ಬಿಗ್ ಬಾಸ್ ತೊರೆಯುವ ನಿರ್ಧಾರ ತೆಗೆದುಕೊಂಡ ಲಾಯರ್ ಜಗದೀಶ್

ಈ ಬಾರಿ ಸ್ವರ್ಗ ಹಾಗೂ ನರಕ ಎನ್ನುವ ವಿಭಾಗ ಮಾಡಲಾಗಿದೆ. ಏಳು ಜನರು ನರಕದಲ್ಲಿ ಇದ್ದರೆ, 10 ಜನರು ಸ್ವರ್ಗದಲ್ಲಿ ಇದ್ದಾರೆ. ಸ್ವರ್ಗವನ್ನು ಸ್ವಚ್ಛ ಮಾಡುವ ಕೆಲಸ ನರಕವಾಸಿಗಳು ಮಾಡಬೇಕು. ಇದನ್ನು ಜಗದೀಶ್ ಖಂಡಿಸಿದ್ದಾರೆ. ಟಾಸ್ಕ್ ಮುಗಿದ ಬಳಿಕ ಈ ರೀತಿ ಕೆಲಸ ಮಾಡಿಸೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

ಬಿಗ್ ಬಾಸ್ ತೊರೆಯುವ ನಿರ್ಧಾರ ತೆಗೆದುಕೊಂಡ ಲಾಯರ್ ಜಗದೀಶ್
ಜಗದೀಶ್

Updated on: Oct 03, 2024 | 7:18 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ 17 ಸ್ಪರ್ಧಿಗಳಿದ್ದಾರೆ. ಈ ಪೈಕಿ ಈ ವಾರ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಇದಕ್ಕೂ ಮೊದಲೇ ಬಿಗ್ ಬಾಸ್​ನ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಜಗದೀಶ್ ಅವರಿಗೆ ಕಪ್ ಗೆಲ್ಲಬೇಕು ಎನ್ನುವ ಯಾವುದೇ ಉದ್ದೇಶ ಇಲ್ಲ. ಈ ಬಗ್ಗೆ ಅವರು ಓಪನ್ ಆಗಿ ಹೇಳಿಕೊಂಡಿದ್ದಾರೆ. ಮಾನವೀಯತೆ ಇಲ್ಲದ ಜಾಗದಲ್ಲಿ ತಾವು ನಿಲ್ಲೋದಿಲ್ಲ ಎಂದು ಅವರು ಹೇಳಿದ್ದಾರೆ.

ಈ ಬಾರಿ ಸ್ವರ್ಗ ಹಾಗೂ ನರಕ ಎನ್ನುವ ವಿಭಾಗ ಮಾಡಲಾಗಿದೆ. ಏಳು ಜನರು ನರಕದಲ್ಲಿ ಇದ್ದರೆ, 10 ಜನರು ಸ್ವರ್ಗದಲ್ಲಿ ಇದ್ದಾರೆ. ಸ್ವರ್ಗವನ್ನು ಸ್ವಚ್ಛ ಮಾಡುವ ಕೆಲಸ ನರಕವಾಸಿಗಳು ಮಾಡಬೇಕು. ಇದನ್ನು ಜಗದೀಶ್ ಖಂಡಿಸಿದ್ದಾರೆ. ಟಾಸ್ಕ್ ಮುಗಿದ ಬಳಿಕ ಈ ರೀತಿ ಕೆಲಸ ಮಾಡಿಸೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

‘ಮಾನವೀಯತೆ ಮುಖ್ಯ. ಮಾನವೀಯತೆ ಇಲ್ಲದೆ ಹೋದಲ್ಲಿ ನಾನು ಇಲ್ಲಿ ಇರೋದಿಲ್ಲ. ಐಸ್ ಟಾಸ್ಕ್ ಆಡಿ ಬಂದ ಬಳಿಕ ಅವರ ಬಳಿ ಕೆಲಸ ಮಾಡಿಸಬೇಕು ಎಂದರೆ ಎಷ್ಟು ಸರಿ? ಅವರಿಗೆ ಸರಿಯಾದ ಊಟ ಇಲ್ಲದೆ ಶಕ್ತಿ ಬೇರೆ ಇಲ್ಲ. ಹೀಗಾಗಿ ನಾನೇ ಪಾತ್ರೆ ತೊಳೆದೆ. ತಪ್ಪಾ? ನಾನು ಈಗಲೇ ಬಿಗ್ ಬಾಸ್​ನಿಂದ ಹೊರಕ್ಕೆ ಹೋಗೋಕೂ ರೆಡಿ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಹೇಳೋದು ಆಚಾರ, ತಿನ್ನೋದು ಬದನೆಕಾಯಿ’; ಬಿಗ್ ಬಾಸ್ ಸ್ವರ್ಗವನ್ನು ನರಕ ಮಾಡಿದ ಜಗದೀಶ್

ಬಿಗ್ ಬಾಸ್​ನಲ್ಲಿ ಕಪ್ ಗೆಲ್ಲಬೇಕು ಎನ್ನುವ ಯಾವುದೇ ಉದ್ದೇಶ ಜಗದೀಶ್ ಅವರಿಗೆ ಇಲ್ಲವಂತೆ. ಇದನ್ನು ಅವರು ಒತ್ತಿ ಒತ್ತಿ ಹೇಳಿದ್ದಾರೆ. ಈ ಕಾರಣದಿಂದಲೇ ಯಾವಾಗ ಬೇಕಿದ್ದರೂ ಬಿಗ್ ಬಾಸ್ ತೊರೆಯೋದಾಗಿ ಅವರು ಹೇಳಿಕೊಂಡಿದ್ದಾರೆ. ಈ ವಾರದ ನಾಮಿನೇಷನ್​ನಲ್ಲಿ ಅವರು ಕೂಡ ಇದ್ದಾರೆ. ಅವರು ಉದ್ದೇಶ ಪೂರ್ವಕವಾಗಿ ಎಲ್ಲರನ್ನೂ ಇರಿಟೇಟ್ ಮಾಡುವ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us