ಕಿರುತೆರೆ ಲೋಕದಲ್ಲಿ ಭರ್ಜರಿ ಸ್ಪರ್ಧೆ ಇದೆ. ಈ ಮೊದಲಿನಿಂದ ಪ್ರಸಾರ ಕಾಣುತ್ತಿರುವ ಧಾರಾವಾಹಿಗಳ (Kannada Serials) ಜೊತೆ ಹೊಸ ಧಾರಾವಾಹಿಗಳು ರೇಸ್ಗೆ ಇಳಿದಿವೆ. ಈ ಪೈಕಿ ಹಲವು ಧಾರಾವಾಹಿಗಳು ಯಶಸ್ಸು ಕಂಡಿವೆ. ಇನ್ನೂ ಕೆಲವು ಧಾರಾವಾಹಿಗಳು ಆರಂಭದಲ್ಲಿ ಒಳ್ಳೆಯ ರೀತಿಯಲ್ಲಿ ಪ್ರಸಾರ ಕಂಡು ನಂತರದ ದಿನಗಳಲ್ಲಿ ನಿಧಾನ ಗತಿಯಲ್ಲಿ ಹೆಜ್ಜೆ ಹಾಕುತ್ತಿವೆ. ಈಗ 35ನೇ ವಾರದ ಟಿಆರ್ಪಿ ಲಿಸ್ಟ್ ಹೊರ ಬಿದ್ದಿದೆ. ಯಾವ ಧಾರಾವಾಹಿ ಟಿಆರ್ಪಿ ರೇಸ್ನಲ್ಲಿ ಮೊದಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಟಿಆರ್ಪಿ ರೇಸ್ನಲ್ಲಿ ಮೊದಲ ಸ್ಥಾನ ಕಾಪಾಡಿಕೊಂಡು ಬರುತ್ತಿದೆ. ಹಲವು ತಿಂಗಳಿಂದ ಈ ಧಾರಾವಾಹಿ ಭರ್ಜರಿ ಟಿಆರ್ಪಿ ಪಡೆದುಕೊಳ್ಳುತ್ತಿದೆ. ಗ್ರಾಮೀಣ ಭಾಗದಲ್ಲಿ ಈ ಧಾರಾವಾಹಿಯನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಿದೆ. ಈ ಕಾರಣಕ್ಕೆ ಧಾರಾವಾಹಿಗೆ ಮೊದಲ ಸ್ಥಾನ ಸಿಕ್ಕಿದೆ. ಎರಡಂಕಿ ಟಿಆರ್ಪಿ ಪಡೆಯುತ್ತಿರುವ ಕನ್ನಡದ ಏಕೈಕ ಧಾರಾವಾಹಿ ಇದು.
‘ಸೀತಾ ರಾಮ’ ಧಾರಾವಾಹಿ ಪ್ರೇಕ್ಷಕರಿಗೆ ಒಳ್ಳೆಯ ರೀತಿಯಲ್ಲಿ ಕನೆಕ್ಟ್ ಆಗುತ್ತಿದೆ. ಈ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ, ವೈಷ್ಣವಿ ಗೌಡ ಹಾಗೂ ರೀತು ಸಿಂಗ್ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈ ಧಾರಾವಾಹಿ ಎರಡನೇ ಸ್ಥಾನದಲ್ಲಿದೆ. ಭಾವನಾತ್ಮಕವಾಗಿ ಧಾರಾವಾಹಿ ಸೆಳೆದುಕೊಂಡಿದೆ.
ಗಟ್ಟಿಮೇಳ ಧಾರಾವಾಹಿ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಹೊಂದಿದೆ. ಈ ಧಾರಾವಾಹಿ ಕೂಡ ಒಳ್ಳೆಯ ಟಿಆರ್ಪಿ ಪಡೆದುಕೊಂಡು ಮುನ್ನುಗ್ಗುತ್ತಿದೆ. ಈ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ‘ಸೀತಾ ರಾಮ’ ಬರುವುದಕ್ಕೂ ಮೊದಲು ಈ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇತ್ತು.
‘ಅಮೃತಧಾರೆ’ ಧಾರಾವಾಹಿಯಲ್ಲಿ ಈಗ ಮದುವೆಯ ಸಂಭ್ರಮ. ಸದ್ಯ ಭೂಮಿಕಾ ಹಾಗೂ ಗೌತಮ್ ಮದುವೆ ನಡೆಯುತ್ತಿದೆ. ಈ ಕಾರಣಕ್ಕೆ ಧಾರಾವಾಹಿ ಹೆಚ್ಚು ಟಿಆರ್ಪಿ ಪಡೆದುಕೊಳ್ಳುತ್ತಿದೆ. ಈ ಧಾರಾವಾಹಿ ನಾಲ್ಕನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಎರಡನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ; ಹೆಚ್ಚಿತು ‘ಗೀತಾ’ ಸೀರಿಯಲ್ ಟಿಆರ್ಪಿ
‘ಸತ್ಯ’ ಧಾರಾವಾಹಿ ಕೂಡ ಭರ್ಜರಿ ಟಿಆರ್ಪಿ ಪಡೆದು ಮುಂದೆ ಸಾಗುತ್ತಿದೆ. ಈ ಧಾರಾವಾಹಿಗೆ ಐದನೇ ಸ್ಥಾನ ಸಿಕ್ಕಿದೆ. ‘ಸತ್ಯ’ ಧಾರಾವಾಹಿಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ