ಭರ್ಜರಿ ಟಿಆರ್ಪಿ ಪಡೆದ ‘ಸೀತಾ ರಾಮ’ ಧಾರಾವಾಹಿ; ಯಾವ ಸೀರಿಯಲ್ಗೆ ಯಾವ ಸ್ಥಾನ?
Kannada Serials TRP: ಕಳೆದ ತಿಂಗಳು ಪ್ರಸಾರ ಆರಂಭಿಸಿದ ‘ಸೀತಾ ರಾಮ’ ಧಾರಾವಾಹಿ ಬಹಳ ರಿಚ್ ಆಗಿ ಮೂಡಿಬರುತ್ತಿದೆ. ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಹಾಗೂ ರೀತು ಸಿಂಗ್ ಇದರಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.
ಇತ್ತೀಚೆಗೆ ಪ್ರಸಾರ ಆರಂಭಿಸಿದ ‘ಸೀತಾ ರಾಮ’ (Seetha Raama Serial) ಧಾರಾವಾಹಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಫ್ಯಾಮಿಲಿ ಡ್ರಾಮಾ ವೀಕ್ಷಕರಿಗೆ ಇಷ್ಟವಾಗುತ್ತಿದೆ. ಕಳೆದ ವಾರದ ಟಿಆರ್ಪಿ ರಿಲೀಸ್ ಆಗಿದ್ದು ಈ ಧಾರಾವಾಹಿ ಒಳ್ಳೆಯ ರೇಟಿಂಗ್ ಪಡೆದಿದೆ. ಟಿಆರ್ಪಿ ರೇಸ್ನಲ್ಲಿ ಈ ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ಹಾಗಾದರೆ ಯಾವ ಧಾರಾವಾಹಿಗೆ ಯಾವ ಸ್ಥಾನ ಸಿಕ್ಕಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಪುಟ್ಟಕ್ಕನ ಮಕ್ಕಳು
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಜನಮೆಚ್ಚುಗೆ ಪಡೆದಿದೆ. ಈ ಧಾರಾವಾಹಿ ಒಳ್ಳೆಯ ಟಿಆರ್ಪಿ ಪಡೆದುಕೊಳ್ಳುತ್ತಿದೆ. ಈ ಧಾರಾವಾಹಿಯು ರೇಸ್ನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಕಳೆದ ಕೆಲ ತಿಂಗಳಿಂದ ಈ ಧಾರಾವಾಹಿಗೆ ಮೊದಲ ಸ್ಥಾನ ಸಿಗುತ್ತಿದೆ. ಈ ಧಾರಾವಾಹಿಯನ್ನು ಮೀರಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ.
ಗಟ್ಟಿಮೇಳ
‘ಗಟ್ಟಿಮೇಳ’ ಧಾರಾವಾಹಿ ಟಿಆರ್ಪಿ ರೇಸ್ನಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಧಾರಾವಾಹಿ ಜನ ಮೆಚ್ಚುಗೆ ಪಡೆದಿದೆ. ಹಲವು ಟ್ವಿಸ್ಟ್ಗಳೊಂದಿಗೆ ಈ ಧಾರಾವಾಹಿ ಸಾಗುತ್ತಿದೆ. ಈ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಇದನ್ನು ವೀಕ್ಷಿಸುತ್ತಿದ್ದಾರೆ.
ಸೀತಾ ರಾಮ
ಕಳೆದ ತಿಂಗಳು ಪ್ರಸಾರ ಆರಂಭಿಸಿದ ‘ಸೀತಾ ರಾಮ’ ಧಾರಾವಾಹಿ ಬಹಳ ರಿಚ್ ಆಗಿ ಮೂಡಿಬರುತ್ತಿದೆ. ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಹಾಗೂ ರೀತು ಸಿಂಗ್ ಇದರಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು, ಪೂಜಾ ಲೋಕೇಶ್ ಮೊದಲಾದವರ ಪಾತ್ರ ಗಮನ ಸೆಳೆಯುತ್ತಿದೆ. ಮೊದಲ ವಾರಕ್ಕಿಂತ ಎರಡನೇ ವಾರ ಟಿಆರ್ಪಿಯಲ್ಲಿ ಏರಿಕೆ ಕಂಡಿದೆ.
ಇದನ್ನೂ ಓದಿ: ಕಿರುತೆರೆ ಇತಿಹಾಸದಲ್ಲಿ ‘ಅಮೃತಧಾರೆ’ ಹೊಸ ದಾಖಲೆ; ಧಾರಾವಾಹಿ ಹಾಡುಗಳಿಗೊಂದು ಜೂಕ್ ಬಾಕ್ಸ್
ಅಮೃತಧಾರೆ
ಕಳೆದವಾರಕ್ಕೆ ಹೋಲಿಕೆ ಮಾಡಿದರೆ ‘ಅಮೃತಧಾರೆ’ ಧಾರಾವಾಹಿಯ ಟಿಆರ್ಪಿಯಲ್ಲಿ ಏರಿಕೆ ಕಂಡಿದೆ. ಸದ್ಯ ಗೌತಮ್ (ರಾಜೇಶ್ ನಟರಂಗ) ಹಾಗೂ ಭೂಮಿಕಾ (ಛಾಯಾ ಸಿಂಗ್) ಮದುವೆ ತಯಾರಿ ನಡೆಯುತ್ತಿದೆ. ಈ ಕಾರಣದಿಂದಲೂ ಧಾರಾವಾಹಿಯ ಟಿಆರ್ಪಿ ಹೆಚ್ಚಿದೆ.
ಇದನ್ನೂ ಓದಿ: ಹೊರಬಿತ್ತು ‘ಸೀತಾ ರಾಮ’ ಟಿಆರ್ಪಿ; ಟಾಪ್ 10ರಲ್ಲಿ ಈ ಧಾರಾವಾಹಿಗೆ ಎಷ್ಟನೇ ಸ್ಥಾನ?
ಸತ್ಯ
‘ಸತ್ಯ’ ಧಾರಾವಾಹಿ ಟಿಆರ್ಪಿ ಜಟಾಪಟಿಯಲ್ಲಿ ಐದನೇ ಸ್ಥಾನದಲ್ಲಿದೆ. ‘ಶ್ರೀರಸ್ತು ಶುಭಮಸ್ತು’ (6), ‘ಹಿಟ್ಲರ್ ಕಲ್ಯಾಣ’ (7), ‘ಭಾಗ್ಯಲಕ್ಷ್ಮೀ’ (8), ‘ಲಕ್ಷ್ಮೀ ಬಾರಮ್ಮ’ (9) ಟಾಪ್ 9ರಲ್ಲಿ ಸ್ಥಾನ ಪಡೆದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ