ಕಪಿಲ್​ ಶರ್ಮಾ ಶೋಗೆ ನವಜೋತ್​ ಸಿಂಗ್​ ಸಿಧು ಮರಳಿದರೆ ನಾನು ಇರಲ್ಲ ಎಂದ ಅರ್ಚನಾ ಸಿಂಗ್​

| Updated By: ಮದನ್​ ಕುಮಾರ್​

Updated on: Sep 30, 2021 | 7:18 AM

ನವಜೋತ್​ ಸಿಂಗ್​ ಸಿಧು ಅವರು ರಾಜಕೀಯದಲ್ಲಿ ಬ್ಯುಸಿ ಆದ ನಂತರ ಕಪಿಲ್​ ಶರ್ಮಾ ಶೋ ತೊರೆದಿದ್ದರು. ಆ ಸ್ಥಾನವನ್ನು ಅರ್ಚನಾ ಸಿಂಗ್​ ಅವರು ತುಂಬಿದ್ದರು. ಈಗ ನವಜೋತ್​ ಅವರು ಮತ್ತೆ ಶೋಗೆ ಮರಳಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ.

ಕಪಿಲ್​ ಶರ್ಮಾ ಶೋಗೆ ನವಜೋತ್​ ಸಿಂಗ್​ ಸಿಧು ಮರಳಿದರೆ ನಾನು ಇರಲ್ಲ ಎಂದ ಅರ್ಚನಾ ಸಿಂಗ್​
ಕಪಿಲ್​ ಶರ್ಮಾ ಶೋಗೆ ನವಜೋತ್​ ಸಿಂಗ್​ ಸಿಧು ಮರಳಲಿದರೆ ನಾನು ಇರಲ್ಲ ಎಂದ ಅರ್ಚನಾ ಸಿಂಗ್​
Follow us on

ನವಜೋತ್​ ಸಿಂಗ್​ ಸಿಧು ಅವರು ಪಂಜಾಬ್​ ಕಾಂಗ್ರೆಸ್​ ಮುಖ್ಯಸ್ಥ ಸ್ಥಾನಕ್ಕೆ ಮಂಗಳವಾರ (ಸೆ.28) ರಾಜೀನಾಮೆ ನೀಡಿದ್ದಾರೆ. ಇದು ಪಂಜಾಬ್​ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಬೆನ್ನಲ್ಲೇ ನವಜೋತ್​ ಸಿಂಗ್​ ಅವರು ಕಪಿಲ್​ ಶರ್ಮಾ ಶೋಗೆ ಮರಳಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಒಂದೊಮ್ಮೆ ಅವರು ಅತಿಥಿ ಜಡ್ಜ್​ ಆಗಿ ಮರಳಿದರೆ ತಾವು ಸ್ಥಾನ ಬಿಟ್ಟುಕೊಡೋಕೆ ರೆಡಿ ಎಂದು ನಟಿ ಅರ್ಚನಾ ಪುರಾಣ್​ ಸಿಂಗ್​ ಹೇಳಿದ್ದಾರೆ.

ನವಜೋತ್​ ಸಿಂಗ್​ ಸಿಧು ಅವರು ರಾಜಕೀಯದಲ್ಲಿ ಬ್ಯುಸಿ ಆದ ನಂತರ ಕಪಿಲ್​ ಶರ್ಮಾ ಶೋ ತೊರೆದಿದ್ದರು. ಆ ಸ್ಥಾನವನ್ನು ಅರ್ಚನಾ ಸಿಂಗ್​ ಅವರು ತುಂಬಿದ್ದರು. ಈಗ ನವಜೋತ್​ ಅವರು ಮತ್ತೆ ಶೋಗೆ ಮರಳಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಈ ಬಗ್ಗೆ ಅರ್ಚನಾ ಕೂಡ ಪೋಸ್ಟ್ ಒಂದನ್ನು ಮಾಡಿದ್ದಾರೆ. ಅವರ ಬಗ್ಗೆ ಹರಿದಾಡುತ್ತಿರುವ ನಾನಾ ಮೀಮ್​ಗಳು ಈ ಪೋಸ್ಟ್​ನಲ್ಲಿವೆ.

ಈ ಬಗ್ಗೆ ಮಾತನಾಡಿರುವ ಅರ್ಚನಾ, ‘ಸಿಧು ಅವರು ಮತ್ತು ಶೋಗೆ ಮರಳುತ್ತಾರೆ ಎಂದರೆ ನಾನು ನನ್ನ ಸ್ಥಾನ ತೊರೆಯೋಕೆ ರೆಡಿ ಇದ್ದೇನೆ. ನನಗೆ ಮಾಡೋಕೆ ಸಾಕಷ್ಟು ಕೆಲಸಗಳು ಇವೆ. ನನಗೆ ಈ ಶೋಗಾಗಿ ಎರಡು ದಿನ ಮುಡಿಪಿಡಬೇಕು. ಇದರಿಂದಾಗಿ ಬೇರೆ ಕೆಲಸಗಳನ್ನು ಒಪ್ಪಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಬೇರೆ ರಾಷ್ಟ್ರಗಳಲ್ಲಿ ಶೂಟಿಂಗ್​ಗೆ ಅವಕಾಶ ಇತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ.  ಹೀಗಾಗಿ, ನವಜೋತ್​ ಸಿಂಗ್​ ಮರಳುತ್ತಾರೆ ಎಂದರೆ ನನಗೆ ಆ ಸ್ಥಾನ ತೊರೆಯೋಕೆ ಬೇಸರವಿಲ್ಲ’ ಎಂದಿದ್ದಾರೆ.

ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ  ನವಜೋತ್ ಸಿಂಗ್ ಸಿಧು ಅವರು ತಮ್ಮ ಟ್ವಿಟರ್​​ ಹ್ಯಾಂಡಲ್‌ನಲ್ಲಿ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅವರು ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ ಸಚಿವ ಸಂಪುಟದಲ್ಲಿ ಕಳಂಕಿತ ಮತ್ತು ಇತರ ವಿವಾದಾತ್ಮಕ ಶಾಸಕರನ್ನು ಸೇರಿಸಿರುವುದನ್ನು ಟೀಕಿಸಿದ್ದಾರೆ.  ವಿಡಿಯೊ ಸಂದೇಶದಲ್ಲಿ, ಸಿಧು ಜನರ ಜೀವನವನ್ನು ಉತ್ತಮಗೊಳಿಸುವುದೊಂದೇ ತನ್ನ ಧರ್ಮ ಎಂದು ಹೇಳಿದ್ದಾರೆ.

ಇದನ್ನೂ ಓದಿ:
ಬಾಲಿವುಡ್ ನಟರಾದ ಭೂಮಿ ಪಡ್ನೇಕರ್, ಕಪಿಲ್ ಶರ್ಮಾ ಕರ್ನಾಟಕದ ನೆರವಿಗೆ ಧಾವಿಸಿದ್ದಾರೆ