ಹೊರಬಿತ್ತು ‘ಸೀತಾ ರಾಮ’ ಟಿಆರ್​ಪಿ; ಟಾಪ್​ 10ರಲ್ಲಿ ಈ ಧಾರಾವಾಹಿಗೆ ಎಷ್ಟನೇ ಸ್ಥಾನ?

ಟಾಪ್ 3 ಧಾರಾವಾಹಿಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಾಗಾದರೆ ಯಾವ ಧಾರಾವಾಹಿಗೆ ಎಷ್ಟನೇ ಸ್ಥಾನ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಹೊರಬಿತ್ತು ‘ಸೀತಾ ರಾಮ’ ಟಿಆರ್​ಪಿ; ಟಾಪ್​ 10ರಲ್ಲಿ ಈ ಧಾರಾವಾಹಿಗೆ ಎಷ್ಟನೇ ಸ್ಥಾನ?
ಕನ್ನಡ ಧಾರಾವಾಹಿ ಟಿಆರ್​ಪಿ
Follow us
|

Updated on:Jul 27, 2023 | 12:38 PM

ಕಳೆದ ವಾರ ‘ಸೀತಾ ರಾಮ’ ಧಾರಾವಾಹಿ (Seetha Raama Serial) ಪ್ರಸಾರ ಆರಂಭಿಸಿತ್ತು. ಈ ಧಾರಾವಾಹಿ ಎಷ್ಟು ಟಿಆರ್​ಪಿ ಪಡೆಯಬಹುದು ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಿತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಸಖತ್ ಅದ್ದೂರಿಯಾಗಿ ಓಪನಿಂಗ್ ಕಂಡ ಈ ಧಾರಾವಾಹಿ ಬಗ್ಗೆ ಮೆಚ್ಚುಗೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಈ ಧಾರಾವಾಹಿಯ ಟಿಆರ್​ಪಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ವಿಶೇಷ ಎಂದರೆ ಟಾಪ್ 3 ಧಾರಾವಾಹಿಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಾಗಾದರೆ ಯಾವ ಧಾರಾವಾಹಿಗೆ ಎಷ್ಟನೇ ಸ್ಥಾನ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಪುಟ್ಟಕ್ಕನ ಮಕ್ಕಳು

ಉಮಾಶ್ರೀ ನಟನೆಯ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಭರ್ಜರಿ ಟಿಆರ್​ಪಿ ಪಡೆದು ಮೊದಲ ಸ್ಥಾನವನ್ನು ಕಾಪಾಡಿಕೊಂಡಿದೆ. ಕಳೆದ ಕೆಲ ವಾರಗಳಿಂದ ಈ ಧಾರಾವಾಹಿಗೆ ಮೊದಲ ಸ್ಥಾನ ಸಿಗುತ್ತಿದೆ. ಈಗಲೂ ಒಳ್ಳೆಯ ಟಿಆರ್​ಪಿಯೊಂದಿಗೆ ಈ ಧಾರಾವಾಹಿ ಮುನ್ನುಗ್ಗುತ್ತಿದೆ. ಜೀ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.

ಗಟ್ಟಿಮೇಳ

‘ಗಟ್ಟಿಮೇಳ’ ಧಾರಾವಾಹಿ ಕೂಡ ಭರ್ಜರಿ ಟಿಆರ್​ಪಿ ಪಡೆದು ಎರಡನೇ ಸ್ಥಾನದಲ್ಲಿದೆ. ಈ ಧಾರಾವಾಹಿ ಜನರಿಗೆ ಇಷ್ಟವಾಗುತ್ತಿದೆ. ಈ ಧಾರಾವಾಹಿ ಈಗಾಗಲೇ ಸಾವಿರ ಎಪಿಸೋಡ್ ಪೂರ್ಣಗೊಳಿಸಿದೆ. ಆದಾಗ್ಯೂ ಎರಡನೇ ಸ್ಥಾನದಲ್ಲಿ ‘ಗಟ್ಟಿಮೇಳ’ ಇದೆ ಅನ್ನೋದು ವಿಶೇಷ.

ಅಮೃತಧಾರೆ

ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಇವರನ್ನು ಕಿರುತೆರೆಯಲ್ಲಿ ನೋಡಿ ಫ್ಯಾನ್ಸ್​ಗೆ ಖುಷಿ ಆಗಿದೆ. ‘ಅಮೃತಧಾರೆ’ ಧಾರಾವಾಹಿ ಟಿಆರ್​ಪಿ ಒಂದೇ ರೀತಿಯಲ್ಲಿದೆ. ಶೀಘ್ರದಲ್ಲೇ ಇವರ ಮದುವೆ ನೆರವೇರಲಿದ್ದು, ಆ ಸಂದರ್ಭದಲ್ಲಿ ಟಿಆರ್​ಪಿ ಹೆಚ್ಚಬಹುದು.

ಸೀತಾ ರಾಮ

ಕಳೆದ ವಾರ ಪ್ರಸಾರ ಆರಂಭಿಸಿದ ‘ಸೀತಾ ರಾಮ’ ಧಾರಾವಾಹಿಯ ಓಪನಿಂಗ್ ವೀಕ್ ಟಿಆರ್​ಪಿ ಹೊರ ಬಿದ್ದಿದೆ. ಈ ಧಾರಾವಾಹಿಗೆ ನಾಲ್ಕನೇ ಸ್ಥಾನ ಸಿಕ್ಕಿದೆ. ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಹಾಗೂ ರೀತು ಸಿಂಗ್ ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಧಾರಾವಾಹಿ ಟಿಆರ್​ಪಿ ಹೆಚ್ಚುವ ನಿರೀಕ್ಷೆ ಇದೆ.

ಇದನ್ನೂ ಓದಿ: ಸಖತ್ ಕ್ಯೂಟ್ ಲುಕ್​ನಲ್ಲಿ ಮಿಂಚಿದ ವೈಷ್ಣವಿ ಗೌಡ

ಐದರಿಂದ ಹತ್ತು ಹೀಗಿದೆ..

ಐದನೇ ಸ್ಥಾನದಲ್ಲಿ ‘ಶ್ರೀರಸ್ತು ಶುಭಮಸ್ತು’, ಆರನೇ ಸ್ಥಾನದಲ್ಲಿ ‘ಉಧೋ ಉಧೋ ಶ್ರೀ ರೇಣುಕಾ ಯೆಲ್ಲಮ್ಮ’, ಏಳನೇ ಸ್ಥಾನದಲ್ಲಿ ‘ಸತ್ಯ’, ಎಂಟನೇ ಸ್ಥಾನದಲ್ಲಿ ‘ಹಿಟ್ಲರ್ ಕಲ್ಯಾಣ’, ಒಂಭತ್ತನೇ ಸ್ಥಾನದಲ್ಲಿ ‘ಲಕ್ಷ್ಮೀ ಬಾರಮ್ಮ’, ಹತ್ತನೇ ಸ್ಥಾನದಲ್ಲಿ ‘ನೀನಾದೆ ನಾ’ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:38 pm, Thu, 27 July 23