
‘ಬಿಗ್ ಬಾಸ್’ ಮನೆಯಲ್ಲಿ ಬರುವ ದಿನಸಿ ವಿಚಾರ ಸಾಕಷ್ಟು ತುಂಬಾನೇ ಮುಖ್ಯವಾಗುತ್ತದೆ. ಮನೆಯಲ್ಲಿ ಸದಸ್ಯರು ಹೆಚ್ಚಿರುತ್ತಾರೆ. ಹೀಗಾಗಿ, ಬೇಕಾದಾಗ, ಬೇಕಾದಷ್ಟನ್ನು ತಿನ್ನಲು ಸಾಧ್ಯವಿಲ್ಲ. ಈ ಕಾರಣಕ್ಕೆ ಯಾವುದೇ ವಸ್ತು ಬಂದರೂ ಅದನ್ನು ಸರಿಯಾಗಿ ಬಳಕೆ ಮಾಡಬೇಕು. ಆದರೆ, ಈ ಬಾರಿಯ ಸೀಸನ್ನಲ್ಲಿ ಕಳ್ಳತನ ಶುರುವಾಗಿದೆ. ಜಾನ್ವಿ ಅವರು ಯಾರೂ ಒಪ್ಪದ ಕೆಲಸ ಮಾಡಿದರು. ಪರೋಕ್ಷವಾಗಿ ಬಿಗ್ ಬಾಸ್ ದೊಡ್ಡ ಶಿಕ್ಷೆ ನೀಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಜಾನ್ವಿ ಅವರು ಕಾಫಿ ಪುಡಿಯನ್ನು ಕದ್ದು ಇಟ್ಟುಕೊಂಡಿದ್ದರು. ಜಾನ್ವಿ ಹಾಗೂ ಟೀಂ ಹಾಲನ್ನು ಬಿಸಿ ಮಾಡಿಕೊಂಡು ಕಾಫಿ ಪೌಡರ್ ಮಿಕ್ಸ್ ಮಾಡಿ ಕುಡಿಯುತ್ತಿದ್ದರು. ಈ ವಿಚಾರ ರಿವೀಲ್ ಆಗಿದೆ. ಧನುಷ್ ಅವರಿಗೆ ಈ ವಿಷಯ ಗೊತ್ತಾಗಿದೆ. ಅವರು ಹೋಗಿ ಕ್ಯಾಪ್ಟನ್ ರಘು ಬಳಿ ಈ ವಿಚಾರ ಹೇಳಿದರು. ಆ ಕ್ಷಣಕ್ಕೆ ರಘು ಹೋಗಿ ತನಿಖೆಗೆ ಇಳಿದರು.
ಯಾರೊಬ್ಬರೂ ಕಾಫಿ ಪೌಡರ್ ಕದಿದ್ದೇನೆ ಎಂದು ಒಪ್ಪಿಕೊಳ್ಳಲು ರೆಡಿ ಇರಲೇ ಇಲ್ಲ. ಇದೇ ಸಮಯಕ್ಕೆ ಬಿಗ್ ಬಾಸ್ ಒಂದು ಶಿಕ್ಷೆ ಕೊಟ್ಟರು. ಜೈಲಿನಲ್ಲಿರುವ ವ್ಯಕ್ತಿಯ ಹೊರತಾಗಿ ಬೇರೆಯವರು (ರಕ್ಷಿತಾ) ತರಕಾರಿ ಕತ್ತರಿಸಿದ್ದರು. ಈ ಕಾರಣಕ್ಕೆ ಕಾಫಿ ಪೌಡರ್ ಎಲ್ಲವನ್ನೂ ಹಿಂದಿರುಗಿಸುವಂತೆ ಬಿಗ್ ಬಾಸ್ ಸೂಚಿಸಿದರು. ಆಗ ರಘು ಅವರು ಹೋಗಿ ಕದ್ದಿಟ್ಟ ಕಾಫಿ ಪೌಡರ್ ಕೊಡುವಂತೆ ಹೇಳಿದರು.
ಇದನ್ನೂ ಓದಿ: ಸುದೀಪ್ ಅವರನ್ನೇ ಮ್ಯಾನ್ಯುಪಲೇಷನ್ ಮಾಡಲು ಹೋದ ಜಾನ್ವಿ; ಆಮೇಲೇನಾಗುತ್ತೆ ಗೊತ್ತಲ್ಲ
ಆಗ ಜಾನ್ವಿ ಅವರು ತಾವು ಕದ್ದಿಟ್ಟ ಕಾಫಿ ಪೌಡರ್ ನೀಡಿದರು. ‘ಇಷ್ಟೆಲ್ಲ ಕದ್ದಿಟ್ಟಿದ್ರಾ’ ಎಂದು ಜಾನ್ವಿಗೆ ರಘು ಪ್ರಶ್ನೆ ಮಾಡಿದರು. ಆ ಬಳಿಕ ಜಾನ್ವಿ ಅವರು ಅಶ್ವಿನಿ, ರಾಶಿಕಾ ಮೊದಲಾದವರ ಹೆಸರನ್ನು ತೆಗೆದುಕೊಂಡರು. ನಂತರ ಹಾಲು ಕದ್ದ ವಿಚಾರವೂ ಬೆಳಕಿಗೆ ಬಂತು. ‘ಜಾನ್ವಿ ಅವರು ಎರಡು ಬಾಟಲಿ ಹಾಲನ್ನು ಕದ್ದಿದ್ದಾರೆ’ ಎಂದು ರಿಷಾ ಗೌಡ ಹೇಳಿದರು. ಇದರಿಂದ ಜಾನ್ವಿ ಉರಿದುಕೊಂಡರು. ‘ನೀವು ನಾನು ಕದ್ದ ಹಾಲಲ್ಲಿ ಕಾಫಿ ಕುಡಿದಿದ್ದೀರಿ’ ಎಂದು ನೇರವಾಗಿ ಆರೋಪಿಸಿದರು. ‘ನೀವೇ ಕೆಟ್ಟದಾಗಿ ಕಾಣ್ಸೋದು ನಾನಲ್ಲ’ ಎಂದು ಜಾನ್ವಿ ಹೇಳಿದ ಮಾತು ತುಂಬಾನೇ ಹಾಸ್ಯಾಸ್ಪದವಾಗಿ ಕಾಣಿಸಿದ್ದಂತೂ ನಿಜ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.