‘ನಂಗೆ ಬಿಗ್ ಬಾಸ್​ನೇ ಖರೀದಿಸೋ ತಾಕತ್ತಿದೆ, ಆಗ ಕಪ್ ನಂದೇ’; ಬಡಾಯಿ ಕೊಚ್ಚಿಕೊಂಡ ಜಗದೀಶ್

|

Updated on: Oct 04, 2024 | 7:22 AM

ಕೆಎನ್ ಜಗದೀಶ್ ಕುಮಾರ್ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ತಾವು ಎಲ್ಲ ಕಡೆಗಳಲ್ಲಿ ವಕೀಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ, ಅವರ ಪರವಾನಿಗೆಯನ್ನು ದೆಹಲಿ ಬಾರ್ ಕೌನ್ಸಿಲ್ ರದ್ದು ಮಾಡಿರೋ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈಗ ಬಿಗ್ ಬಾಸ್​ನೇ ಖರೀದಿ ಮಾಡೋ ಮಾತನಾಡಿದ್ದಾರೆ.

‘ನಂಗೆ ಬಿಗ್ ಬಾಸ್​ನೇ ಖರೀದಿಸೋ ತಾಕತ್ತಿದೆ, ಆಗ ಕಪ್ ನಂದೇ’; ಬಡಾಯಿ ಕೊಚ್ಚಿಕೊಂಡ ಜಗದೀಶ್
ಬಿಗ್ ಬಾಸ್
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿ ಆಗಿರೋ ಜಗದೀಶ್ ಅವರು ಸಾಕಷ್ಟು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್​ನೇ ಎಕ್ಸ್​ಪೋಸ್ ಮಾಡ್ತೀನಿ ಎಂದಿದ್ದ ಅವರು, ಈಗ ಬಿಗ್ ಬಾಸ್​ನೇ ಖರೀದಿ ಮಾಡೋ ಮಾತನಾಡಿದ್ದಾರೆ. ಅವರು ಸುಮ್ಮನೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭರ್ಜರಿ ಚರ್ಚೆಗಳು ನಡೆಯುತ್ತಿವೆ.

ಬಿಗ್ ಬಾಸ್​ನಲ್ಲಿ ಸುಖಾ ಸುಮ್ಮನೆ ಜಗಳ ಮಾಡಿಕೊಳ್ಳುತ್ತಿದ್ದರು ಜಗದೀಶ್. ಕಂಡ ಕಂಡ ವಿಚಾರಕ್ಕೆ ಹೋಗೋದೋ ಕೆಣಕೋದು ಮಾಡುತ್ತಿದ್ದರು. ಕೇಳಿದರೆ ಅದು ತಮ್ಮ ಸ್ಟ್ರೆಟಜಿ ಎಂದಿದ್ದರು. ಇಷ್ಟೇ ಅಲ್ಲ, ಅವರು ಬಿಗ್ ಬಾಸ್​ಗೆ ಅವಮಾನ ಮಾಡಿದ್ದಾರೆ. ಆ ಬಳಿಕ ಬಿಗ್ ಬಾಸ್​ನ ಖರೀದಿ ಮಾಡುವ ಮಾತನಾಡಿದ್ದಾರೆ.

‘ಎಲ್ಲರಿಗೂ ವಿನ್ ಆಗಬೇಕು ಎಂದಿದೆ. ಅದಕ್ಕಾಗಿ ಸ್ವಾರ್ಥದ ಆಟ ಆಡುತ್ತಿದ್ದಾರೆ. ನಾನು ಬಿಗ್ ಬಾಸ್​ನ ಖರೀದಿಸಬಹುದು. ಕಪ್ ಬೇಕು ಎಂದರೆ ಬಿಗ್ ಬಾಸ್​ನೇ ಖರೀದಿಸೋ ತಾಕತ್ತು ಇದೆ. 100 ಕೋಟಿ ನಾ? ಅಷ್ಟು ಕೊಟ್ಟು ಆರಾಮಾಗಿ ಬಿಗ್ ಬಾಸ್​ನ ನನ್ನದಾಗಿಸಿಕೊಳ್ಳಬಹುದು. ಬಿಗ್ ಬಾಸ್​ಗೆ 100 ಕೋಟಿ ರೂಪಾಯಿ ಕೊಡಿ ಎಂದು ಯಾರಿಗಾದರೂ ಫೋನ್ ಮಾಡಿದರೆ ತಂದು ಕೊಡ್ತಾರೆ. ಕಪ್ ನಂದೇ ಅಲ್ವಾ?’ ಎಂದು ಜಗದೀಶ್ ಅವರು ಅನುಷಾ ರೈ ಬಳಿ ಮಾತನಾಡಿದ್ದಾರೆ.

ಈಗಾಗಲೇ ಜಗದೀಶ್ ಅವರ ವಕೀಲ ವೃತ್ತಿ ರದ್ದಾಗಿದೆ. 12ನೇ ತರಗತಿ ಅಂಕಪಟ್ಟಿ ನಕಲಿ ಅನ್ನೋದು ಗೊತ್ತಾಗಿರೋ ಕಾರಣ ಅವರ ಪದವಿಯನ್ನು ಅಮಾನ್ಯ ಎಂದು ಪರಿಗಣಿಸಲಾಗಿದೆ ಹಾಗೂ ವಕೀಲ ವೃತ್ತಿಯನ್ನು ರದ್ದು ಮಾಡಲಾಗಿದೆ. ಹೀಗಿರುವಾಗ ಅವರಿಗೆ 100 ಕೋಟಿ ರೂಪಾಯಿ ತಂದುಕೊಡೋರು ಯಾರು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ‘ಅವರಿಗೆ ಕೆಲಸ ಇಲ್ಲದ ಕಾರಣಕ್ಕೆ ಬಿಗ್ ಬಾಸ್​ಗೆ ಬಂದಿದ್ದಾರೆ’ ಎಂದು ಕೆಲವರು ಅಭಿಪ್ರಾಯಪಟ್ಟಿಕೊಂಡಿದ್ದಾರೆ.

ಇದನ್ನೂ ಓದಿ: ಜಗದೀಶ್ ವಕೀಲನೇ ಅಲ್ಲ; ಹೊರಬಿತ್ತು ಮಾಡಿದ ವಂಚನೆ ಪ್ರಕರಣ

ಸುದೀಪ್ ಏನೇ ಆದರೂ ಸಹಿಸಿಕೊಳ್ಳುತ್ತಾರೆ. ಆದರೆ, ಬಿಗ್ ಬಾಸ್​ ಬಗ್ಗೆ ಯಾರೇ ಕೆಟ್ಟದಾಗಿ ಮಾತನಾಡಿದರೂ ಅದನ್ನು ಸಹಿಸಿಕೊಳ್ಳುವುದಿಲ್ಲ. ಈಗ ಅವರು ಜಗದೀಶ್​ಗೆ ಕ್ಲಾಸ್​ ತೆಗೆದುಕೊಳ್ಳೋದು ಪಕ್ಕಾ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.