ವೀಕೆಂಡ್​ನಲ್ಲಿ ಕಿಚ್ಚನ ಖಡಕ್ ಕ್ಲಾಸ್​ಗೆ ಕಾದಿದ್ದಾರೆ ವೀಕ್ಷಕರು; ತಪ್ಪು ಮಾಡಿದವರಿಗೆ ಶಿಕ್ಷೆ?

|

Updated on: Nov 03, 2023 | 2:28 PM

ಕಳಪೆಯನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ಓಪನ್ ಆಗಿ ಚರ್ಚೆ ಮಾಡುವಂತಿಲ್ಲ. ಆದಾಗ್ಯೂ ವಿನಯ್ ಅವರು ಗುಂಪು ಕಟ್ಟಿಕೊಂಡು ಕಳಪೆ ಯಾರಿಗೆ ನೀಡಬೇಕು ಎಂಬುದರ ಕುರಿತು ಚರ್ಚೆ ಮಾಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ವೀಕೆಂಡ್​ನಲ್ಲಿ ಕಿಚ್ಚನ ಖಡಕ್ ಕ್ಲಾಸ್​ಗೆ ಕಾದಿದ್ದಾರೆ ವೀಕ್ಷಕರು; ತಪ್ಪು ಮಾಡಿದವರಿಗೆ ಶಿಕ್ಷೆ?
ಸುದೀಪ್​-ವಿನಯ್
Follow us on

ವಿನಯ್ ಗೌಡ ಅವರು ‘ಬಿಗ್ ಬಾಸ್’ (Bigg Boss) ಮನೆಯಲ್ಲಿ ಎಲ್ಲೆ ಮೀರಿ ನಡೆದುಕೊಂಡಿದ್ದಾರೆ. ಬಳೆ ವಿಚಾರದಿಂದ ಹಿಡಿದು ಏಕವಚನದಲ್ಲಿ ಮಾತನಾಡಿಸುವವರೆಗೆ ಸಾಕಷ್ಟು ಬಾರಿ ತಪ್ಪಿದ್ದಾರೆ. ಆನೆ ನಡೆದಿದ್ದೇ ಹಾದಿ ಎಂದು ಮನಬಂದಂತೆ ವರ್ತಿಸಿದ್ದಾರೆ. ಈ ವೀಕೆಂಡ್​ನಲ್ಲಿ ಈ ಎಲ್ಲಾ ವಿಚಾರಗಳು ಚರ್ಚೆಗೆ ಬರಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಸ್ವತಃ ಸುದೀಪ್ ಅಭಿಮಾನಿಗಳೇ ಈ ಬಗ್ಗೆ ಪೋಸ್ಟ್ ಮಾಡುತ್ತಿದ್ದಾರೆ. ಹೀಗಾಗಿ, ವೀಕೆಂಡ್ ಎಪಿಸೋಡ್ ಸಾಕಷ್ಟು ಕುತೂಹಲದಿಂದ ಕೂಡುವ ಸಾಧ್ಯತೆ ಇದೆ.

ಬಳೆಯ ವಿಚಾರ

ಪುರುಷರಿಂದ ಮಾತ್ರ ಎಲ್ಲವೂ ಸಾಧ್ಯ, ಮಹಿಳೆಯರ ಕೈಯಿಂದ ಏನೂ ಆಗದು ಎಂಬರ್ಥದಲ್ಲಿ ವಿನಯ್ ಮಾತನಾಡಿದ್ದಾರೆ. ಈ ಕಾರಣದಿಂದಲೇ ಅವರು ‘ಬಳೆ ಹಾಕಿಕೊಂಡವರು’ ಎನ್ನುವ ಪದ ಬಳಕೆ ಮಾಡಿದ್ದಾರೆ.  ‘ಗಂಡಸಿನ ರೀತಿ ಆಡು, ಬಳೆ ಹಾಕ್ಕೊಂಡು ಹೆಂಗಸಿನ ರೀತಿ ಆಡಬೇಡ’ ಎಂದಿದ್ದರು ವಿನಯ್. ಇದು ಸಾಕಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯರು ಈ ಬಗ್ಗೆ ಅಪಸ್ವರ ತೆಗೆದಿದ್ದಾರೆ.

ಒಳ ಒಪ್ಪಂದ

ಕಳಪೆಯನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ಓಪನ್ ಆಗಿ ಚರ್ಚೆ ಮಾಡುವಂತಿಲ್ಲ. ಆದಾಗ್ಯೂ ವಿನಯ್ ಅವರು ಗುಂಪು ಕಟ್ಟಿಕೊಂಡು ಕಳಪೆ ಯಾರಿಗೆ ನೀಡಬೇಕು ಎಂಬುದರ ಕುರಿತು ಚರ್ಚೆ ಮಾಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಭಾಗ್ಯಶ್ರೀ ಬಗ್ಗೆ ಟೀಕೆ

ಕಳೆದ ವೀಕೆಂಡ್​ನಲ್ಲಿ ಭಾಗ್ಯಶ್ರೀ ಅವರು ಎಲಿಮಿನೇಟ್ ಆದರು. ಆದರೆ, ದಸರಾ ಹಬ್ಬಕ್ಕೆ ವೀಕ್ಷಕರು ಯಾರನ್ನೂ ಎಲಿಮಿನೇಟ್ ಮಾಡಬಾರದು ಎಂದು ಕೋರಿದ್ದರಿಂದ ಅವರು ಉಳಿದುಕೊಂಡರು. ಇದನ್ನು ವಿನಯ್ ಟೀಕಿಸಿದ್ದರು. ‘ದಸರಾ ಆಫರ್​ನಲ್ಲಿ ಭಾಗ್ಯಶ್ರೀ ಉಳಿದುಕೊಂಡರು’ ಎಂದು ಟೀಕಿಸಿದ್ದರು.

ಇದನ್ನೂ ಓದಿ: ಬಿಗ್ ಬಾಸ್ ಎಫೆಕ್ಟ್: ‘ಸೀತಾ ರಾಮ’ ಧಾರಾವಾಹಿ ಟಿಆರ್​ಪಿಯಲ್ಲಿ ಇಳಿಕೆ; ಇಲ್ಲಿದೆ ವಿವರ

ಅವಾಚ್ಯ ಶಬ್ದ

ಹಲವು ಕಡೆಗಳಲ್ಲಿ ವಿನಯ್ ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಅನೇಕರನ್ನು ಹೀಯಾಳಿಸಿ ಅವರು ಮಾತನಾಡಿದ್ದರು. ಈ ಬಗ್ಗೆಯೂ ಚರ್ಚೆ ಆಗಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳಲಿ ಎಂದು ಫ್ಯಾನ್ಸ್ ಬಯಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ