ಹಿಂದಿ ಧಾರಾವಾಹಿ ನಟ ಈಗ ಬೆಂಗಳೂರಿನ ಕಾಲೇಜಿನಲ್ಲಿ ಪ್ರಾಧ್ಯಾಪಕ; ಯಾರು ಅವರು?

‘ಸಿಐಡಿ’ ಟಿವಿ ಸೀರಿಸ್​ನಲ್ಲಿ ವಿವೇಕ್ ಸಬ್ ಇನ್​ಸ್ಪೆಕ್ಟರ್ ಪಾತ್ರ ಮಾಡಿದ್ದರು. ಬಾಲ ನಟನಾಗಿಯೂ ಅವರು ಜನಪ್ರಿಯತೆ ಪಡೆದಿದ್ದರು.

ಹಿಂದಿ ಧಾರಾವಾಹಿ ನಟ ಈಗ ಬೆಂಗಳೂರಿನ ಕಾಲೇಜಿನಲ್ಲಿ ಪ್ರಾಧ್ಯಾಪಕ; ಯಾರು ಅವರು?
ವಿವೇಕ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jun 24, 2023 | 1:03 PM

ಚಿತ್ರರಂಗಕ್ಕೆ ಕಾಲಿಟ್ಟ ಎಲ್ಲರಿಗೂ ಯಶಸ್ಸು ಸಿಗುವುದಿಲ್ಲ. ಈ ರೀತಿ ಸಕ್ಸಸ್ ಸಿಗದೆ ಬೇರೆ ಕ್ಷೇತ್ರ ಆಯ್ದುಕೊಂಡ ಅನೇಕರಿದ್ದಾರೆ. ಆ ಸಾಲಿಗೆ ‘ಸಿಐಡಿ’ ಧಾರಾವಾಹಿಯಲ್ಲಿ ನಟಿಸಿದ ವಿವೇಕ್ ಮಶ್ರು (Vivek Mashru) ಕೂಡ ಸೇರುತ್ತಾರೆ. ಸೋನಿಯಲ್ಲಿ ಪ್ರಸಾರ ಕಾಣುತ್ತಿದ್ದ ‘ಸಿಐಡಿ’ ಟಿವಿ ಸೀರಿಸ್​ನಲ್ಲಿ ವಿವೇಕ್ ಸಬ್ ಇನ್​ಸ್ಪೆಕ್ಟರ್ ಪಾತ್ರ ಮಾಡಿದ್ದರು. ಬಾಲ ನಟನಾಗಿಯೂ ಅವರು ಜನಪ್ರಿಯತೆ ಪಡೆದಿದ್ದರು. ಈಗ ಅವರು ಬೆಂಗಳೂರಿನ ಕಾಲೇಜು ಒಂದರಲ್ಲಿ ಪ್ರಾಧ್ಯಾಪಕ ವೃತ್ತಿ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಸೋಶಿಯಲ್ ಮೀಡಿಯಾ ಮೂಲಕ ಈ ವಿಚಾರ ಗೊತ್ತಾಗಿದೆ.

1998ರಿಂದ-2018ರವರೆಗೆ ಸೋನಿ ಮೂಲಕ ‘ಸಿಐಡಿ’ ಧಾರಾವಾಹಿ ಪ್ರಸಾರ ಕಂಡಿತು. ಒಟ್ಟೂ 1,547 ಎಪಿಸೋಡ್​ಗಳು ಪ್ರಸಾರ ಕಂಡಿವೆ. 2006ರಿಂದ 2012ರವರೆಗೆ ಇನ್​ಸ್ಪೆಕ್ಟರ್ ವಿಕ್ರಮ್ ಪಾತ್ರದಲ್ಲಿ ವಿವೇಕ್ ಮಶ್ರು ನಟಿಸಿದ್ದರು. ಅದಕ್ಕೂ ಮೊದಲು ಅವರು ‘ಅಕ್ಕಡ್ ಬಕ್ಕಡ್ ಬಂಬೆ ಬೋ’ ಧಾರಾವಾಹಿಯಲ್ಲಿ ನಟಿಸಿದ್ದರು. ಈಗ ಅವರು ಏನು ಮಾಡುತ್ತಿದ್ದಾರೆ ಎನ್ನುವ ವಿಚಾರ ರಿವೀಲ್ ಆಗಿದೆ.

ವಿವೇಕ್ ಅವರ ಧಾರಾವಾಹಿ ದಿನಗಳ ಫೋಟೋನ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ‘ನಿಮಗೆ ಇವರು ಯಾರು ಎಂಬುದು ಗೊತ್ತಿದ್ದರೆ ನಿಮ್ಮ ಬಾಲ್ಯ ಅದ್ಭುತವಾಗಿತ್ತು ಎಂದರ್ಥ’ ಎಂದು ಅದಕ್ಕೆ ಕ್ಯಾಪ್ಶನ್ ನೀಡಲಾಗಿತ್ತು. ಇದನ್ನು ಅನೇಕರು ರೀಟ್ವೀಟ್ ಮಾಡಿಕೊಂಡಿದ್ದಾರೆ. ಅಲ್ಲದೆ, ಅವರು ಬೆಂಗಳೂರಿನ ಸಿಎಂಆರ್​ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಪಕ ವೃತ್ತಿ ಮಾಡುತ್ತಿದ್ದಾರೆ ಎನ್ನುವ ವಿಚಾರ ಗೊತ್ತಾಗಿದೆ. ಇತ್ತೀಚೆಗೆ ಲಿಂಕ್ಡ್​​ಇನ್​ನಲ್ಲಿ ಹೊಸ ಪೋಸ್ಟ್ ಹಾಕಿರುವ ವಿವೇಕ್, ಸಿಎಂಆರ್ ಯೂನಿವರ್ಸಿಟಿಯಲ್ಲಿ ಅವರ ಪಾಠ ಮುಗಿದಿದ್ದು, ಹೊಸ ಪ್ರಾಜೆಕ್ಟ್​ಗಾಗಿ ಅವರು ಬೇರೆ ಕಡೆ ತೆರಳುತ್ತಿದ್ದಾರಂತೆ.

ಇದನ್ನೂ ಓದಿ: ಡ್ರಗ್ ಕೇಸ್​ನಲ್ಲಿ ಸುದ್ದಿ ಆದ ಆಶು ರೆಡ್ಡಿ ಯಾರು? ಸಂದರ್ಶನದಲ್ಲಿ ಈ ನಟಿಯ ಕಾಲಿಗೆ ಮುತ್ತಿಟ್ಟಿದ್ರು ಆರ್​ಜಿವಿ

ಈ ಟ್ವೀಟ್​ನ ವಿವೇಕ್ ಶೇರ್ ಮಾಡಿಕೊಂಡು ಧನ್ಯವಾದ ಹೇಳಿದ್ದಾರೆ. ‘ನಿಮ್ಮ ಪ್ರೀತಿಗೆ ಧನ್ಯವಾದ. ನಾನು ಮಾಡಿದ ಸಣ್ಣ ಕೆಲಸವನ್ನು ನೀವು ಮೆಚ್ಚಿದ್ದೀರಿ. ಥ್ಯಾಂಕ್ ಯೂ’ ಎಂದಿದ್ದಾರೆ. ನಟನೆ ಬಿಟ್ಟ ಬಳಿಕ ವಿವೇಕ್ ಅವರು ಡೇಟಾ ಸೈನ್ಸ್ ಹಾಗೂ ಬಿಸ್ನೆಸ್ ಅನಾಲಿಟಿಕ್ಸ್​ನಲ್ಲಿ ಪಿಜಿ ಮಾಡಿದರು. ನಂತರ ಹಲವು ಶಿಕ್ಷಣ ಸಂಸ್ಥೆಯಲ್ಲಿ ಅವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:03 pm, Sat, 24 June 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್