‘ಸಿಂಪಲ್​’ ಸುನಿ ನಿರ್ದೇಶನದಲ್ಲಿ ‘ಶಾಂಭವಿ’ ಧಾರಾವಾಹಿ; ಸೆ.11ರಂದು ಉದಯ ಟಿವಿಯಲ್ಲಿ ಪ್ರಸಾರ ಆರಂಭ

‘ಶಾಂಭವಿ’ ಧಾರಾವಾಹಿಯಲ್ಲಿ ವಿನೂತನ ಶೈಲಿಯ ನಿರೂಪಣೆ ಜೊತೆಗೆ ಅದ್ದೂರಿತನ ಇರಲಿದೆ ಎಂದು ‘ಉದಯ’ ವಾಹಿನಿ ಹೇಳಿಕೊಂಡಿದೆ. ಖ್ಯಾತ ನಿರ್ದೇಶಕ ‘ಸಿಂಪಲ್’ ಸುನಿ ಅವರು ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಧಾರಾವಾಹಿಯನ್ನು ನಿರ್ಮಿಸಿ, ಡೈರೆಕ್ಷನ್​ ಮಾಡುತ್ತಿದ್ದಾರೆ. ಆ ಕಾರಣಕ್ಕಾಗಿ ‘ಶಾಂಭವಿ’ ಸೀರಿಯಲ್​ ವಿಶೇಷ ಎನಿಸಿಕೊಂಡಿದೆ.

‘ಸಿಂಪಲ್​’ ಸುನಿ ನಿರ್ದೇಶನದಲ್ಲಿ ‘ಶಾಂಭವಿ’ ಧಾರಾವಾಹಿ; ಸೆ.11ರಂದು ಉದಯ ಟಿವಿಯಲ್ಲಿ ಪ್ರಸಾರ ಆರಂಭ
ಸಿಂಪಲ್​ ಸುನಿ, ಶಾಂಭವಿ ಸೀರಿಯಲ್​ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Sep 04, 2023 | 9:21 PM

ಕನ್ನಡದ ಜನಪ್ರಿಯ ಮನರಂಜನಾ ವಾಹಿನಿ ‘ಉದಯ ಟಿವಿ’ (Udaya TV) ಈಗಾಗಲೇ ಅನೇಕ ಸೀರಿಯಲ್​ಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದೆ. ಮೊದಲಿನಿಂದಲೂ ಈ ವಾಹಿನಿಯಲ್ಲಿ ಸೀರಿಯಲ್​ಗಳು ಫೇಮಸ್​. ವಿಭಿನ್ನವಾದ ಕಥೆಯನ್ನು ಹೊಂದಿರುವ ಧಾರಾವಾಹಿಗಳಲ್ಲಿ ಸೃಜನಾತ್ಮಕ ವಿಷಯಗಳು ಕಾಣಸಿಗುತ್ತಿವೆ. ‘ಕನ್ಯಾದಾನ’, ‘ಸೇವಂತಿ’, ‘ಆನಂದರಾಗ’, ‘ಜನನಿ’, ‘ಅಣ್ಣತಂಗಿ’, ‘ಗೌರಿಪುರದ ಗಯ್ಯಾಳಿಗಳು’, ‘ರಾಧಿಕಾ’ ಸೇರಿದಂತೆ ಅನೇಕ ಧಾರಾವಾಹಿಗಳು ಫ್ಯಾಮಿಲಿ ಪ್ರೇಕ್ಷಕರನ್ನು ರಂಜಿಸುತ್ತಿವೆ. ಅವುಗಳ ಸಾಲಿಗೆ ಹೊಸದೊಂದು ಸೀರಿಯಲ್​ ಸೇರ್ಪಡೆ ಆಗುತ್ತಿದೆ. ‘ಶಾಂಭವಿ’  (Shambhavi Serial) ಎಂಬುದು ಈ ಧಾರಾವಾಹಿಯ ಶೀರ್ಷಿಕೆ. ಈ ಧಾರಾವಾಹಿಗೆ ನಿರ್ದೇಶನ ಮಾಡುತ್ತಿರುವುದು ‘ಸಿಂಪಲ್​’ ಸುನಿ (Simple Suni) ಅನ್ನೋದು ವಿಶೇಷ.

‘ಶಾಂಭವಿ’ ಧಾರಾವಾಹಿಯಲ್ಲಿ ವಿನೂತನ ಶೈಲಿಯ ನಿರೂಪಣೆ ಜೊತೆಗೆ ಅದ್ದೂರಿತನ ಇರಲಿದೆ ಎಂದು ವಾಹಿನಿ ಹೇಳಿಕೊಂಡಿದೆ. ʻಸಿಂಪಲ್ಲಾಗ್​ ಒಂದ್​ ಲವ್ ಸ್ಟೋರಿʼ ಖ್ಯಾತಿಯ ನಿರ್ದೇಶಕ ‘ಸಿಂಪಲ್’ ಸುನಿ ಅವರು ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಧಾರಾವಾಹಿಯನ್ನು ನಿರ್ಮಿಸಿ, ಡೈರೆಕ್ಷನ್​ ಮಾಡುತ್ತಿದ್ದಾರೆ. ಆ ಕಾರಣಕ್ಕಾಗಿ ‘ಶಾಂಭವಿ’ ಧಾರಾವಾಹಿ ವಿಶೇಷ ಎನಿಸಿಕೊಂಡಿದೆ. ‘ಸುನಿ ಸಿನಿಮಾಸ್’ ಸಂಸ್ಥೆಯ ಮೂಲಕ ʻಶಾಂಭವಿʼ ಸೀರಿಯಲ್​ ನಿರ್ಮಾಣ ಆಗುತ್ತಿದೆ. YBR ಮನು ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಪರಂ ಸಂಕಲನ, ಜಗದೀಶ್ ದೊಡ್ಡೇರಿ ಸಹ ನಿರ್ದೇಶನ ಮಾಡುತ್ತಿದ್ದಾರೆ. ರಾಧಾ ವೆಂಕಟ್​ ಅವರು ಸಂಭಾಷಣೆ, ಪುಗಳ್ಮಣಿ ಅವರು ಕಥೆ-ಚಿತ್ರಕಥೆ ಬರೆದಿದ್ದಾರೆ.

ಇದನ್ನೂ ಓದಿ: ಬಾಲಿವುಡ್​​​ಗೆ ಎಂಟ್ರಿ ಕೊಟ್ಟ ಕನ್ನಡತಿ ಧಾರಾವಾಹಿಯ ನಟ

‘ಶಾಂಭಬಿ’ ಧಾರಾವಾಹಿ ಕಥೆ ಏನು? ಶಿವಗಾಮಿ ಬಳಿ ಸಾವಿರಾರು ಕೋಟಿ ರೂಪಾಯಿ ಆಸ್ತಿ ಇದೆ. ಆಕೆಗೆ ಹರಿಪ್ರಸಾದ್ ಎಂಬ ಅಣ್ಣ ಇದ್ದಾನೆ. ಅಣ್ಣ-ತಂಗಿ ನಡುವೆ ಬಹಳ ಪ್ರೀತಿ ಇದೆ. ಆಗ ಅಶೋಕನ ಎಂಟ್ರಿ ಆಗುತ್ತಿದೆ. ಶಿವಗಾಮಿಯ ಸಂಸ್ಥೆಯಲ್ಲಿ ಶಿಕ್ಷಕನಾಗಿ ಅಶೋಕ ಕೆಲಸಕ್ಕೆ ಸೇರಿದ ಬಳಿಕ ಟ್ವಿಸ್ಟ್​ ಎದುರಾಗುತ್ತಿದೆ. ಅಶೋಕನ ಕುಟುಂಬದವರು ಹಣಕ್ಕಾಗಿ ಹಪಹಪಿಸುತ್ತಾರೆ. ಆತನ ತಾಯಿ ಹಾಗೂ ತಮ್ಮಂದಿರು ಬಹಳ ಖತರ್ನಾಕ್ ಬುದ್ಧಿಯವರು. ಒಳ್ಳೊಳ್ಳೆಯ ಸಂಬಂಧ ಬಂದರೂ ವಿವಾಹಕ್ಕೆ ಒಪ್ಪದಿದ್ದ ಶಿವಗಾಮಿಯು ಈ ಮಧ್ಯಮವರ್ಗದ ಅಶೋಕನಿಗೆ ಮನಸೋಲುತ್ತಾಳೆ. ಅವನು ಬೀಸುವ ಷಡ್ಯಂತ್ರದ ಬಲೆಯಲ್ಲಿ ಸಿಲುಕುತ್ತಾಳೆ. ಇಬ್ಬರಿಗೂ ಮದುವೆ ಆಗುತ್ತದೆ. ಈ ದಂಪತಿಯ ಪುತ್ರಿಯೇ ಶಾಂಭವಿ. ಈ ಮುದ್ದಾದ 6 ವರ್ಷದ ಮಗುವಿನ ಕಥೆಯೇ ಇಲ್ಲಿನ ಹೈಲೈಟ್​.

ಇದನ್ನೂ ಓದಿ: ಮತ್ತೆ ಟಿವಿಯಲ್ಲಿ ಪ್ರಸಾರ ಆಗಲಿದೆ ‘ರಾಮಾಯಣ’ ಧಾರಾವಾಹಿ; ‘ಆದಿಪುರುಷ್​ಗಿಂತ ಇದೇ ಉತ್ತಮ’ ಎಂದ ಪ್ರೇಕ್ಷಕರು

ಒಂದಿನ ಶಾಂಭವಿ ಕಾಣೆ ಆಗುತ್ತಾಳೆ. ಆ ಘಟನೆಯ ನಂತರ ಶಿವಗಾಮಿ ಹುಚ್ಚಿ ಆಗಿಬಿಡುತ್ತಾಳೆ. ಆಗ ಕಥೆಯ ಸ್ವರೂಪ ಬದಲಾಗುತ್ತದೆ. ಆಗ ಒಂದು ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಕಳೆದು ಹೋಗಿರುವ ಶಾಂಭವಿಗೂ ಇಲ್ಲಿ ಪ್ರತಿಷ್ಠಾಪನೆ ಮಾಡಲಾದ ದೇವಿ ಇರುವ ಸ್ಥಳಕ್ಕೂ ಸಂಬಂಧ ಇರುತ್ತದೆ. ಶಾಂಭವಿ ಮರಳಿ ಬರುತ್ತಾಳೆ. ದುಷ್ಟರಿಗೆ ಪಾಠ ಕಲಿಸುತ್ತಾಳೆ. ಕೆಟ್ಟವರ ಪಾಲಿಗೆ ದೆವ್ವವಾಗಿ ಹಾಗೂ ಒಳ್ಳೆಯವರ ಪಾಲಿನ ದೇವತೆಯಾಗಿ ಶಾಂಭವಿ ಕಾಣಿಸಿಕೊಳ್ಳುತ್ತಾಳೆ.

ಇದನ್ನೂ ಓದಿ: ಹಿಂದಿ ಧಾರಾವಾಹಿ ನಟ ಈಗ ಬೆಂಗಳೂರಿನ ಕಾಲೇಜಿನಲ್ಲಿ ಪ್ರಾಧ್ಯಾಪಕ; ಯಾರು ಅವರು?

ಸೆಪ್ಟೆಂಬರ್ 11ರಂದು ʻಶಾಂಭವಿ’ ಧಾರಾವಾಹಿಯು ಪ್ರಸಾರ ಆರಂಭಿಸಲಿದೆ. ಸೋಮವಾರದಿಂದ ಶನಿವಾರದ ತನಕ ರಾತ್ರಿ 7.30ಕ್ಕೆ ಉದಯ ಟಿವಿಯಲ್ಲಿ ಈ ಸೀರಿಯಲ್​ ಬಿತ್ತರವಾಗಲಿದೆ. ಶಾಂಭವಿಯ ಪಾತ್ರವನ್ನು ಬೇಬಿ ರಚನಾ ಟಿ.ಬಿ ಮಾಡುತ್ತಿದ್ದಾರೆ. ಇನ್ನುಳಿದ ಪಾತ್ರಗಳಲ್ಲಿ ಐಶ್ವರ್ಯಾ ಸಿಂಧೋಗಿ, ಹರೀಶ್ ಟಿವಿ, ವಿನಯಾ ಗೌಡ, ಅಂಬುಜಾಕ್ಷಿ, ಡಾಲಿ ರಾಜೇಶ್, ಪೂಜಿತಾ, ಸೂರ್ಯ ಕುಂದಾಪುರ, ಶ್ಯಾಮಲಮ್ಮ, ರೋಹಿತ್ ನಾಯರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್