‘ಜೊತೆ ಜೊತೆಯಲಿ’ ಧಾರಾವಾಹಿ (Jothe Jotheyali Serial) ಪೂರ್ಣಗೊಳ್ಳಲಿದೆ ಎಂದು ಇತ್ತೀಚೆಗೆ ನಿರ್ಮಾಪಕ ಆರೂರು ಜಗದೀಶ್ ಅವರು ಘೋಷಣೆ ಮಾಡಿದ್ದರು. ಅಂತೆಯೇ ಇಂದು (ಮೇ 19) ಈ ಧಾರಾವಾಹಿ ಪೂರ್ಣಗೊಳ್ಳುತ್ತಿದೆ. ‘ಜೊತೆ ಜೊತೆಯಲಿ’ ಧಾರಾವಾಹಿ ಹ್ಯಾಪಿ ಎಂಡಿಂಗ್ ಕಂಡಿದೆ. ವಿಲನ್ ಕೇಶವ್ ಝೇಂಡೆ ಬದಲಾಗಿದ್ದಾನೆ. ಈತನಿಗೆ ಅನು ಸಿರಿಮನೆ (Anu Sirimane) ಪ್ರಾಣಭಿಕ್ಷೆ ನೀಡಿದ್ದಾಳೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜನಂದಿನಿಯನ್ನು ಕೊಂದಿದ್ದು ಝೇಂಡೆ ಎನ್ನುವ ವಿಚಾರ ರಿವೀಲ್ ಆಗಿದೆ. ಧಾರಾವಾಹಿ ಸುಖಾಂತ್ಯ ಕಂಡಿದೆ.
ಆರ್ಯವರ್ಧನ್ ಪಾತ್ರವನ್ನು ಈ ಮೊದಲು ಅನಿರುದ್ಧ ಜತ್ಕರ್ ನಿರ್ವಹಿಸುತ್ತಿದ್ದರು. ಅವರು ಧಾರಾವಾಹಿಯಿಂದ ಹೊರಹೋಗಬೇಕಾದ ಪರಿಸ್ಥಿತಿ ಬಂತು. ಇದು ಅನೇಕರಿಗೆ ಬೇಸರ ತರಿಸಿತು. ಕಥೆಗೆ ಟ್ವಿಸ್ಟ್ ನೀಡಿ ಆರ್ಯನ ಪಾತ್ರಕ್ಕೆ ಹರೀಶ್ ರಾಜ್ ಅವರನ್ನು ಕರೆತರಲಾಯಿತು. ಇತ್ತೀಚೆಗೆ ಧಾರಾವಾಹಿಯ ಟಿಆರ್ಪಿ ಕುಸಿದಿತ್ತು. ಹೀಗಾಗಿ ಧಾರಾವಾಹಿ ಕೊನೆಗೊಳಿಸಲಾಗಿದೆ.
ಆರ್ಯನ ಮೊದಲ ಪತ್ನಿ ರಾಜನಂದಿನಿಯ ಕೊಂದಿದ್ದು ಝೇಂಡೆ. ಶಾರದಾ ದೇವಿಯ ಪತಿಯನ್ನು ಕೊಂದಿದ್ದೂ ಆತನೇ. ಈ ವಿಚಾರವನ್ನು ಶಾರದಾ ದೇವಿ ರಿವೀಲ್ ಮಾಡಿದಳು. ಪ್ರಪಾತದಲ್ಲಿ ಸಿಕ್ಕಿ ಬಿದ್ದಿದ್ದ ರಾಜನಂದಿನಿ ಸಾವಿಗೆ ಝೇಂಡೆಯೇ ಕಾರಣ ಆಗಿದ್ದ. ಪ್ರಾಣ ಉಳಿಸುವ ಅವಕಾಶ ಇದ್ದರೂ ಅದನ್ನು ಕೈಚೆಲ್ಲಿದ್ದ. ಈಗ ಝೇಂಡೆಗೂ ಅದೇ ಪರಿಸ್ಥಿತಿ ಬಂದಿತ್ತು. ಆತ ಪ್ರಪಾತಕ್ಕೆ ಬೀಳುವವನಿದ್ದ. ಆದರೆ, ಝೇಂಡೆಗೆ ಅನು ಪ್ರಾಣಭಿಕ್ಷೆ ನೀಡಿದ್ದಾಳೆ. ಈ ಘಟನೆಯಿಂದ ಆತ ಬದಲಾಗಿದ್ದ. ಅನುನ ಋಣ ತೀರಿಸಲು ಝೇಂಡೆ ನಿರ್ಧರಿಸಿದ್ದಾನೆ.
ಮತ್ತೊಂದು ಕಡೆ ಆರಾಧನಾ ಮನೆ ಬಿಟ್ಟು ಹೋಗಿದ್ದಾಳೆ. ಆರ್ಯನನ್ನು ನೋಡಿದಾಗಲೆಲ್ಲ ಆಕೆಗೆ ತನ್ನ ಪತಿಯೇ (ವಿಶ್ವಾಸ್) ನೆನಪಾಗುತ್ತಿದ್ದ. ಹೀಗಾಗಿ ಪತಿಯನ್ನು ಬಿಟ್ಟುಕೊಡಲು ಅನು ಮುಂದಾಗಿದ್ದಳು. ಅದಕ್ಕೂ ಮೊದಲೇ ಆರಾಧನಾ ಮನೆ ಬಿಟ್ಟು ಹೋಗಿದ್ದಾಳೆ. ಈ ಮೂಲಕ ಅನು-ಆರ್ಯ ಮತ್ತೆ ಒಂದಾಗಿದ್ದಾರೆ. ಈ ಮೂಲಕ ಧಾರಾವಾಹಿ ಸುಖಾಂತ್ಯ ಕಂಡಿದೆ.
ಇದನ್ನೂ ಓದಿ: ಶೀಘ್ರವೇ ಪೂರ್ಣಗೊಳ್ಳಲಿದೆ ‘ಜೊತೆ ಜೊತೆಯಲಿ’ ಧಾರಾವಾಹಿ’; ಕಾರಣ ಏನು?
ಧಾರಾವಾಹಿ ಆರಂಭ ಮಾಡಿದಾಗ 1000 ಎಪಿಸೋಡ್ ಪೂರ್ಣಗೊಳಿಸಬೇಕು ಅನ್ನೋದು ತಂಡದ ಉದ್ದೇಶ ಆಗಿತ್ತು. ಆದರೆ, ಸಾಕಷ್ಟು ಏರಿಳಿತ ಉಂಟಾದ ಹಿನ್ನೆಲೆಯಲ್ಲಿ 953 ಎಪಿಸೋಡ್ಗೆ ಧಾರಾವಾಹಿ ಪೂರ್ಣಗೊಳಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ