‘ಸೀತಾ ರಾಮ’ ಟಿಆರ್​ಪಿಯಲ್ಲಿ ಭರ್ಜರಿ ಏರಿಕೆ; ಉಳಿದ ಧಾರಾವಾಹಿಗಳ ಕಥೆ ಏನು?

|

Updated on: Jul 11, 2024 | 2:52 PM

‘ಸೀತಾ ರಾಮ’ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಮದುವೆ ಕಾರಣಕ್ಕೆ ಹೆಚ್ಚಿನ ಟಿಆರ್​ಪಿ ಪಡೆದುಕೊಂಡಿದೆ. ‘ಸೀತಾ ರಾಮ’ ಧಾರಾವಾಹಿಗೆ ಈ ಮೊದಲಿಗಿಂತಲೂ ಹೆಚ್ಚಿನ ಟಿಆರ್​ಪಿ ಸಿಕ್ಕಿದೆ ಅನ್ನೋದು ವಿಶೇಷ. ಸೀತಾ ಹಾಗೂ ರಾಮನ ಮದುವೆ ಸಂಭ್ರಮವೇ ಇದಕ್ಕೆ ಕಾರಣ ಎಂದರೂ ತಪ್ಪಾಗಲಾರದು.

‘ಸೀತಾ ರಾಮ’ ಟಿಆರ್​ಪಿಯಲ್ಲಿ ಭರ್ಜರಿ ಏರಿಕೆ; ಉಳಿದ ಧಾರಾವಾಹಿಗಳ ಕಥೆ ಏನು?
ಸೀತಾ-ರಾಮ
Follow us on

‘ಸೀತಾ ರಾಮ’ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳಾದ ಸೀತಾ ಹಾಗೂ ರಾಮ್​ ಮದುವೆ ನೆರವೇರುತ್ತಿದೆ. ಇದಕ್ಕಾಗಿ ಭರ್ಜರಿ ಸೆಟ್ ಹಾಕಲಾಗಿದೆ. ಅದ್ದೂರಿ ಮದುವೆ ಸಮಾರಂಭಕ್ಕೆ ಇಡೀ ಕರ್ನಾಟಕ ಸಾಕ್ಷಿ ಆಗುತ್ತಿದೆ. ಈ ಕಾರಣದಿಂದಲೇ ಧಾರಾವಾಹಿ ಟಿಆರ್​ಪಿಯಲ್ಲಿ ಭರ್ಜರಿಯಾಗಿ ಏರಿಕೆ ಕಂಡಿದೆ. ಉಳಿದ ಧಾರಾವಾಹಿಗಳ ಟಿಆರ್​ಪಿಯಲ್ಲೂ ಸಾಕಷ್ಟು ಏರಿಳಿತ ಕಾಣಿಸಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಕಳೆದ ಕೆಲ ವಾರಗಳಿಂದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಳ್ಳುತ್ತಾ ಬರುತ್ತಿತ್ತು. ಈಗ 27ನೇ ವಾರದ ಟಿಆರ್​ಪಿಯಲ್ಲಿ ‘ಪುಟ್ಟಕನ ಮಕ್ಕಳು’ ಹಾಗೂ ‘ಲಕ್ಷ್ಮಿ ನಿವಾಸ’ ಧಾರಾವಾಹಿ ಸರಿ ಸಮಾನವಾದ ಟಿಆರ್​ಪಿ ಪಡೆದುಕೊಂಡಿವೆ. ಈ ಮೂಲಕ ಎರಡೂ ಧಾರಾವಾಹಿಗೆ ಮೊದಲ ಸ್ಥಾಮ ಸಿಕ್ಕಿದೆ. ‘ಲಕ್ಷ್ಮಿ ನಿವಾಸ’ದಲ್ಲಿ ಕಥಾ ನಾಯಕಿ ಭಾವನಾಗೆ ಸಿದ್ದು ತಾಳಿ ಕಟ್ಟಿ ಹೋಗಿದ್ದಾನೆ. ಈ ಮೂಲಕ ಕಥೆ ಪ್ರಮುಖ ಟ್ವಿಸ್ಟ್ ಪಡೆದು ಸಾಗುತ್ತಿದೆ. ಇದರಿಂದ ಜನರು ಧಾರಾವಾಹಿಯನ್ನು ಹೆಚ್ಚು ವೀಕ್ಷಿಸುತ್ತಿದ್ದಾರೆ.

ಎರಡನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ಈ ಧಾರಾವಾಹಿ ಮದುವೆ ಕಾರಣಕ್ಕೆ ಹೆಚ್ಚಿನ ಟಿಆರ್​ಪಿ ಪಡೆದುಕೊಂಡಿದೆ. ಈ ಮೊದಲಿಗಿಂತಲೂ ‘ಸೀತಾ ರಾಮ’ ಧಾರಾವಾಹಿಗೆ ಹೆಚ್ಚಿನ ಟಿಆರ್​ಪಿ ಸಿಕ್ಕಿದೆ ಅನ್ನೋದು ವಿಶೇಷ. ಸೀತಾ ಹಾಗೂ ರಾಮನ ಮದುವೆ ಸಂಭ್ರಮವೇ ಇದಕ್ಕೆ ಕಾರಣ ಎಂದರೂ ತಪ್ಪಾಗಲಾರದು. ಮೂರನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ.

ಇದನ್ನೂ ಓದಿ: ಧಾರಾವಾಹಿಗಳ ಟಿಆರ್​ಪಿ; ಟಾಪ್​ 10 ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಧಾರಾವಾಹಿ ಇದೆಯೇ ನೋಡಿ

ನಾಲ್ಕನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಮದುವೆ ಬಳಿಕ ಗೌತಮ್ ಹಾಗೂ ಭೂಮಿಕಾ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯುತ್ತಿದೆ. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಇದು ಧಾರಾವಾಹಿಯಲ್ಲಿ ಹೈಲೈಟ್ ಆಗುತ್ತಿದೆ. ಐದನೇ ಸ್ಥಾನದಲ್ಲಿ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಹಾಗೂ ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಗಳು ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:42 pm, Thu, 11 July 24