ಹೀನಾಯ ಸ್ಥಿತಿ ತಲುಪಿದ ‘ಆದಿಪುರುಷ್’ ಕಲೆಕ್ಷನ್; ಸಿನಿಮಾ ಕಿತ್ತೊಗೆಯುತ್ತಿದ್ದಾರೆ ಚಿತ್ರಮಂದಿರದ ಮಾಲೀಕರು

‘ಆದಿಪುರುಷ್’ ಚಿತ್ರವನ್ನು ಟೀಕಿಸಲು ಭರಪೂರ ವಿಚಾರಗಳು ಸಿಗುತ್ತಿವೆ. ಸೈಫ್ ಅಲಿ ಖಾನ್ ಮಾಡಿರುವ ರಾವಣನ ಪಾತ್ರದಿಂದ ಹಿಡಿದು, ಚಿತ್ರದ ಸಂಭಾಷಣೆವರೆಗೆ ಅನೇಕ ರೀತಿಯ ಟೀಕೆಗಳು ವ್ಯಕ್ತವಾಗಿದೆ.

ಹೀನಾಯ ಸ್ಥಿತಿ ತಲುಪಿದ ‘ಆದಿಪುರುಷ್’ ಕಲೆಕ್ಷನ್; ಸಿನಿಮಾ ಕಿತ್ತೊಗೆಯುತ್ತಿದ್ದಾರೆ ಚಿತ್ರಮಂದಿರದ ಮಾಲೀಕರು
ಪ್ರಭಾಸ್, ಕೃತಿ ಸನೋನ್​
Follow us
ರಾಜೇಶ್ ದುಗ್ಗುಮನೆ
|

Updated on:Jun 24, 2023 | 2:08 PM

‘ಆದಿಪುರುಷ್’ ಸಿನಿಮಾದ (Adipurush Movie) ಕಲೆಕ್ಷನ್ ದಿನೇ ದಿನೇ ತಗ್ಗುತ್ತಿದೆ. ಸಿನಿಮಾ ಕ್ಷೇತ್ರದವರಿಗೆ ಶುಕ್ರವಾರ ವಿಶೇಷ ದಿನ. ಆ ದಿನವೂ ‘ಆದಿಪುರುಷ್’ ಸಿನಿಮಾ ಗಳಿಕೆ ಮಾಡಿದ್ದು ಕೇವಲ 3 ಕೋಟಿ ರೂಪಾಯಿ. 150 ರೂಪಾಯಿ ಟಿಕೆಟ್ ಆಫರ್​​ ಕೂಡ ಕೆಲಸ ಮಾಡಿಲ್ಲ. ಮತ್ತೊಂದು ಕಡೆ ಚಿತ್ರಮಂದಿರದಿಂದ ‘ಆದಿಪುರುಷ್’ ಶೋನ ಕಡಿತ ಮಾಡುವ ಕೆಲಸ ಆಗುತ್ತಿದೆ. ಅನೇಕ ಕಡೆಗಳಲ್ಲಿ ಶೋನ ಕಿತ್ತೆಸೆಯಲಾಗಿದೆ. ಹೀಗಾಗಿ, ವೀಕೆಂಡ್ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದ ಚಿತ್ರತಂಡಕ್ಕೆ ಸಾಕಷ್ಟು ಹಿನ್ನಡೆ ಉಂಟಾಗಿದೆ.

‘ಆದಿಪುರುಷ್’ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರ ಮಾಡಿದ್ದಾರೆ. ಕೃತಿ ಸನೋನ್ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಓಂ ರಾವತ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮೂಲಕ ಗೆಲ್ಲುವ ನಿರೀಕ್ಷೆಯಲ್ಲಿ ಇವರಿದ್ದರು. ಆದರೆ, ರಾಮಾಯಣವನ್ನು ಅಣಕಿಸಿದ ರೀತಿಯಲ್ಲಿ ‘ಆದಿಪುರುಷ್’ ಚಿತ್ರ ಇದೆ ಎಂದು ಅನೇಕರು ಆರೋಪಿಸಿದ್ದಾರೆ. ಈ ಕಾರಣಕ್ಕೆ ಸಿನಿಮಾಗೆ ಹಿನ್ನಡೆ ಉಂಟಾಗಿದೆ.

‘ಆದಿಪುರುಷ್’ ಚಿತ್ರವನ್ನು ಟೀಕಿಸಲು ಭರಪೂರ ವಿಚಾರಗಳು ಸಿಗುತ್ತಿವೆ. ಸೈಫ್ ಅಲಿ ಖಾನ್ ಮಾಡಿರುವ ರಾವಣನ ಪಾತ್ರದಿಂದ ಹಿಡಿದು, ಚಿತ್ರದ ಸಂಭಾಷಣೆವರೆಗೆ ಅನೇಕ ರೀತಿಯ ಟೀಕೆಗಳು ವ್ಯಕ್ತವಾಗಿದೆ. ರಾಮನ ಪಾತ್ರಕ್ಕೆ ಪ್ರಭಾಸ್ ಹೊಂದುತ್ತಿಲ್ಲ ಎಂಬುದು ಕೆಲವರ ಅಭಿಪ್ರಾಯ. ಸಿನಿಮಾ ರಿಲೀಸ್​ಗೂ ಮೊದಲು ಇದು ಸಂಪೂರ್ಣವಾಗಿ ರಾಮಾಯಣ ಆಧರಿತ ಚಿತ್ರ ಎನ್ನುತ್ತಿದ್ದ ತಂಡದವರು, ಸಿನಿಮಾ ರಿಲೀಸ್ ಆದ ಬಳಿಕ ‘ನಾವು ರಾಮಾಯಣವನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ ಅಷ್ಟೇ’ ಎಂದು ಹೇಳಿಕೆ ನೀಡಿದ್ದರು. ಇದು ಕೂಡ ಚಿತ್ರತಂಡಕ್ಕೆ ಹಿನ್ನಡೆ ಆಯಿತು.

ಇದನ್ನೂ ಓದಿ: Adipurush: ರಾಮ-ಸೀತೆ ಗೆಟಪ್​ನಲ್ಲಿ ಯಶ್​-ರಾಧಿಕಾ ಪಂಡಿತ್​; ವೈರಲ್​ ಆಗಿದೆ ಫೋಟೋ

ದೇಶದ ಹಲವು ಕಡೆಗಳಲ್ಲಿ ‘ಆದಿಪುರುಷ್’ ಸಿನಿಮಾ ಶೋ ಕಡಿಮೆ ಮಾಡಲಾಗುತ್ತಿದೆ. ಸೋಮವಾರ (ಜೂನ್ 19) 10+ ಕೋಟಿ ರೂಪಾಯಿ ಗಳಿಕೆ ಮಾಡಿದ್ದ ಈ ಚಿತ್ರ ಶುಕ್ರವಾರ (ಜೂನ್​ 23) ಕೇವಲ 3 ಕೋಟಿ ರೂಪಾಯಿ ಬಾಚಿಕೊಂಡಿದೆ. ಇಂದು (ಜೂನ್ 24) ಹಾಗೂ ನಾಳೆ (ಜೂನ್ 25) ಸಿನಿಮಾದ ಗಳಿಕೆ ಎಷ್ಟಾಗಲಿದೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:05 pm, Sat, 24 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ