Kannada Serial TRP: ಟಿಆರ್​ಪಿ ರೇಸ್: ಟಾಪ್​​ನಲ್ಲಿರೋ ಹತ್ತು ಧಾರಾವಾಹಿಗಳ ಬಗ್ಗೆ ಇಲ್ಲಿದೆ ಮಾಹಿತಿ

|

Updated on: May 05, 2023 | 3:16 PM

ಜೀ ಕನ್ನಡದ 3 ಧಾರಾವಾಹಿ ಹಾಗೂ ಕಲರ್ಸ್​ ಕನ್ನಡದ ಎರಡು ಧಾರಾವಾಹಿ ಟಾಪ್ ಐದರಲ್ಲಿ ಇದೆ. ಆ ಬಗ್ಗೆ ಇಲ್ಲಿದೆ ವಿವರ.

Kannada Serial TRP: ಟಿಆರ್​ಪಿ ರೇಸ್: ಟಾಪ್​​ನಲ್ಲಿರೋ ಹತ್ತು ಧಾರಾವಾಹಿಗಳ ಬಗ್ಗೆ ಇಲ್ಲಿದೆ ಮಾಹಿತಿ
ಕನ್ನಡ ಸೀರಿಯಲ್ ಟಿಆರ್​ಪಿ
Follow us on

ಇದು ಟಿಆರ್​ಪಿ ಯುಗ. ಯಾವುದೇ ಧಾರಾವಾಹಿಯ ಜನಪ್ರಿಯತೆ ಅಳೆಯಬೇಕು ಎಂದರೆ ಅದಕ್ಕೆ ಮಾನದಂಡವಾಗಿ ಬಳಕೆ ಆಗೋದು ಟಿಆರ್​ಪಿ. ಕನ್ನಡ ಸೀರಿಯಲ್ ಟಿಆರ್​ಪಿ ಪಟ್ಟಿ ಬಿಡುಗಡೆ ಆಗಿದೆ. ಸೋಮವಾರದಿಂದ ಭಾನುವಾರದವರೆಗಿನ (ಏಪ್ರಿಲ್ 22-28) ಅವಧಿಯಲ್ಲಿ ಹಲವು ಧಾರಾವಾಹಿಗಳು ಟಿಆರ್​ಪಿ ಲಿಸ್ಟ್​ನಲ್ಲಿ ಸ್ಥಾನ ಪಡೆದಿವೆ.   ಜೀ ಕನ್ನಡದ 3 ಧಾರಾವಾಹಿ ಹಾಗೂ ಕಲರ್ಸ್​ ಕನ್ನಡದ (Colors Kannada) ಎರಡು ಧಾರಾವಾಹಿ ಟಾಪ್ ಐದರಲ್ಲಿ ಇದೆ. ಆ ಬಗ್ಗೆ ಇಲ್ಲಿದೆ ವಿವರ.

ಪುಟ್ಟಕ್ಕನ ಮಕ್ಕಳು:

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಟಿಆರ್​ಪಿ ರೇಸ್​ನಲ್ಲಿ ಮೊದಲ ಸ್ಥಾನದಲ್ಲಿದೆ. ಈ ಧಾರಾವಾಹಿಗೆ ದೊಡ್ಡ ವೀಕ್ಷಕರ ವರ್ಗ ಇದೆ. ಹಿರಿಯ ನಟಿ ಉಮಾಶ್ರೀ ಅವರು ಎಲ್ಲರ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಈ ಧಾರಾವಾಹಿ ಜನರಿಗೆ ಇಷ್ಟವಾಗಿದೆ ಅನ್ನೋದಕ್ಕೆ ಟಿಆರ್​ಪಿಯಲ್ಲಿ ಈ ಧಾರಾವಾಹಿ ಮೊದಲಿರುವುದೇ ಸಾಕ್ಷಿ.

ಗಟ್ಟಿಮೇಳ:

ಗಟ್ಟಿಮೇಳ ಧಾರಾವಾಹಿ ಎರಡನೇ ಸ್ಥಾನದಲ್ಲಿದೆ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಈ ಧಾರಾವಾಹಿ ಜನಮನ್ನಣೆ ಪಡೆದಿದೆ. ಈಗಾಗಲೇ ಧಾರಾವಾಹಿ 1000+ ಎಪಿಸೋಡ್ ಪೂರೈಸಿದೆ. ಆದಾಗ್ಯೂ ಧಾರಾವಾಹಿ ಟಿಆರ್​ಪಿ ಕಳೆದುಕೊಂಡಿಲ್ಲ. ವೀಕ್ಷಕರಿಗೆ ಇಷ್ಟ ಆಗುವ ರೀತಿಯಲ್ಲಿ ಕಥೆಯನ್ನು ತೆಗೆದುಕೊಂಡು ಹೋಗಲಾಗುತ್ತಿದೆ.

ಲಕ್ಷ್ಮೀ ಬಾರಮ್ಮ:

ಕಲರ್ಸ್ ಕನ್ನಡದ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಜನಮನ್ನಣೆ ಪಡೆದಿದೆ. ಈ ಧಾರಾವಾಹಿಯನ್ನು ಜನರು ಇಷ್ಟಪಡುತ್ತಿದ್ದಾರೆ. ಟಾಪ್ ಐದರಲ್ಲಿ ಈ ಧಾರಾವಾಹಿಗೆ ಮೂರನೇ ಸ್ಥಾನ ಇದೆ.

‘ಭಾಗ್ಯ ಲಕ್ಷ್ಮೀ’

‘ಭಾಗ್ಯ ಲಕ್ಷ್ಮೀ’ ಧಾರಾವಾಹಿ ಕೂಡ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ. ಈ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಪಡೆದಿದೆ. ಈ ಧಾರಾವಾಹಿ ನಾಲ್ಕನೇ ಸ್ಥಾನದಲ್ಲಿದೆ.

ಶ್ರೀರಸ್ತು ಶುಭಮಸ್ತು

ಸುಧಾರಾಣಿ ಅವರು ಹಿರಿತೆರೆಯಲ್ಲಿ ಹೆಚ್ಚು ಗುರುತಿಸಿಕೊಂಡವರು. ಅವರು ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಮೂಲಕ ಗಮನ ಸೆಳೆಯುತ್ತಿದ್ದಾರೆ. ತುಳಸಿ ಹೆಸರಿನ ಪಾತ್ರವನ್ನು ಅವರು ಮಾಡಿದ್ದಾರೆ. ಮಾಧವ್ ಆಗಿ ಅಜಿತ್ ಹಂದೆ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಐದನೇ ಸ್ಥಾನದಲ್ಲಿದೆ. ಕಳೆದ ವಾರ ಈ ಧಾರಾವಾಹಿ ಮೂರನೇ ಸ್ಥಾನದಲ್ಲಿತ್ತು.

ಉಳಿದ ಸ್ಥಾನ..

ಆರನೇ ಸ್ಥಾನದಲ್ಲಿ ‘ಸತ್ಯ’, ಏಳನೇ ಸ್ಥಾನದಲ್ಲಿ ‘ತ್ರಿನಯನಿ’, ಎಂಟನೇ ಸ್ಥಾನದಲ್ಲಿ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’, ಒಂಭತ್ತು ಹಾಗೂ ಹತ್ತನೇ ಸ್ಥಾನದಲ್ಲಿ ‘ಹಿಟ್ಲರ್ ಕಲ್ಯಾಣ’ ಹಾಗೂ ‘ಪುನರ್ ​ವಿವಾಹ’ ಧಾರಾವಾಹಿಗಳು ಇವೆ.

Published On - 2:13 pm, Fri, 5 May 23