ಮದವೇರಿದ ಆನೆಯಂತೆ ವರ್ತಿಸುತ್ತಿದ್ದಾರೆ ವಿನಯ್; ಸಿಟ್ಟಾದ ಮನೆಮಂದಿ

ವಿನಯ್ ಗೌಡ ಅವರು ಮೊದಲ ವಾರ ಸಂಗೀತಾ ಶೃಂಗೇರಿ ವಿರುದ್ಧ ತಿರುಗಿಬಿದ್ದರು. ಅವರನ್ನು ಹೀಯಾಳಿಸುತ್ತಲೇ ಬಂದರು. ಆ ಬಳಿಕ ಒಬ್ಬೊಬ್ಬರನ್ನೇ ಟಾರ್ಗೆಟ್ ಮಾಡುತ್ತಾ ಬಂದರು. ಈಗ ಅವರು ಡ್ರೋನ್ ಪ್ರತಾಪ್ ಹಾಗೂ ಭಾಗ್ಯಶ್ರೀ ಅವರನ್ನು ಟಾರ್ಗೆಟ್ ಮಾಡಿದಂತಿದೆ.

ಮದವೇರಿದ ಆನೆಯಂತೆ ವರ್ತಿಸುತ್ತಿದ್ದಾರೆ ವಿನಯ್; ಸಿಟ್ಟಾದ ಮನೆಮಂದಿ
ವಿನಯ್ ಗೌಡ
Follow us
ರಾಜೇಶ್ ದುಗ್ಗುಮನೆ
|

Updated on:Nov 01, 2023 | 8:01 AM

ಬಿಗ್ ಬಾಸ್ ಕನ್ನಡ ಸೀಸನ್​ 10’ರಲ್ಲಿ ವಿನಯ್​ ಗೌಡ (Vinay Gowda) ಅವರ ವರ್ತನೆ ಕೆಲವರಿಗೆ ಇಷ್ಟವಾಗುತ್ತಿಲ್ಲ. ವೀಕ್ಷಕರಿಂದ ಅವರಿಗೆ ಆನೆ ಎಂಬ ಬಿರುದು ಸಿಕ್ಕಿತ್ತು. ಅವರಿಗೆ ಯಾರೂ ಸರಿಸಾಟಿ ಇಲ್ಲ ಎನ್ನುವ ಅರ್ಥದಲ್ಲಿ ಇದನ್ನು ನೀಡಲಾಗಿತ್ತು. ಈಗ ಈ ಆನೆಗೆ ಮದವೇರಿದಂತಿದೆ. ಅವರು ಮನೆಯಲ್ಲಿ ಎಲ್ಲರ ಮೇಲೂ ಕೂಗಾಡುತ್ತಿದ್ದಾರೆ. ಕಳೆದವಾರದಂತೆ ಅದು ಈ ವಾರವೂ ಮುಂದುವರಿದಿದೆ. ಅವರಿಗೆ ‘ನಾನೇ ಎಲ್ಲವೂ’ ಎಂಬ ಅಹಂ ಬಂದಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿನಯ್ ಗೌಡ ಅವರು ಮೊದಲ ವಾರ ಸಂಗೀತಾ ಶೃಂಗೇರಿ ವಿರುದ್ಧ ತಿರುಗಿಬಿದ್ದರು. ಅವರನ್ನು ಹೀಯಾಳಿಸುತ್ತಲೇ ಬಂದರು. ಆ ಬಳಿಕ ಒಬ್ಬೊಬ್ಬರನ್ನೇ ಟಾರ್ಗೆಟ್ ಮಾಡುತ್ತಾ ಬಂದರು. ಈಗ ಅವರು ಡ್ರೋನ್ ಪ್ರತಾಪ್ ಹಾಗೂ ಭಾಗ್ಯಶ್ರೀ ಅವರನ್ನು ಟಾರ್ಗೆಟ್ ಮಾಡಿದಂತಿದೆ. ಇಬ್ಬರ ಬಗ್ಗೆ ಅವರು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ಇದು ವೀಕ್ಷಕರಿಗೆ ಇಷ್ಟವಾಗುತ್ತಿಲ್ಲ.

ಮನೆಯ ಎಲ್ಲಾ ಕಡೆಗಳಲ್ಲಿ ಬಲೂನ್ ಇಡಲಾಗಿತ್ತು. ಕೆಲವೇ ಕೆಲವು ಬಲೂನ್​​ಗಳಲ್ಲಿ ನಾಮಿನೇಷನ್ ಚೀಟಿ ಇತ್ತು. ಮೂರು ಚೀಟಿ ಸಿಕ್ಕಿದ್ದು ಡ್ರೋನ್ ಪ್ರತಾಪ್​ಗೆ. ಇದನ್ನು ನೋಡಿ ವಿನಯ್ ಹೊಟ್ಟೆ ಉರಿದುಕೊಂಡರು. ಇನ್ನು ನಾಮಿನೇಷನ್ ಮಾಡುವಾಗ ವಿನಯ್ ಹೆಸರನ್ನು ಆಯ್ಕೆ ಮಾಡಿಕೊಂಡರು ಪ್ರತಾಪ್. ಇದು ಕೂಡ ವಿನಯ್ ಸಿಟ್ಟಿಗೆ ಕಾರಣ ಆಯ್ತು.

ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಿನಯ್ ಅವರು ಭಾಗ್ಯಶ್ರೀ ವಿರುದ್ಧ ಮೊದಲು ಸಿಟ್ಟಾದರು. ಅವರು ಕಣ್ಣೀರನ್ನು ಡ್ರಾಮಾ ಎಂದು ಕರೆದರು. ಅವರ ಮಾತುಗಳನ್ನು ಸೀರಿಯಲ್ ಡೈಲಾಗ್ ಎಂದು ಕರೆದರು. ಇದು ಭಾಗ್ಯಶ್ರೀಗೆ ಬೇಸರ ಮೂಡಿಸಿತು. ‘ನಾವಿಬ್ಬರೂ ಧಾರಾವಾಹಿಯಿಂದಲೇ ಊಟ ಮಾಡಿದ್ದೀವಿ ಅನ್ನೋದು ನೆನಪಿರಲಿ’ ಎಂದರು ಭಾಗ್ಯಶ್ರೀ. ಇದನ್ನು ಕೇಳಿದ ವಿನಯ್ ‘ನಾನು ಬೇರೆ ಕಡೆಯಿಂದಲೂ ಊಟ ಮಾಡಿದ್ದೇನೆ’ ಎಂದರು. ‘ಕಳೆದ ವಾರ ದಸರಾ ಇತ್ತು ಅದಕ್ಕೆ ಅವರು ಉಳಿದುಕೊಂಡರು’ ಎಂದು ವಿನಯ್ ಹೇಳಿದ ಮಾತು ಭಾಗ್ಯಶ್ರೀಗೆ ಸಾಕಷ್ಟು ಬೇಸರ ಮೂಡಿಸಿತು.

ಇದನ್ನೂ ಓದಿ: ನಾಮಿನೇಷನ್ ನಿಂದ ಜಗಳ, ವಿನಯ್ ಅಬ್ಬರ, ತುಕಾಲಿ, ಭಾಗ್ಯಶ್ರೀ ಕಣ್ಣೀರು, ನಮ್ರತಾ ಜಗಳ

ವಿನಯ್ ಮನೆಯಲ್ಲಿ ಆಡುತ್ತಿರುವ ಈ ರೀತಿಯ ಮಾತುಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತಿಲ್ಲ. ಕಳೆದ ವಾರ ಅವರು ಸಾಕಷ್ಟು ರೂಲ್ಸ್ ಬ್ರೇಕ್ ಮಾಡಿದ್ದರು. ಈ ವಿಚಾರದಲ್ಲಿ ವಿನಯ್ ಅವರನ್ನು ಸುದೀಪ್ ತರಾಟೆ ತೆಗೆದುಕೊಳ್ಳುತ್ತಾರೆ ಎಂದು ವೀಕ್ಷಕರು ಭಾವಿಸಿದ್ದರು. ಆದರೆ, ಆ ರೀತಿ ಆಗಲೇ ಇಲ್ಲ. ಈ ವಾರವಾದರೂ ವಿನಯ್​​ಗೆ ಕಿಚ್ಚ ಕ್ಲಾಸ್ ತೆಗೆದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:39 am, Wed, 1 November 23