Varthur Santhosh: ಬಿಗ್ಬಾಸ್ ಸೆಲೆಬ್ರಿಟಿ ವರ್ತೂರು ಸಂತೋಷ್ ವಿರುದ್ಧ ಪ್ರಕರಣ ದಾಖಲು
ಬಿಗ್ಬಾಸ್ ಮನೆಯಲ್ಲಿದ್ದಾಗ ಹುಲಿ ಉಗುರು ಪ್ರಕರಣದಿಂದ ಜೈಲು ಪಾಲಾದ ವರ್ತೂರು ಸಂತೋಷ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಪ್ರಾಣಿ ಸಾಗಾಟ ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಅಧಿಕಾರಿ ಹರೀಶ್ ಎಂಬುವರು ವರ್ತೂರು ಸಂತೋಷ್ ವಿರುದ್ಧ ದೂರು ನೀಡಿದ್ದಾರೆ.
ಬಿಗ್ಬಾಸ್ ಮನೆಯಲ್ಲಿದ್ದಾಗಲೇ ಹುಲಿ ಉಗುರು ಪ್ರಕರಣದಿಂದಾಗಿ ಜೈಲು ಪಾಲಾಗಿದ್ದ ವರ್ತೂರು ಸತೋಷ್ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ವರ್ತೂರು ಸಂತೋಷ್ ವಿರುದ್ಧ ಅಧಿಕಾರಿಯೊಬ್ಬರು ದೂರು ದಾಖಲಿಸಿದ್ದು ಕ್ರಮಕ್ಕೆ ಒತ್ತಾಯಿಸಿದ್ದಾರೆ. ವರ್ತೂರು ಸಂತೋಷ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಸಹ ಅಧಿಕಾರಿ ಯೋಜನೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಹಳ್ಳಿಕಾರ್ ರೇಸ್ ನಡೆಸಲು ಸಜ್ಜಾಗುತ್ತಿರುವ ವರ್ತೂರು ಸಂತೋಷ್ಗೆ ಇದೀಗ ಸಮಸ್ಯೆ ಎದುರಾಗಿದೆ.
ಪ್ರಾಣಿ ಸಾಗಾಟ ನಿಯಮವನ್ನು ಉಲ್ಲಂಘಿಸಿದ್ದಾರೆಂದು ವರ್ತೂರು ಸಂತೋಷ್ ವಿರುದ್ಧ ಪ್ರಕರಣ ದಾಖಲಾಗಿದೆ. ವರ್ತೂರ್ ಸಂತೋಷ್ ರಿಂದ ಪ್ರಾಣಿಗಳ ಸಾಗಾಣಿಕೆ ನಿಯಮ ಉಲ್ಲಂಘಿಸಿ ಅಸುರಕ್ಷಿತ ರೀತಿಯಿಂದ ಪ್ರಾಣಿಗಳನ್ನು ಸಾಗಾಟ ಮಾಡಿದ್ದಾರೆಂದು ಆರೋಪಿಸಿ ಪ್ರಾಣಿ ಕಲ್ಯಾಣ ಅಧಿಕಾರಿ ಹರೀಶ್ ಎಂಬುವರು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈಗಾಗಲೇ ವರ್ತೂರು ಸಂತೋಷ್ ಅನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಸಹ ಮಾಡಲಾಗಿದೆ ಎನ್ನಲಾಗುತ್ತಿದೆ.
ಹಳ್ಳಿಕಾರ್ ರೇಸ್ ಮಾಡಲು ಮುಂದಾಗಿರುವ ವರ್ತೂರು ಸಂತೋಷ್ ಟ್ರಕ್ ಒಂದರಲ್ಲಿ ಒಂಬತ್ತು ಹೋರಿಗಳನ್ನು ತುಂಬಿ ಸಾಗಾಟ ಮಾಡಿದ್ದರಂತೆ ಅಲ್ಲದೆ ಅದೇ ಟ್ರಕ್ನಲ್ಲಿ ಕೆಲವು ವಸ್ತುಗಳನ್ನು ಸಹ ತುಂಬಿಸಿದ್ದರಂತೆ. ಇದು ಪ್ರಾಣಿ ಸಾಗಾಟ ನಿಯಮಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿ ಅಧಿಕಾರಿ ಹರೀಶ್ ವರ್ತೂರು ಸಂತೋಷ್ ವಿರುದ್ಧ ದೂರು ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದು ಮಾತ್ರವೇ ಅಲ್ಲದೆ ಈ ಕುರಿತು ನ್ಯಾಯಾಲಯದ ಮೆಟ್ಟಿಲೇರಲು ಸಹ ಹರೀಶ್ ಸಿದ್ಧವಾಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ನಿಂದಕರ ಮಾತಿಗೆ ಮನನೊಂದ ವರ್ತೂರು ಸಂತೋಷ್ ಕಣ್ಣೀರು
ವರ್ತೂರು ಸಂತೋಷ್ ತಮ್ಮ ಪ್ರಾಣಿ ಪ್ರೀತಿ ವಿಶೇಷವಾಗಿ ರೈತನ ಗೆಳೆಯರಾದ ಹಸು, ಎತ್ತು ವಿಶೇಷವಾಗಿ ಹಳ್ಳಿಕಾರ್ ತಳಿಗಳ ಮೇಲಿಟ್ಟಿರುವ ಗೌರವ, ಪ್ರೀತಿಗಳಿಂದಲೇ ಜನಪ್ರಿಯತೆ ಗಳಿಸಿದವರು. ಆದರೆ ಈಗ ಅದೇ ಎತ್ತುಗಳನ್ನು ನಿಯಮ ಬಾಹಿರವಾಗಿ ಅಸುರಕ್ಷಿತ ರೀತಿಯಲ್ಲಿ ಸಾಗಾಟ ಮಾಡಿದ್ದಾರೆಂಬ ಆರೋಪ ಅವರ ಮೇಲೆ ಬಂದಿದೆ.
ವರ್ತೂರು ಸಂತೋಷ್, ಬಿಗ್ಬಾಸ್ಗೆ ಹೋದಾಗ ಹುಲಿ ಉಗುರಿನಿಂದ ಮಾಡಿದ ಸರವನ್ನು ಧರಿಸಿದ್ದರು, ಇದರಿಂದಾಗಿ ಅವರನ್ನು ಬಿಗ್ಬಾಸ್ ಮನೆಯಿಂದಲೇ ಬಂಧಿಸಿ ಕರೆದೊಯ್ಯಲಾಗಿತ್ತು. ಅದಾದ ಬಳಿಕ ನಟರು, ರಾಜಕಾರಣಿಗಳು ಸೇರಿದಂತೆ ಹಲವು ಮನೆಗಳ ಮೇಲೆ ವನ್ಯ ಜೀವಿ ಸಂರಕ್ಷಣಾ ಅಧಿಕಾರಿಗಳು ದಾಳಿ ನಡೆಸಿ ಹುಲಿ ಉಗುರುಗಳನ್ನು ವಶಪಡಿಸಿಕೊಂಡರು. ಬಿಗ್ಬಾಸ್ ನಲ್ಲಿದ್ದಾಗಲೇ ವರ್ತೂಸು ಸಂತೋಷ್ರ ಖಾಸಗಿ ಜೀವನದ ಬಗ್ಗೆಯೂ ಜೋರು ಚರ್ಚೆಗಳು ಟಿವಿ ಮಾಧ್ಯಮಗಳಲ್ಲಿ ನಡೆದಿತ್ತು. ಹಳ್ಳಿಕಾರ್ ಒಡೆಯ ಟೈಟಲ್ ಬಗ್ಗೆಯೂ ಸಹ ಸಾಮಾಜಿಕ ಜಾಲತಾಣದಲ್ಲಿ ವಿವಾದಗಳು ಎದ್ದಿದ್ದವು. ಈಗ ಪ್ರಾಣಿ ಸಾಗಾಟ ನಿಯಮ ಉಲ್ಲಂಘನೆ ಪ್ರಕರಣದ ವರ್ತೂರು ಹೆಗಲೇರಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Wed, 26 June 24