AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಗುಳ, ನೂಕಾಟ-ತಳ್ಳಾಟ: ರಣಾಂಗಣವಾದ ಬಿಗ್​ಬಾಸ್ ಮನೆ

Bigg Boss Kannada: ಬಿಗ್​ಬಾಸ್ ಮನೆ ರಣಾಂಗಣವಾಗಿ ಮಾರ್ಪಟ್ಟಿತ್ತು. ಸ್ಪರ್ಧಿಗಳು ಪರಸ್ಪರ ಮಹಿಳೆ-ಪುರುಷ ಬೇಧವಿಲ್ಲದೆ ಏಕವಚನದಲ್ಲಿ ಬೈದುಕೊಂಡಿದ್ದಲ್ಲದೆ, ಕೈ-ಕೈ ಮಿಲಾಯಿಸುವ ಹಂತಕ್ಕೂ ಹೋದರು. ಬುಧವಾರದ ಎಪಿಸೋಡ್​ನಲ್ಲಿ ಗೆದ್ದಿದ್ದು ಯಾರು?

ಬೈಗುಳ, ನೂಕಾಟ-ತಳ್ಳಾಟ: ರಣಾಂಗಣವಾದ ಬಿಗ್​ಬಾಸ್ ಮನೆ
ಮಂಜುನಾಥ ಸಿ.
|

Updated on: Nov 01, 2023 | 11:52 PM

Share

ಬಿಗ್​ಬಾಸ್ (Bigg Boss) ಮನೆ ರಣಾಂಗಣವಾಗಿ ಮಾರ್ಪಟ್ಟಿದೆ. ಮನೆಯ ಸದಸ್ಯರಿಗೆ ಹಳ್ಳಿ ಜೀವನ ಟಾಸ್ಕ್​ ಒಂದನ್ನು ಬಿಗ್​ಬಾಸ್ ನೀಡಿದ್ದಾರೆ. ಮನೆಯ ಸದಸ್ಯರನ್ನು ಎರಡು ಭಾಗಗಳನ್ನಾಗಿ ಮಾಡಿ ವಿನಯ್ ಹಾಗೂ ಸಂಗೀತಾ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಎರಡೂ ತಂಡಗಳಿಗೆ ಹಳ್ಳಿ ಜೀವನದಲ್ಲಿ ಸಾಮಾನ್ಯವಾದ ಕೆಲವು ಸಂಗತಿಗಳನ್ನೇ ಟಾಸ್ಕ್​ಗಳನ್ನಾಗಿ ನೀಡಲಾಗಿದೆ. ಈ ಟಾಸ್ಕ್​ ಆಡುವಾಗ ಮನೆಯ ಸದಸ್ಯರು ಅಕ್ಷರಷಃ ವೈರಿಗಳಂತೆ ಕಿತ್ತಾಡಿಕೊಂಡಿದ್ದಾರೆ.

ಮೊದಲಿಗೆ ಬಿಗ್​ಬಾಸ್ ಸೂಚಿಸಿದಂತೆ ತಟ್ಟೆ ಹಾಗೂ ಲೋಟವನ್ನು ಮಣ್ಣಿನಲ್ಲಿ ಮಾಡುವ ಟಾಸ್ಕ್​ ಅನ್ನು ಇತ್ತಂಡಗಳು ಮಾಡಬೇಕಾಯ್ತು, ಅದಕ್ಕೆ ಬೇಕಾದ ಮಣ್ಣನ್ನು ಬಿಗ್​ಬಾಸ್ ಕಿಂಡಿಯೊಂದರ ಮೂಲಕ ನೀಡಿದರು. ಆ ಮಣ್ಣನ್ನು ಪಡೆಯುವ ವೇಳೆ ಎರಡೂ ತಂಡಗಳ ಸದಸ್ಯರ ನಡುವೆ ಭಾರಿ ಮಾರಾ-ಮಾರಿ ನಡೆಯಿತು. ಒಂದು ಹಂತದಲ್ಲಂತೂ ವಿನಯ್, ಕಾರ್ತಿಕ್, ನಮ್ರತಾ, ಸಂಗೀತಾ ನಡುವೆ ಬಲು ಜೋರು ಜಗಳಗಳೇ ಆದವು. ಕೆಳಮಟ್ಟದ ಮಾತುಗಳನ್ನು ಸಹ ಪರಸ್ಪರರಿಗೆ ಇವರುಗಳು ಆಡಿದರು.

ಮಣ್ಣಿನ ಲೋಟ ಮತ್ತು ತಟ್ಟೆ ಮಾಡುವ ಸ್ಪರ್ಧೆಯಲ್ಲಿ ಹಲವು ಜಗಳ, ಕೂಗಾಟ, ಕಾದಾಟಗಳ ಬಳಿಕ ಸಂಗೀತಾ ಶೃಂಗೇರಿ ಅವರ ತಂಡವು ಜಯಗಳಿಸಿತು. ಅದಾದ ಬಳಿಕ ಸೆಗಣಿಯ ಭೆರಣಿಗಳನ್ನು ಮಾಡುವ ಟಾಸ್ಕ ಪ್ರಾರಂಭವಾಯ್ತು. ಅದರಲ್ಲಿ ನೇರ ಕಾದಾಟಕ್ಕೆ ವಿನಯ್, ಕಾರ್ತಿಕ್, ಮೈಖಲ್ ಹಾಗೂ ಸ್ನೇಹಿತ್ ಇಳಿದರು. ಆಗಲೂ ಸಹ ಸ್ನೇಹಿತ್ ಹಾಗೂ ಕಾರ್ತಿಕ್​ಗೆ ಪರಸ್ಪರ ಜಗಳವಾಯ್ತು.

ಎರಡೂ ತಂಡಗಳು ಬಿಗ್​ಬಾಸ್ ಹೇಳಿದಂತೆ ಸೆಗಣಿಯ ಭರಣಿಗಳನ್ನು ಮಾಡಿದ್ದರು. ಪರಸ್ಪರರ ಭರಣಿಗಳ ಗುಣಮಟ್ಟವನ್ನು ತಂಡದ ನಾಯಕರು ಪರಿಶೀಲಿಸಬೇಕಿತ್ತು, ಅಂತೆಯೇ ವಿನಯ್, ಸಂಗೀತಾರ ತಂಡದ ಭೆರಣಿಗಳನ್ನು ಪರಿಶೀಲಿಸಿ ಕೆಲವನ್ನು ರಿಜೆಕ್ಟ್ ಮಾಡಿದರು. ಸಂಗೀತಾ ಸಹ ಕೆಲವನ್ನು ರಿಜೆಕ್ಟ್ ಮಾಡಿದರು. ಅದಾದ ಬಳಿಕ ಎರಡನೇ ಸುತ್ತಿನಲ್ಲಿ, ವಿನಯ್, ಈ ಹಿಂದೆ ಓಕೆ ಮಾಡಿದ್ದ ಭೆರಣಿಯನ್ನು ರಿಜೆಕ್ಟ್ ಮಾಡಿದರು. ಅದಕ್ಕೆ ಸಂಗೀತಾ ಸಹ ಹಾಗೆಯೇ ಮಾಡಿದರು. ಅದಕ್ಕೆ ಸಿಟ್ಟಾದ ವಿನಯ್, ಸಂಗೀತಾರ ತಂಡ ಮಾಡಿದ್ದ ಎಲ್ಲ ಭೆರಣಿಗಳನ್ನು ಅಳಸಿ ಹಾಕಿದರು. ಅದಕ್ಕೆ ಸಂಗೀತಾ ಸಹ ವಿನಯ್ ತಂಡ ಮಾಡಿದ್ದ ಭೆರಣಿಗಳನ್ನು ಹಾಳು ಮಾಡಿದರು. ಇದು ಇನ್ನಷ್ಟು ಜಗಳಕ್ಕೆ ನಾಂದಿಯಾಯ್ತು. ವಿನಯ್ ಹಾಗೂ ಕಾರ್ತಿಕ್ ಮಧ್ಯೆ ಹಾಗೂ ವಿನಯ್ ಸಂಗೀತಾ ಮಧ್ಯೆ ಕೈ-ಕೈ ಮಿಲಾಯಿಸುವ ಹಂತಕ್ಕೆ ಕಲಹ ನಡೆಯಿತು. ವಿನಯ್ ಅಂತೂ ಪದೇ-ಪದೇ ತಾವು ಕಾರ್ತಿಕ್ ಅನ್ನು ಹೊಡೆಯುವುದಾಗಿ ತಮ್ಮ ತಂಡದ ಸದಸ್ಯರ ಬಳಿ ಹೇಳಿಕೊಂಡರು. ಅದಕ್ಕೆ ನಮ್ರತಾ ಸಹ ಸಾಥ್ ನೀಡಿದರು. ಕೊನೆಗೆ ಭೆರಣಿ ಟಾಸ್ಕ್ ಅನ್ನು ಬಿಗ್​ಬಾಸ್ ರದ್ದು ಮಾಡಿದರು.

ಈ ನಡುವೆ ಎರಡೂ ತಂಡಗಳ ನಡುವೆ ಮಧ್ಯಸ್ಥಿಕೆ ಪಾತ್ರವನ್ನು ನೀಡಿರುವ ತುಕಾಲಿ ಸಂತುಗೆ ಸೀಕ್ರೆಟ್ ಟಾಸ್ಕ್ ಅನ್ನು ಬಿಗ್​ಬಾಸ್ ನೀಡಿದರು. ಒಂದು ತಂಡವನ್ನು ಆರಿಸಿಕೊಂಡು ಆ ತಂಡ ಗೆಲ್ಲುವಂತೆ ಗುಟ್ಟಾಗಿ ಸಹಕರಿಸಬೇಕು ಎಂದರು. ಅಂತೆಯೇ ತುಕಾಲಿ ಸಂತು, ವಿನಯ್ ತಂಡವನ್ನು ಆಯ್ದುಕೊಂಡರು. ಆಟ ಮತ್ತಷ್ಟು ರೋಚಕವಾಗಿದ್ದು ಈ ಟಾಸ್ಕ್​ನಲ್ಲಿ ಗೆಲ್ಲುವರು ಯಾರು ಎಂಬುದು ಕುತೂಹಲ ಕೆರಳಿಸಿದೆ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್​ ವಾಹಿನಿಯಲ್ಲಿ ಪ್ರತಿ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆಗೆ ಪ್ರಸಾರವಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!