AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಂದಕರ ಮಾತಿಗೆ ಮನನೊಂದ ವರ್ತೂರು ಸಂತೋಷ್ ಕಣ್ಣೀರು

Varthur Santhosh: ಬಿಗ್​ಬಾಸ್ 10ರ ಬಳಿಕ ಸೆಲೆಬ್ರಿಟಿ ಆಗಿರುವ ವರ್ತೂರು ಸಂತೋಷ್ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿದ್ದಾರೆ. ಅಂತೆಯೇ ಕೆಲವು ನಿಂದಕರೂ ಸಹ ಇದ್ದಾರೆ. ಹೊಸ ವಿಡಿಯೋ ಒಂದರಲ್ಲಿ ನಿಂದಕ ಮಾತಿನಿಂದ ಮನನೊಂದು ವರ್ತೂರು ಸಂತೋಷ್ ಕಣ್ಣೀರು ಹಾಕಿದ್ದು, ಜನರಲ್ಲಿ ಮನವಿಯೊಂದನ್ನು ಸಹ ಮಾಡಿದ್ದಾರೆ.

ನಿಂದಕರ ಮಾತಿಗೆ ಮನನೊಂದ ವರ್ತೂರು ಸಂತೋಷ್ ಕಣ್ಣೀರು
ಮಂಜುನಾಥ ಸಿ.
|

Updated on: Mar 29, 2024 | 1:17 PM

Share

ವರ್ತೂರು ಸಂತೋಷ್ (Varthur Santhosh)  ಬಿಗ್​ಬಾಸ್ (BiggBoss)​ ನಿಂದ ಹೊರ ಬಂದ ಬಳಿಕ ಸೆಲೆಬ್ರಿಟಿ ಆಗಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಲವು ಕಾರ್ಯಕ್ರಮಗಳಿಗೆ ಅವರಿಗೆ ಬುಲಾವ್ ಬರುತ್ತದೆ. ಸಂತೋಷ್ ಬರುತ್ತಿದ್ದಾರೆಂದರೆ ಸಾವಿರ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಭಾರಿ ಜನಪ್ರಿಯತೆ ಗಳಿಸಿರುವ ವರ್ತೂರು ಸಂತೋಷ್​ಗೆ ಕೆಲವು ನಿಂದಕರು ಸಹ ಇದ್ದಾರೆ. ವರ್ತೂರು ಸಂತೋಷ್ ಬಿಗ್​ಬಾಸ್​ನಲ್ಲಿದ್ದಾಗಲೂ ಕೆಲವರು ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ವಿಡಿಯೋಗಳನ್ನು ಹಾಕುತ್ತಾ, ಸತತ ನಿಂದನೆ, ದೂಷಣೆಯಲ್ಲಿ ತೊಡಗಿದ್ದಾರೆ. ಇದೀಗ ಹೊಸ ವಿಡಿಯೋ ಒಂದರಲ್ಲಿ ನಿಂದಕರ ಮಾತಿಗೆ ಮನನೊಂದು ಕಣ್ಣೀರು ಹಾಕಿರುವ ಸಂತೋಷ್, ನಿಂದಕರಿಗೆ ತಕ್ಕ ಶಾಸ್ತಿ ಕಲಿಸಬೇಕೆಂದು ಜನತೆಯಲ್ಲಿ ಮನವಿ ಮಾಡಿದ್ದಾರೆ.

ಅಕ್ಷಯ್ ಫುಡ್ ಫ್ಯಾಕ್ಟರಿ ಹೆಸರಿನ ಯೂಟ್ಯೂಬ್ ಚಾನೆಲ್​ನಲ್ಲಿ ಗೆಳೆಯರೊಟ್ಟಿಗೆ ವಿಡಿಯೋ ಮಾಡಿರುವ ವರ್ತೂರು ಸಂತೋಷ್, ತಮ್ಮ ಬಗ್ಗೆ ಅವಹೇಳನಕಾರಿಯಾಗಿ, ಮಾನಹಾನಕಾರಿಯಾಗಿ ನಿಂದನೆಯಲ್ಲಿ ತೊಡಗಿರುವ ಯಲಹಂಕ ಮಂಜು ಮತ್ತು ಫಾರ್ಮ್ ಇಂಡಿಯಾ ಯೂಟ್ಯೂಬ್ ಚಾನೆಲ್ ವಿರುದ್ಧ ಖಾರವಾಗಿ ಮಾತನಾಡಿದ ವರ್ತೂರು ಸಂತೋಷ್, ಏಕವಚನದಲ್ಲಿ ಕೆಲ ಅವಾಚ್ಯ ಪದಗಳ ಬಳಸಿ ಪ್ರತಿನಿಂದನೆ ಮಾಡಿದ್ದಾರೆ.

ಇದನ್ನೂ ಓದಿ:ಬಿಗ್ ಬಾಸ್ ಮನೆಯ ಈ ವಿಚಾರವನ್ನು ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ ವರ್ತೂರು ಸಂತೋಷ್

ನಾನು ಯಾರಿಗೂ ಮೋಸ ಮಾಡಿದವನಲ್ಲ, ಯಾರ ಅನ್ನವನ್ನೂ ಕಿತ್ತುಕೊಂಡವನಲ್ಲ. ನನ್ನ ಮನೆಯ ಅನ್ನ ತಿಂದು, ನಾನು ಮಾಡಿದ ಸಾವಿರ, ಎರಡು ಸಾವಿರ ಹಣಕ್ಕೆ ಬರುತ್ತಿದ್ದ ಯಲಹಂಕ ಮಂಜು ಇಂದು ನನ್ನ ವಿರುದ್ಧ ಬಾಯಿಗೆ ಬಂದಂತೆ ಹೇಸಿಗೆ ಮಾತನಾಡುತ್ತಿದ್ದಾನೆ. ನನ್ನ ತಾಯಿ, ನನ್ನ ಸ್ನೇಹಿತರು, ಬಂಧುಗಳ ಬಗ್ಗೆ, ನನ್ನ ಸಂಸಾರದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ. ಜನರು, ಧರ್ಮ ದೇವರುಗಳು, ನಾನು ಯಾರಿಗೂ ಮೋಸ ಮಾಡಿದವನಲ್ಲ, ಜನರೇ ನನ್ನ ನಿಂದಕರಿಗೆ ಬುದ್ಧಿ ಕಲಿಸಬೇಕು ಎಂದು ಹೇಳುತ್ತಾ ಕಣ್ಣೀರು ಹಾಕಿ, ಕೈ ಮುಗಿದಿದ್ದಾರೆ.

ಯಲಹಂಕ ಮಂಜು ಎಂಬುವರು ವರ್ತೂರು ಸಂತೋಷ್ ಬಿಗ್​ಬಾಸ್ ಒಳಗೆ ಇದ್ದಾಗಿನಿಂದಲೂ ಅವರ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ವರ್ತೂರು ಸಂತೋಷ್ ವ್ಯಕ್ತಿತ್ವದ ಬಗ್ಗೆ ಮಾತ್ರವೇ ಅಲ್ಲದೆ ಕೆಲವು ಖಾಸಗಿ ವಿಷಯಗಳ ಬಗ್ಗೆಯೂ ನಿಂದನೆ ಮಾಡುತ್ತಲೇ ಬರುತ್ತಿದ್ದಾರೆ. ಫಾರ್ಮ್ ಇಂಡಿಯಾ ಹೆಸರಿನ ಯೂಟ್ಯೂಬ್ ಚಾನೆಲ್​ ಮೂಲಕ ವರ್ತೂರು ನಿಂದನೆ, ಮಾನಹಾನಿ ಉದ್ದೇಶದಿಂದ ಸರಣಿ ವಿಡಿಯೋಗಳನ್ನು ಸಹ ಪ್ರಕಟಿಸಿದ್ದಾರೆ. ಇತ್ತೀಚೆಗಿನ ವಿಡಿಯೋನಲ್ಲಿ ಮಾತನಾಡಿರುವ ವರ್ತೂರು ಸಂತೋಷ್, ಈ ಯೂಟ್ಯೂಬ್ ಚಾನೆಲ್​ ಅನ್ನು ರಿಪೋರ್ಟ್ ಮಾಡುವಂತೆ ಮನವಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ