ಎರಡಂಕಿ ಸಮೀಪಿಸಿತು ಈ ಧಾರಾವಾಹಿಯ ಟಿಆರ್​ಪಿ; ‘ನಿನಗಾಗಿ’ ಸೀರಿಯಲ್​ಗೆ ಎಷ್ಟನೇ ಸ್ಥಾನ?

ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಎರಡಂಕಿಯ ಟಿಆರ್​ಪಿ ಪಡೆದಿತ್ತು. ಈಗಲೂ ಧಾರಾವಾಹಿಗೆ ಮತ್ತೆ ಅದೇ ರೀತಿಯ ಬೇಡಿಕೆ ಸೃಷ್ಟಿ ಆಗಿದೆ. ಈ ಧಾರಾವಾಹಿಗೆ ಹಲವು ಟ್ವಿಸ್ಟ್​ಗಳು ಸಿಕ್ಕಿರುವುದರಿಂದ ಧಾರಾವಾಹಿಯನ್ನು ಜನರು ಹೆಚ್ಚೆಚ್ಚು ವೀಕ್ಷಿಸುತ್ತಿದ್ದಾರೆ.

ಎರಡಂಕಿ ಸಮೀಪಿಸಿತು ಈ ಧಾರಾವಾಹಿಯ ಟಿಆರ್​ಪಿ; ‘ನಿನಗಾಗಿ’ ಸೀರಿಯಲ್​ಗೆ ಎಷ್ಟನೇ ಸ್ಥಾನ?
ಎರಡಂಕಿ ಸಮೀಪಿಸಿತು ಈ ಧಾರಾವಾಹಿಯ ಟಿಆರ್​ಪಿ; ‘ನಿನಗಾಗಿ’ ಸೀರಿಯಲ್​ಗೆ ಎಷ್ಟನೇ ಸ್ಥಾನ?
Follow us
ರಾಜೇಶ್ ದುಗ್ಗುಮನೆ
|

Updated on:Jun 06, 2024 | 2:14 PM

ಕನ್ನಡ ಕಿರುತೆರೆಯಲ್ಲಿ ಸ್ಪರ್ಧೆ ಜೋರಾಗಿಯೇ ಇದೆ. ಹೊಸ ಧಾರಾವಾಹಿಗಳು ಪ್ರಸಾರ ಕಾಣುತ್ತಲೇ ಇವೆ. ಟಿಆರ್​ಪಿ ರೇಸ್​ನಲ್ಲಿ ಈ ಮೊದಲು ಪ್ರಸಾರ ಕಾಣುತ್ತಿರುವ ಧಾರಾವಾಹಿಗಳ ಜೊತೆ ಹೊಸ ಧಾರಾವಾಹಿಗಳು ಇವೆ. ಕಳೆದ ಕೆಲ ವಾರಗಳಿಂದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (Puttakkana Makkalu) ಮೊದಲ ಸ್ಥಾನದಲ್ಲಿ ಇತ್ತು. ಈ ವಾರವೂ ಈ ಧಾರಾವಾಹಿಗೆ ಮೊದಲ ಸ್ಥಾನ ಸಿಕ್ಕಿದೆ. ಅಷ್ಟೇ ಅಲ್ಲ ಮತ್ತೆ ಈ ಧಾರಾವಾಹಿ ದಾಖಲೆ ಬರೆಯೋ ಸಾಧ್ಯತೆ ಇದೆ.

ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಎರಡಂಕಿಯ ಟಿಆರ್​ಪಿ ಪಡೆದಿತ್ತು. ಈಗಲೂ ಧಾರಾವಾಹಿಗೆ ಮತ್ತೆ ಅದೇ ರೀತಿಯ ಬೇಡಿಕೆ ಸೃಷ್ಟಿ ಆಗಿದೆ. ಈ ಧಾರಾವಾಹಿಗೆ ಹಲವು ಟ್ವಿಸ್ಟ್​ಗಳು ಸಿಕ್ಕಿರುವುದರಿಂದ ಧಾರಾವಾಹಿಯನ್ನು ಜನರು ಹೆಚ್ಚೆಚ್ಚು ವೀಕ್ಷಿಸುತ್ತಿದ್ದಾರೆ. ಈ ಧಾರಾವಾಹಿಯ ಟಿಆರ್​ಪಿ ಎರಡಂಕಿ ತಲುಪಲು ಬೇಕಿರೋದು ಕೇವಲ 0.5 ಅಂಕ ಮಾತ್ರ. ಹಾಗಾದಲ್ಲಿ, ಈ ಧಾರಾವಾಹಿ ಡಬಲ್ ಡಿಜಿಟ್ ಕಾಣಲಿದೆ.

ಎಂದಿನಂತೆ ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿಗೆ ಆರಂಭದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿತ್ತು. ಕೆಲವು ವಾರ ಈ ಧಾರಾವಾಹಿ ಮೊದಲ ಸ್ಥಾನ ಕೂಡ ಪಡೆದಿತ್ತು. ಈಗ ಅದೇ ಬೇಡಿಕೆಯನ್ನು ಧಾರಾವಾಹಿ ಉಳಿಸಿಕೊಂಡಿದೆಯಾದರೂ, ‘ಪುಟ್ಟಕನ ಮಕ್ಕಳು’ ಧಾರಾವಾಹಿಯನ್ನು ಹಿಂದಿಕ್ಕಲು ಸಾಧ್ಯವಾಗುತ್ತಿಲ್ಲ.

ಮೂರನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಈ ಧಾರಾವಾಹಿ ಇತ್ತೀಚೆಗೆ ಆರಂಭ ಆಗಿದ್ದು, ಬೇಡಿಕೆ ಉಳಿಸಿಕೊಂಡಿದೆ. ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಹಾಗೂ ಐದನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿಗಳು ಇವೆ. ಈ ಎರಡೂ ಧಾರಾವಾಹಿಗಳು ಸರಿ ಸುಮಾರು ಒಂದೇ ರೀತಿಯ ಬೇಡಿಕೆ ಹೊಂದಿದೆ.

ಇದನ್ನೂ ಓದಿ: ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ಭರ್ಜರಿ ಬೇಡಿಕೆ; ಟಿಆರ್​ಪಿಯಲ್ಲಿ ಸಖತ್ ಏರಿಕೆ

ಕಲರ್ಸ್ ಕನ್ನಡದಲ್ಲಿ ಇತ್ತೀಚೆಗೆ ಆರಂಭ ಆದ ‘ನಿನಗಾಗಿ’ ಧಾರಾವಾಹಿ ಆರನೇ ಸ್ಥಾನದಲ್ಲಿ ಇದೆ. ಈ ಧಾರಾವಾಹಿಯಲ್ಲಿ ದಿವ್ಯಾ ಉರುಡುಗ ನಟಿಸುತ್ತಿದ್ದಾರೆ. ಇದು ನಿಧಾನವಾಗಿ ಜನರಿಗೆ ಇಷ್ಟ ಆಗುತ್ತಿದೆ. ಹೀಗಾಗಿ, ಇದರ ಟಿಆರ್​ಪಿ ಹೆಚ್ಚುತ್ತಿದೆ. ‘ಶ್ರೀಗೌರಿ’ ಕೂಡ ಬೇಡಿಕೆ ಉಳಿಸಿಕೊಂಡಿದೆ. ‘ಭಾಗ್ಯಲಕ್ಷ್ಮೀ’ ಹಾಗೂ ‘ಲಕ್ಷ್ಮಿ ಬಾರಮ್ಮ’ಗೆ ಮೊದಲಿನಷ್ಟು ಬೇಡಿಕೆ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:13 pm, Thu, 6 June 24