Chethana Raj: ಚೇತನಾ ರಾಜ್ ಸಾವು ಪ್ರಕರಣ;​ ಚಿನ್ನ ಅಡವಿಟ್ಟು ಸರ್ಜರಿಗೆ ಒಳಗಾಗಿದ್ದ ಯುವ ನಟಿ​

| Updated By: shivaprasad.hs

Updated on: May 19, 2022 | 2:59 PM

Chethana Raj Death: ಸದ್ಯ ಚೇತನಾ ಅವರ ನಿಧನವನ್ನು ಅನುಮಾನಸ್ಪದ ಸಾವು ಪ್ರಕರಣ ಎಂದು ಸುಬ್ರಮಣ್ಯನಗರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ.

Chethana Raj: ಚೇತನಾ ರಾಜ್ ಸಾವು ಪ್ರಕರಣ;​ ಚಿನ್ನ ಅಡವಿಟ್ಟು ಸರ್ಜರಿಗೆ ಒಳಗಾಗಿದ್ದ ಯುವ ನಟಿ​
ಚೇತನಾ ರಾಜ್
Follow us on

ಫ್ಯಾಟ್ ಸರ್ಜರಿಗೆ ಒಳಗಾಗಿ ಸಾವನ್ನಪ್ಪಿದ ನಟಿ ಚೇತನಾ ರಾಜ್ (Chethana Raj) ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಿದೆ. ಯುವ ನಟಿಯ ಫ್ಯಾಟ್ ಸರ್ಜಿರಿ ಯೋಜನೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಈ ಕಾರಣದಿಂದ ಚಿನ್ನ ಅಡವಿಟ್ಟು ಅವರು ಸರ್ಜರಿ ಮಾಡಿಸಿಕೊಳ್ಳಲು ಮುಂದಾಗಿದ್ದರು. ತಮ್ಮ ಬಳಿಯಿದ್ದ ಚಿನ್ನ ಅಡವಿಟ್ಟು, ಅದರಿಂದ 80 ಸಾವಿರ ಪಡೆದುಕೊಂಡಿದ್ದ ಚೇತನಾರಾಜ್, ಅದೇ ಹಣವನ್ನ ಡಾ.ಶೆಟ್ಟಿ ಕಾಸ್ಮೆಟಿಕ್ಸ್ ನಲ್ಲಿ ಕಟ್ಟಿ ಫ್ಯಾಟ್ ಸರ್ಜರಿಗೆ ಒಳಗಾಗಿದ್ದರು.  ಫ್ಯಾಟ್ ಸರ್ಜರಿಗೆ ಒಳಗಾಗುವಂತೆ ಚೇತನಾ ರಾಜ್​ಗೆ ಜಿಮ್ ಟ್ರೈನರ್ ಓರ್ವರು ಸಲಹೆ ನೀಡಿದ್ದಾಗಿ ತಿಳಿದುಬಂದಿದೆ. ಈ ಬಗ್ಗೆ ಚೇತನಾರಾಜ್ ಸ್ನೇಹಿತರಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಸದ್ಯ ಚೇತನಾ ಅವರ ನಿಧನವನ್ನು ಅನುಮಾನಸ್ಪದ ಸಾವು ಪ್ರಕರಣ ಎಂದು ಸುಬ್ರಮಣ್ಯನಗರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ.

ಇತ್ತ ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿಯಿಂದ ಡಾ.ಶೆಟ್ಟಿ ಕಾಸ್ಮೆಟಿಕ್ ಸೆಂಟರ್​ಗೆ ನೊಟೀಸ್ ನೀಡಲಾಗಿದ್ದು, ಸಾವಿಗೆ ಸಂಬಂಧಿಸಿದಂತೆ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗಲು ತಿಳಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ. ಸರ್ಜರಿ ನಡೆಸಿದ್ದ ಆಸ್ಪತ್ರೆಗೆ ಫ್ಯಾಟ್​ ಸರ್ಜರಿ ನಡೆಸಲು ಅನುಮತಿ ಇರಲಿಲ್ಲ ಎಂಬ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: ನಟಿ ಚೇತನಾ ರಾಜ್​ಗೆ ಕಾಸ್ಮೆಟಿಕ್​ ಸರ್ಜರಿ ನಡೆಸಿದ್ದ ಆಸ್ಪತ್ರೆಗೆ ಬೀಗ; ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಆದೇಶ

ಇದನ್ನೂ ಓದಿ
Madonna Sebastian: ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಕೇರಳ ಮೂಲದ ಮಡೋನ್ನ ಸೆಬಾಸ್ಟಿಯನ್; ‘ಕೋಟಿಗೊಬ್ಬ 3’ ನಟಿಯ ಕುತೂಹಲಕರ ವಿಚಾರಗಳು ಇಲ್ಲಿವೆ
Chethana Raj: ನಟಿ ಚೇತನಾ ರಾಜ್​ಗೆ ಕಾಸ್ಮೆಟಿಕ್​ ಸರ್ಜರಿ ನಡೆಸಿದ್ದ ಆಸ್ಪತ್ರೆಗೆ ಬೀಗ; ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಆದೇಶ
ಮಲೈಕಾ- ಅರ್ಜುನ್ ಮದುವೆಯ ಬಗ್ಗೆ ಜೋರಾಯ್ತು ಗಾಸಿಪ್; ರೂಮರ್​ಗಳಿಗೆ ನಟ ನೀಡಿದ ಉತ್ತರವೇನು?
Chethana Raj: ವೈದ್ಯರ ನಿರ್ಲಕ್ಷ್ಯದಿಂದಲೇ ಚೇತನಾ ರಾಜ್ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ ನಟಿಯ ತಂದೆ; ಯುಡಿಆರ್ ಪ್ರತಿ TV9​ಗೆ ಲಭ್ಯ

ಪುತ್ರಿಯ ನಿಧನದ ಬಗ್ಗೆ ಟಿವಿ9 ಜತೆ ಹಲವು ಮಾಹಿತಿ ತೆರೆದಿಟ್ಟ ಚೇತನಾ ತಂದೆ ವರದರಾಜ್:

ಚೇತನಾ ರಾಜ್ ತಂದೆ ವರದರಾಜ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಗ್ರಾಮ ಬೀರಯ್ಯನಪಾಳ್ಯದಲ್ಲಿ ಮಾತನಾಡಿ ಪುತ್ರಿಯ ನಿಧನದ ಬಗ್ಗೆ ಹಲವು ಮಾಹಿತಿ ಹಂಚಿಕೊಂಡಿದ್ದಾರೆ. ‘‘ಚೇತನಾಗೆ ನಿರ್ದೇಶಕರೋರ್ವರು ಸಣ್ಣ ಆಗಬೇಕು ಎಂದಿದ್ದರಂತೆ. ಆದರೆ ಯಾವ ಡೈರೆಕ್ಟರ್ ಹಾಗೆ ಹೇಳಿದ್ದಾರೆಂದು ಕೇಳಿಲ್ಲ’’ ಎಂದಿರುವ ವರದರಾಜ್, ‘‘ಲೇಟ್ ಆಗುತ್ತದೆಂದು ಪಿಜಿಯಲ್ಲಿ ಇದ್ದುಕೊಂಡು ಸಮಯಕ್ಕೆ ಸರಿಯಾಗಿ ಶೂಟಿಂಗ್ ತೆರಳುತ್ತಿದ್ದಳು. ಅಬ್ಬಿಗೆರೆಯಿಂದ ಬಸ್​ನಲ್ಲಿ ಓಡಾಲು ತುಂಬಾ ಕಷ್ಟ ಆಗುತ್ತಿತ್ತು. ಹಾಗಾಗಿ ಪಿಜಿಯಲ್ಲಿ ಇದ್ದಳು’’ ಎಂದಿದ್ದಾರೆ.

‘‘9 ಗಂಟೆಗೆ ಸರ್ಜರಿಗೆ ಒಳ ಹೋದವಳು ಆಚೆ ಬರಲೇ ಇಲ್ಲ. ಅಮ್ಮ ಬಂದರೆ ಒಳಗೆ ಕಳಿಸಿ ಅಂದರೂ ಮುಖ ನೋಡಲು ಬಿಡಲಿಲ್ಲ. ನಮ್ಮಿಂದ ಸಾಕಷ್ಟು ಮೆಡಿಸಿನ್ ತರಿಸಿದ್ದರು. ಆದರೆ ಏನಾಗಿದೆ ಎಂದು ಕೇಳಿದರೂ ತಿಳಿಸಲಿಲ್ಲ. ಐದು ನಿಮಿಷ, ಐದು ನಿಮಿಷ ಅಂತಿದ್ದರು. ಆದರೆ ಅವರ ಬಳಿ ICU ಇಲ್ಲ. ಸರ್ಜರಿ ವೇಳೆಯೇ ಮಗಳ ಪ್ರಾಣ ಹೋಗಿತ್ತು. ಅಸ್ಪತ್ರೆಗೆ ಕೆಟ್ಟ ಹೆಸರು ಬರುತ್ತೆ ಅಂತಲೋ ಏನೋ ಮಗಳನ್ನು ಅಲ್ಲಿಂದ ಶಿಫ್ಟ್​​ ಮಾಡಿದ್ದರು. ಅವರನ್ನ ಸುಮ್ಮನೆ ಬಿಡಬಾರದು. ಕ್ರಮ ಆಗಲೇ ಬೇಕು’’ ಎಂದು ವರದರಾಜ್ ಒತ್ತಾಯಿಸಿದ್ದಾರೆ.

ಆಸ್ಪತ್ರೆಗೆ ನೀಡಿದ ಹಣದ ಬಗ್ಗೆ ಮಾಹಿತಿ ನೀಡಿರುವ ಅವರು, ‘‘ಮೊದಲೇ ಬುಕ್ಕಿಂಗ್​ಗೆ 10,000 ರೂ ಹಣ ಕಟ್ಟಲಾಗಿತ್ತು. ಒಂದು ಲಕ್ಷದ ಮೊವತ್ತು ಸಾವಿರ ಹಣ ಪೂರ್ತಿ ಕಟ್ಟಿದ ಮೇಲೆ ಸರ್ಜರಿಗೆ ಕರಕೊಂಡು ಹೋದರು. ದೊಡ್ಡ ನಟಿ ಆಗುತ್ತಾಳೆ ಅಂದುಕೊಂಡಿದ್ದೆವು. ಚೆನ್ನಾಗಿದ್ದಿ; ಸರ್ಜರಿ ಬೇಡ ಎಂದೂ ಹೇಳಿದ್ದೆವು. ಆದರೆ ಯಾರ ಮಾತು ಕೇಳದೇ ಮೃತಪಟ್ಟಳು’’ ಎಂದು ನೋವು ತೋಡಿಕೊಂಡಿದ್ದಾರೆ.

ಈಗಾಗಲೇ ಮೂರು ಸಿನಿಮಾಗೆ ಅಗ್ರಿಮೆಂಟ್ ಕೂಡ ಆಗಿತ್ತು ಎಂದು ಮಾಹಿತಿ ನೀಡಿರುವ ನಟಿಯ ತಂದೆ, ‘‘ಜೂನ್ 26ರಂದು ಬರ್ತಡೆಗೆ ಈಗಾಗಲೇ ಸಿದ್ದತೆ ನಡೆದಿತ್ತು. ನಾನು ಚೇತನಾರನ್ನ ಜೊತೆಯಲ್ಲೇ ಕರೆದುಕೊಂಡು ಹೋಗಿ ಮಲ್ಲೇಶ್ವರಂನಲ್ಲಿ ಬಾರ್ಬೀ ಡ್ರೆಸ್ ಖರೀದಿ ಮಾಡಿದ್ದೆ. ಅದೇ ಡ್ರೆಸ್ ಮಗಳ ಶವದ ಮೇಲೆ ಹಾಕಿ ಮಣ್ಣು ಮಾಡಿದೆ. ಎಂತ ದುರಂತ ನಮ್ಮದು’’ ಎಂದು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: ಫ್ಯಾಟ್​ ಸರ್ಜರಿಯಿಂದ ಅಪಾಯವಿದೆಯಾ?; ಯಾವೆಲ್ಲ ದೇಶಗಳಲ್ಲಿ ಕಾಸ್ಮೆಟಿಕ್ ಸರ್ಜರಿಗೆ ನಿಷೇಧ?

ಇಂತಹ ಸರ್ಜರಿ ಮಾಡಿಸಿಕೊಳ್ಳಲು ಮುಂದಾಗಬೇಡಿ ಎಂದು ಸಲಹೆ ನೀಡಿರುವ ವರದರಾಜ್, ಒಂದು ವೇಳೆ ಸರ್ಜರಿಗೆ ಒಳಗಾಗುವುದಿದ್ದರೂ ಆಸ್ಪತ್ರೆ, ಸಲಕರಣೆ, ಐಸಿಯು ಮೊದಲಾದವುಗಳನ್ನು ಗಮನಿಸಿ ಎಂದಿದ್ದಾರೆ. ‘‘ದಪ್ಪ ಇದ್ದೀರಿ ಎಂದರೆ ಅವಕಾಶವನ್ನು ಬಿಟ್ಟುಬಿಡಿ. ಹೊಸ ಅವಕಾಶಗಳು ಸಿಗುತ್ತವೆ’’ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ