ಸಖತ್ ಟಿಆರ್​ಪಿ ಪಡೆದ ‘ಪುಟ್ಟಕ್ಕನ ಮಕ್ಕಳು’; ಮೂರು ಧಾರಾವಾಹಿಗೆ ಒಂದೇ ಸ್ಥಾನ, ಇಲ್ಲಿದೆ ವಿವರ

Kannada TV Serials TRP: ಟಿಆರ್​ಪಿ ರೇಸ್​ನಲ್ಲಿ ಯಾವ ಧಾರಾವಾಹಿಗೆ ಯಾವ ಸ್ಥಾನ? ನಾಲ್ಕನೇ ಸ್ಥಾನದಲ್ಲಿ ಇರುವ ಮೂರು ಧಾರಾವಾಹಿಗಳು ಯಾವವು? ಆ ಬಗ್ಗೆ ಇಲ್ಲಿದೆ ವಿವರ.

ಸಖತ್ ಟಿಆರ್​ಪಿ ಪಡೆದ ‘ಪುಟ್ಟಕ್ಕನ ಮಕ್ಕಳು’; ಮೂರು ಧಾರಾವಾಹಿಗೆ ಒಂದೇ ಸ್ಥಾನ, ಇಲ್ಲಿದೆ ವಿವರ
ಕನ್ನಡ ಸೀರಿಯಲ್ ಟಿಆರ್​ಪಿ
Follow us
| Updated By: Digi Tech Desk

Updated on:Jun 01, 2023 | 2:03 PM

ಟಿಆರ್​ಪಿ (Serial TRP) ರೇಸ್​ನಲ್ಲಿ ಏರಿಳಿತಗಳು ಸಾಮಾನ್ಯ. ಈ ವಾರ ಟಾಪ್​ನಲ್ಲಿದ್ದ ಸೀರಿಯಲ್ ಮುಂದಿನವಾರ ಕೆಳಕ್ಕೆ ಕುಸಿಯಬಹುದು. ಇದು ನಿರಂತರ. ಈಗ ಕಳೆದವಾರದ (ಮೇ 19-25) ಧಾರಾವಾಹಿ ಟಿಆರ್​ಪಿ ಲಿಸ್ಟ್ ಹೊರಬಿದ್ದಿದೆ. ಈ ಪೈಕಿ ಉಮಾಶ್ರೀ ನಟನೆಯ ‘ಪುಟ್ಟಕ್ಕನ ಮಕ್ಕಳು’ (Puttakkana Makkalu) ಧಾರಾವಾಹಿ ಟಾಪ್ ಸ್ಥಾನ ಕಾಯ್ದುಕೊಂಡಿದೆ. ನಾಲ್ಕನೇ ಸ್ಥಾನದಲ್ಲಿ ಮೂರು ಧಾರಾವಾಹಿಗಳು ಇವೆ. ಹಾಗಾದರೆ, ಯಾವ ಧಾರಾವಾಹಿಗೆ ಯಾವ ಸ್ಥಾನ? ನಾಲ್ಕನೇ ಸ್ಥಾನದಲ್ಲಿ ಇರುವ ಮೂರು ಧಾರಾವಾಹಿಗಳು ಯಾವವು? ಆ ಬಗ್ಗೆ ಇಲ್ಲಿದೆ ವಿವರ.

ಪುಟ್ಟಕ್ಕನ ಮಕ್ಕಳು

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ಮೊದಲ ಸ್ಥಾನದಲ್ಲಿದೆ. ಸಾಮಾನ್ಯಕ್ಕಿಂತ ಹೆಚ್ಚಿನ ಟಿಆರ್​ಪಿಯನ್ನು ಇದು ಪಡೆದಿದೆ. ಉಮಾಶ್ರೀ ಅವರು ನಟನೆ ಮೂಲಕ ಗಮನ ಸೆಳೆದಿದ್ದಾರೆ. ಅವರ ಪಾತ್ರ ವೀಕ್ಷಕರಿಗೆ ಇಷ್ಟವಾಗಿದೆ. ಹೀಗಾಗಿ, ಈ ಧಾರಾವಾಹಿ ಮೊದಲ ಸ್ಥಾನದಲ್ಲಿದೆ.

ಗಟ್ಟಿಮೇಳ

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಗಟ್ಟಿಮೇಳ’ ಧಾರಾವಾಹಿ ಟಿಆರ್​ಪಿ ರೇಸ್​ನಲ್ಲಿ ಎರಡನೇ ಸ್ಥಾನದಲ್ಲಿದೆ. ಸಾವಿರ ಎಪಿಸೋಡ್ ಮುಗಿಸಿದ ಬಳಿಕವೂ ಧಾರಾವಾಹಿಗೆ ಬೇಡಿಕೆ ಕಡಿಮೆ ಆಗಿಲ್ಲ. ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. ರಕ್ಷಿತ್ ವೇದಾಂತ್ ಆಗಿ ಗಮನ ಸೆಳೆದರೆ ನಿಶಾ ಅಮೂಲ್ಯ ಹೆಸರಿನ ಪಾತ್ರ ಮಾಡುತ್ತಿದ್ದಾರೆ.

ಭಾಗ್ಯ ಲಕ್ಷ್ಮೀ

‘ಭಾಗ್ಯ ಲಕ್ಷ್ಮೀ’ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಭೂಮಿಕಾ ರಮೇಶ್, ಸುಷ್ಮಾ ಕೆ. ರಾವ್, ಸುದರ್ಶನ್ ರಂಗಪ್ರಸಾದ್ ಮೊದಲಾದವರು ಈ ಧಾರಾವಾಹಿಯಲ್ಲಿದ್ದಾರೆ. ಕಳೆದ ವಾರವೂ ಈ ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿತ್ತು.

ಇದನ್ನೂ ಓದಿ: ‘ಅಮೃತಧಾರೆ’ ಧಾರಾವಾಹಿ: ಇಲ್ಲಿ ನಾಯಕ-ನಾಯಕಿ ಪಡುತ್ತಿರುವ ಕಷ್ಟಗಳು ಒಂದೇ

ನಾಲ್ಕನೇ ಸ್ಥಾನದಲ್ಲಿ ಮೂರು ಸೀರಿಯಲ್

ನಾಲ್ಕನೇ ಸ್ಥಾನದಲ್ಲಿ ಜೀ ಕನ್ನಡ ವಾಹಿನಿಯ ‘ಸತ್ಯ’, ಕಲರ್ಸ್ ಕನ್ನಡದ ‘ಲಕ್ಷ್ಮೀ ಬಾರಮ್ಮ’, ಜೀ ಕನ್ನಡದ ‘ಶ್ರೀರಸ್ತು ಶುಭಮಸ್ತು’ ಇದೆ.

ತ್ರಿನಯನಿ

ಐದನೇ ಸ್ಥಾನದಲ್ಲಿ ಜೀ ಕನ್ನಡ ವಾಹಿನಿಯ ‘ತ್ರಿನಯನಿ’ ಧಾರಾವಾಹಿ ಇದೆ. ಮೂರು ಧಾರಾವಾಹಿಗಳಿಗೆ ಒಂದೇ ಸ್ಥಾನ ಸಿಕ್ಕಿದ್ದರಿಂದ ಈ ಧಾರಾವಾಹಿಗೆ ಐದನೇ ಸ್ಥಾನ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ ಇದನ್ನೂ ಓದಿ:

Published On - 12:54 pm, Thu, 1 June 23

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್