‘ವಿನಯ್ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತೇನೆ’; ಕ್ಯಾಮೆರಾ ಎದುರು ಬಂದು ಹೇಳಿದ ಕಾರ್ತಿಕ್

|

Updated on: Nov 02, 2023 | 8:15 AM

ವಿನಯ್ ಅವರು ಬಳೆ ಶಬ್ದ ಬಳಕೆ ಮಾಡಿದ್ದಾರೆ. ಬಳೆ ತೊಟ್ಟವರ ಬಳಿ ಏನೂ ಆಗಲ್ಲ ಅನ್ನೋದು ಅವರ ಮಾತಿನ ಅರ್ಥವಾಗಿತ್ತು. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕಾರ್ತಿಕ್ ಕೂಡ ಕೆಟ್ಟ ಶಬ್ದಗಳ ಬಳಕೆ ಮಾಡಿದ್ದಾರೆ ಅನ್ನೋದು ವಿನಯ್ ಆರೋಪ. ಇದನ್ನು ಕಾರ್ತಿಕ್ ಅಲ್ಲಗಳೆದಿದ್ದಾರೆ.

‘ವಿನಯ್ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತೇನೆ’; ಕ್ಯಾಮೆರಾ ಎದುರು ಬಂದು ಹೇಳಿದ ಕಾರ್ತಿಕ್
ವಿನಯ್-ಕಾರ್ತಿಕ್
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಕಾರ್ತಿಕ್ ಗೌಡ ಹಾಗೂ ವಿನಯ್ ಗೌಡ (Vinay Gowda) ಅವರ ಮಧ್ಯೆ ದುಶ್ಮನಿ ಹೆಚ್ಚುತ್ತಿದೆ. ಬಿಗ್​ ಬಾಸ್​ಗೆ ಬರುವುದಕ್ಕೂ ಮುನ್ನ ಇಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇತ್ತು. ಆದರೆ, ಈ ಫ್ರೆಂಡ್​ಶಿಪ್ ದೊಡ್ಮನೆಯಲ್ಲಿ ಹಾಳಾಗಿದೆ. ಕೆಲವು ದಿನ ಇಬ್ಬರೂ ಒಟ್ಟಾಗಿ ಇದ್ದರು. ಆದರೆ, ಟಾಸ್ಕ್​ ವಿಚಾರದಲ್ಲಿ ಇಬ್ಬರೂ ಬೇರೆ ಆಗಿದ್ದಾರೆ. ವಿನಯ್​ ಗೌಡ ಹಾಗೂ ಕಾರ್ತಿಕ್ ಮಧ್ಯೆ ಸಾಕಷ್ಟು ಕಿತ್ತಾಟ ನಡೆದಿದೆ. ಈ ಜಗಳದ ಮಧ್ಯೆ ತಾವು ವಿನಯ್​ ಕಾಲಿಗೆ ಬಿದ್ದು ಕ್ಷಮೆ ಕೇಳಲು ಸಿದ್ಧರಿರುವುದಾಗಿ ಕಾರ್ತಿಕ್ ಹೇಳಿದ್ದಾರೆ.

ಮಣ್ಣಿನ ಪಾತ್ರೆ ಮಾಡುವ ಟಾಸ್ಕ್​ನ ಬಿಗ್ ಬಾಸ್ ನೀಡಿದ್ದರು. ವಿನಯ್ ಗೌಡ ಅವರು ಒಂದು ಟೀಂನ ಮುಖ್ಯಸ್ಥನಾದರೆ, ಸಂಗೀತಾ ಮತ್ತೊಂದು ತಂಡದ ಜವಾಬ್ದಾರಿ ವಹಿಸಿದ್ದರು. ವಿನಯ್ ಅವರು ಬಳೆ ಶಬ್ದ ಬಳಕೆ ಮಾಡಿದ್ದಾರೆ. ಬಳೆ ತೊಟ್ಟವರ ಬಳಿ ಏನೂ ಆಗಲ್ಲ ಅನ್ನೋದು ಅವರ ಮಾತಿನ ಅರ್ಥವಾಗಿತ್ತು. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕಾರ್ತಿಕ್ ಕೂಡ ಕೆಟ್ಟ ಶಬ್ದಗಳ ಬಳಕೆ ಮಾಡಿದ್ದಾರೆ ಅನ್ನೋದು ವಿನಯ್ ಆರೋಪ. ಇದನ್ನು ಕಾರ್ತಿಕ್ ಅಲ್ಲಗಳೆದಿದ್ದಾರೆ.

‘ವಿನಯ್ ಅವರು ಹೇಳಿದರ ರೀತಿಯ ಶಬ್ದಗಳನ್ನು (ಕೆಲವು ಅವಾಚ್ಯ ಶಬ್ದಗಳು) ನಾನು ಬಳಕೆ ಮಾಡಿಲ್ಲ. ಒಂದೊಮ್ಮೆ ಹಾಗೆ ಮಾಡಿದ್ದರೆ ನಾನು ವಿನಯ್ ಕಾಲಿಗೆ ಬಿದ್ದು ಕ್ಷಮೆ ಕೇಳಲು ಸಿದ್ಧ. ನಾನು ಆ ರೀತಿಯ ಶಬ್ದಗಳನ್ನು ಬಳಕೆಯನ್ನೇ ಮಾಡಿಲ್ಲ’ ಎಂದರು ಕಾರ್ತಿಕ್. ಕಾರ್ತಿಕ್ ಹೇಳಿದ ಮಾತನ್ನು ಇಟ್ಟುಕೊಂಡು ನಮ್ರತಾ ಜೊತೆ ಮಾತನಾಡಿದರು ವಿನಯ್. ‘ನಾನು ಗೆಳೆಯ ಅಂತ ನೋಡಿದೆ. ಆದರೆ, ಅವನು ಆ ರೀತಿ ನಡೆದುಕೊಳ್ಳುತ್ತಿಲ್ಲ. ಕಾಲಿಗೆ ಬೀಳ್ತೀನಿ ಎಂದು ಹೇಳ್ತಾನೆ. ಅವನಿಗೆ ಭಾಗ್ಯಶ್ರೀಗೆ ಏನು ವ್ಯತ್ಯಾಸ’ ಎಂದರು ವಿನಯ್.

ಇದನ್ನೂ ಓದಿ: ‘ಗಂಡಸ್ತರ ಆಡು, ಬಳೆ ಹಾಕ್ಕೊಂಡು ಹೆಂಗಸಿನ ರೀತಿ ಆಡಬೇಡ’; ವಿನಯ್ ಮಾತಿನಿಂದ ಹೆಣ್ಣುಮಕ್ಕಳಿಗೆ ಅವಮಾನ

ವಿನಯ್ ಗೌಡ ಅವರು ನಡೆದುಕೊಳ್ಳುತ್ತಿರುವ ರೀತಿ ಕೆಲವರಿಗೆ ಇಷ್ಟ ಆಗುತ್ತಿಲ್ಲ. ಅವರು ಹೆಣ್ಣುಮಕ್ಕಳಿಗೆ ಅವಮಾನ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ವೀಕೆಂಡ್​ನಲ್ಲಿ ಈ ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆ ಇದೆ. ವಿನಯ್​ಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ