25ನೇ ವಾರದ ಟಿಆರ್ಪಿ ಬಂದಿದೆ. ಟಿಆರ್ಪಿಯಲ್ಲಿ (TRP) ಏರಿಳಿತ ಆಗುತ್ತಲೇ ಇರುತ್ತದೆ. ಅದೇ ರೀತಿ ಟಿಆರ್ಪಿ ವಿವರ ಸಿಕ್ಕಿದೆ. ಈ ಪೈಕಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನ ಪಡೆದಿದೆ. ಈ ಧಾರಾವಾಹಿ ಬೆಂಗಳೂರು ನಗರ ಹಾಗೂ ರಾಜ್ಯದಲ್ಲಿ ಮೊದಲ ಸ್ಥಾನ ಕಾಪಾಡಿಕೊಂಡಿದೆ. ಕಳೆದ ಕೆಲ ವಾರಗಳಿಂದ ಈ ಧಾರಾವಾಹಿ ಮೊದಲ ಸ್ಥಾನದಲ್ಲಿ ಮುಂದುವರಿಯುತ್ತಿದೆ.
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಉಮಾಶ್ರೀ, ಸಂಜನಾ ಬುರ್ಲಿ ಮೊದಲಾದವರು ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಉಮಾಶ್ರೀ ಮೊದಲಾದವರ ನಟನೆ ಗಮನ ಸೆಳೆದಿದೆ. ಈ ಧಾರಾವಾಹಿ ಕಳೆದ ಕೆಲವು ವಾರಗಳಿಂದ ಮೊದಲ ಸ್ಥಾನ ಕಾಪಾಡಿಕೊಂಡು ಬರುತ್ತಿದೆ. ‘ಲಕ್ಷ್ಮೀ ನಿವಾಸ’ ಧಾರಾವಾಹಿ ಎರಡನೇ ಸ್ಥಾನ ಪಡೆದಿದೆ. ಕೂಡು ಕುಟುಂಬದ ಕಥೆಯನ್ನು ಈ ಧಾರಾವಾಹಿ ಹೊಂದಿದೆ. ಈ ಧಾರಾವಾಹಿಗೆ ಭರ್ಜರಿ ಟಿಆರ್ಪಿ ಸಿಕ್ಕಿದೆ. ಈ ಧಾರಾವಾಹಿ ಕಳೆದ ವಾರಗಳ ಕಾಲ ಮೊದಲ ಸ್ಥಾನದಲ್ಲಿ ಇತ್ತು.
ಮೂರನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಇದು ಹೊಸ ಧಾರಾವಾಹಿ. ಈ ಧಾರಾವಾಹಿಗೆ ಭರ್ಜರಿ ಟಿಆಆರ್ಪಿ ಸಿಕ್ಕಿದೆ. ಈ ಧಾರಾವಾಹಿ ಟಿಆಆರ್ಪಿಯಲ್ಲಿ ಮೂರನೇ ಸ್ಥಾನದಲ್ಲಿ ಪಡೆದಿದೆ. ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ಈ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ ಹಾಗೂ ವೈಷ್ಣವಿ ಗೌಡ ನಟಿಸಿದ್ದಾರೆ.
ಇದನ್ನೂ ಓದಿ: ಎರಡಂಕಿ ಸಮೀಪಿಸಿತು ಈ ಧಾರಾವಾಹಿಯ ಟಿಆರ್ಪಿ; ‘ನಿನಗಾಗಿ’ ಸೀರಿಯಲ್ಗೆ ಎಷ್ಟನೇ ಸ್ಥಾನ?
ಐದನೇ ಸ್ಥಾನದಲ್ಲಿ ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿ ಇದೆ. ಟಾಪ್ ಐದರಲ್ಲಿ ಸ್ಥಾನ ಪಡೆದ ಕಲರ್ಸ್ ಕನ್ನಡದ ಏಕೈಕ ಧಾರಾವಾಹಿ ಎಂದರೆ ಅದು ‘ಲಕ್ಷ್ಮಿ ಬಾರಮ್ಮ’ ಅನ್ನೋದು ವಿಶೇಷ. ಆರನೇ ಸ್ಥಾನದಲ್ಲಿ ‘ಅಮೃತಧಾರೆ ಧಾರಾವಾಹಿ’ ಇದೆ. ಕಳೆದ ವಾರಗಳಲ್ಲಿ ಈ ಧಾರಾವಾಹಿ ನಾಲ್ಕು ಅಥವಾ ಐದನೇ ಸ್ಥಾನದಲ್ಲಿ ಇರುತ್ತಿದ್ದವು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.