನುಮಂತ ಅವರು ಮಾಡಿ ತೋರಿಸಿದ್ದರು.

‘ಹೊರಗೆ ಹನುಮಂತನ ಬಗ್ಗೆ ಒಳ್ಳೆಯ ಟಾಕ್ ಇದೆ’; ಶಿಶಿರ್​ಗೆ ಹೊರಗಿನ ಮಾಹಿತಿ ಸಿಕ್ಕಿದ್ದು ಹೇಗೆ?
ಹನುಮಂತ್

Updated on: Nov 21, 2024 | 7:29 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ ಅವರ ಆಟ ಎಲ್ಲರ ಗಮನ ಸೆಳೆಯುತ್ತಿದೆ. ಅವರ ಮುಗ್ಧತನ, ನ್ಯಾಯಯುತ ಆಟ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಚೈತ್ರಾ ಅವರು ಹೊರಗಿನ ವಿಚಾರಗಳನ್ನು ಒಳಗೆ ಹೇಳಿ ಸಾಕಷ್ಟು ಟೀಕೆಗೆ ಒಳಗಾದರು. ಸುದೀಪ್ ಅವರಿಂದ ಸಾಕಷ್ಟು ಪಾಠ ಹೇಳಿಸಿಕೊಂಡರು. ಹೀಗಿರುವಾಗಲೇ ಹನುಮಂತ ಅವರಿಗೆ ಹೊರಗಡೆ ಒಳ್ಳೆಯ ಟಾಕ್ ಇದೆ ಎಂಬ ವಿಚಾರ ಶಿಶಿರ್​ಗೆ ತಿಳಿದು ಹೋಗಿದೆ. ಅದು ಹೇಗೆ ಎನ್ನುವ ಪ್ರಶ್ನೆಗೆ ಇಲ್ಲದೆ ಉತ್ತರ.

ವೈಲ್ಡ್ ಕಾರ್ಡ್ ಮೂಲಕ ಬಂದ ಹನುಮಂತ ಅವರು ಹಂಗಾಮಿ ಕ್ಯಾಪ್ಟನ್ ಆಗಿದ್ದರು. ಆ ಬಳಿಕ ಅವರು ಪೂರ್ಣ ಪ್ರಮಾಣದ ಕ್ಯಾಪ್ಟನ್ ಆದರು. ಅಷ್ಟೇ ಅಲ್ಲ ಕಿಚ್ಚನ ಚಪ್ಪಾಳೆ ಕೂಡ ಪಡೆದರು. ಆರಂಭದಿಂದ ಇದ್ದವರು ಮಾಡಲಾಗದ ಸಾಧನೆಯನ್ನು ವೈಲ್ಡ್ ಕಾರ್ಡ್ ಮೂಲಕ ಬಂದ ಹನುಮಂತ ಅವರು ಮಾಡಿ ತೋರಿಸಿದ್ದರು. ಅವರ ಆಟ ದೊಡ್ಮನೆಯವರಿಗೆ ಮಾತ್ರವಲ್ಲ ಹೊರಗಿದ್ದವರಿಗೂ ಇಷ್ಟ ಆಗುತ್ತಿದೆ.

ಹನುಮಂತ ಅವರ ಆಟ ಇಷ್ಟ ಆಗಲು ಹಲವು ಕಾರಣಗಳು ಇವೆ. ಅವರು ಎಲ್ಲರನ್ನೂ ನಗಿಸುತ್ತಾರೆ, ಹಾಡು ಹೇಳುತ್ತಾರೆ. ಮನರಂಜನೆಯ ಜೊತೆಗೆ ಆಟದಲ್ಲಿ ಯಾವುದೇ ಹಿನ್ನಡೆ ಅನುಭವಿಸಿಲ್ಲ. ಅವರ ಅಭಿಮಾನಿ ಬಳಗ ಹೆಚ್ಚಿದೆ. ಅವರಿಗೆ ಹೊರಗೆ ಜನಪ್ರಿಯತೆ ಇದೆ ಎಂಬ ವಿಚಾರ ಶಿಶಿರ್​ಗೆ ಸ್ಪಷ್ಟವಾಗಿದೆ.

ಈ ವಾರ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ಶೋಭಾ ಹಾಗೂ ರಜತ್ ಅವರು ಹನುಮಂತ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಅದರಲ್ಲೂ ಶೋಭಾ ಅವರು ಹನುಮಂತನಿಗೆ ಎದುರುತ್ತರ ನೀಡದೇ ಅವರ ಫ್ರೆಂಡ್​ಶಿಪ್ ಬೆಳೆಸಿಕೊಂಡಿದ್ದಾರೆ. ಇದು ಶಿಶಿರ್ ಅನುಮಾನಕ್ಕೆ ಕಾರಣ ಆಗಿದೆ. ಈ ವಿಚಾರವನ್ನು ಐಶ್ವರ್ಯಾ ಜೊತೆ ಶಿಶಿರ್ ಚರ್ಚೆ ಮಾಡಿದ್ದಾರೆ.

ಇದನ್ನೂ ಓದಿ: ‘ನಾನು ಬರ್ತಾನೇ ಇರಲಿಲ್ಲ’; ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಸುಸ್ತಾದ ಹನುಮಂತ್

‘ಬಹುಶಃ ಹೊರಗೆ ಹನುಮಂತ್​ಗೆ ಒಳ್ಳೆಯ ಮಾತು ಇದೆ ಅನಿಸುತ್ತದೆ. ಅದಕ್ಕೆ ವೈಲ್ಡ್ ಕಾರ್ಡ್ ಮೂಲಕ ಬಂದ ಎಲ್ಲರೂ ಅವರ ಜೊತೆಯೇ ಸೇರುತ್ತಿದ್ದಾರೆ’ ಎಂದಿದ್ದಾರೆ. ಈ ಮೂಲಕ ಹನುಮಂತ ಅವರಿಗೆ ಹೊರಗೆ ಒಳ್ಳೆಯ ಅಭಿಪ್ರಾಯ ಮೂಡಿದೆ ಎಂಬುದು ಶಿಶಿರ್​ಗೆ ಸ್ಪಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us