Sara Ali Khan: ‘ಆದಿಪುರುಷ್’ ಕಿರಿಕ್ ಬದಿಗಿಟ್ಟು ಮಗಳ ಜೊತೆ ಬ್ರೇಕಿಂಗ್ ನ್ಯೂಸ್ ನೀಡಿದ ಸೈಫ್ ಅಲಿ ಖಾನ್
Adipurush Movie: ಸೈಫ್ ಅಲಿ ಖಾನ್ ಮತ್ತು ಸಾರಾ ಅವರು ಒಂದೇ ಸಿನಿಮಾದಲ್ಲಿ ನಟಿಸಬೇಕು ಎಂಬುದು ಅಭಿಮಾನಿಗಳ ಆಸೆ. ಅದಕ್ಕೆ ತಕ್ಕಂತೆ ಅನೇಕ ನಿರ್ದೇಶಕರು ಮತ್ತು ನಿರ್ಮಾಪಕರು ಅವಕಾಶವನ್ನೂ ನೀಡಲು ಮುಂದಾಗಿದ್ದರು.
ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಮತ್ತು ಅವರ ಮಗಳು ಸಾರಾ ಅಲಿ ಖಾನ್ ಕಳೆದ ಕೆಲವು ದಿನಗಳಿಂದ ಬಹಳ ಸುದ್ದಿ ಆಗುತ್ತಿದ್ದಾರೆ. ಅದಕ್ಕೆ ಕಾರಣ ಅವರಿಬ್ಬರ ಪ್ರತ್ಯೇಕ ಸಿನಿಮಾಗಳು. ಸಾರಾ ನಟನೆಯ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಹಿಟ್ ಆಯಿತು. ಅತ್ತ, ಸೈಫ್ ಅಲಿ ಖಾನ್ ನಟಿಸಿದ ‘ಆದಿಪುರುಷ್’ ಸಿನಿಮಾ (Adipurush Movie) ಸಾಕಷ್ಟು ನೆಗೆಟಿವ್ ವಿಮರ್ಶೆ ಪಡೆದುಕೊಂಡಿದೆ. ಈ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಅವರು ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಆ ಪಾತ್ರ ಮೂಡಿಬಂದಿರುವ ರೀತಿ ಸರಿಯಿಲ್ಲ ಎಂದು ಪ್ರೇಕ್ಷಕರು ತಕಾರಾರು ತೆಗೆದಿದ್ದಾರೆ. ಈ ಬಗ್ಗೆ ಸೈಫ್ ಸಂಪೂರ್ಣ ಮೌನ ತಾಳಿದ್ದಾರೆ. ಆದರೆ ಬೇರೊಂದು ವಿಚಾರದ ಬಗ್ಗೆ ಮೌನ ಮುರಿದಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸಾರಾ ಅಲಿ ಖಾನ್ (Sara Ali Khan) ಜೊತೆ ನಟಿಸಿದ್ದಾರೆ. ಆದರೆ ಅದು ಸಿನಿಮಾಗಾಗಿ ಅಲ್ಲ. ಬದಲಿಗೆ, ಒಂದು ಜಾಹೀರಾತಿನಲ್ಲಿ ತಂದೆ-ಮಗಳು ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.
ಸಾರಾ ಅಲಿ ಖಾನ್ ಅವರು ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವರಿಗೆ ಬಾಲಿವುಡ್ನಲ್ಲಿ ಸುಲಭವಾಗಿ ಅವಕಾಶಗಳು ಸಿಕ್ಕವು. ಆದರೆ ಅವರು ಯಶಸ್ಸು ಕಾಣಬೇಕಾದರೆ ಸ್ವಂತ ಸಾಮರ್ಥ್ಯ ಇರಲೇಬೇಕು. ಇತ್ತೀಚಿನ ವರ್ಷಗಳಲ್ಲಿ ಅವರ ನಟನೆ ಸುಧಾರಿಸುತ್ತಿದೆ. ಅವರು ನಟಿಸಿದ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಬರೋಬ್ಬರಿ 70 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ‘ಆದಿಪುರುಷ್’ ಸಿನಿಮಾದ ಅಬ್ಬರದ ನಡುವೆಯೂ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಹಲವು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈಗ ಸಾರಾ ಆಲಿ ಖಾನ್ ಅವರು ಜಾಹೀರಾತಿನಲ್ಲಿ ತಂದೆಯ ಜೊತೆ ನಟಿಸಿ ಸುದ್ದಿ ಆಗಿದ್ದಾರೆ.
ಇದನ್ನೂ ಓದಿ: 150 ರೂಪಾಯಿ ಟಿಕೆಟ್ ದರ ನಿಗದಿ ಮಾಡಿದರೂ ಜನ ಬರಲಿಲ್ಲ; ಉಲ್ಟಾ ಆಯ್ತು ‘ಆದಿಪುರುಷ್’ ಪ್ಲಾನ್
ಸೈಫ್ ಮತ್ತು ಸಾರಾ ಅವರು ಒಂದೇ ಸಿನಿಮಾದಲ್ಲಿ ನಟಿಸಬೇಕು ಎಂಬುದು ಅಭಿಮಾನಿಗಳ ಆಸೆ. ಅದಕ್ಕೆ ತಕ್ಕಂತೆ ಅನೇಕ ನಿರ್ದೇಶಕರು ಮತ್ತು ನಿರ್ಮಾಪಕರು ಅವಕಾಶವನ್ನೂ ನೀಡಲು ಮುಂದಾಗಿದ್ದರು. ಆದರೆ ಈವರೆಗೂ ಅದಕ್ಕೆ ಸೈಫ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಆದರೆ ಇದೇ ಮೊದಲ ಬಾರಿಗೆ ಜಾಹೀರಾತಿನಲ್ಲಿ ಮಗಳ ಜೊತೆ ಅವರು ತೆರೆ ಹಂಚಿಕೊಂಡಿರುವುದು ವಿಶೇಷ. ಇತ್ತೀಚೆಗಷ್ಟೇ ಇದರ ಶೂಟಿಂಗ್ ಮುಕ್ತಾಯ ಆಗಿದೆ. ಇದು ವಿಮಾ ಕಂಪನಿಯ ಜಾಹೀರಾತು ಎಂಬ ಮಾಹಿತಿ ಸಿಕ್ಕಿದೆ. ಆ ಜಾಹೀರಾತು ಹೇಗೆ ಮೂಡಿಬಂದಿದೆ ಎಂಬುದನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ‘ಆದಿಪುರುಷ್’ ಸಿನಿಮಾ ನೋಡಲು 5,500 ಕಿಮೀ ಪ್ರಯಾಣಿಸಿದ ಪ್ರಭಾಸ್ ಮಹಿಳಾ ಅಭಿಮಾನಿ
ಸೆಲೆಬ್ರಿಟಿಗಳು ಸಿನಿಮಾ ಮಾತ್ರವಲ್ಲದೇ ಜಾಹೀರಾತಿನ ಮೂಲಕವೂ ಹಣ ಸಂಪಾದಿಸುತ್ತಾರೆ. ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಿದರೆ ಜಾಹೀರಾತು ಕ್ಷೇತ್ರದಲ್ಲಿ ಸಖತ್ ಬೇಡಿಕೆ ಸೃಷ್ಟಿ ಆಗುತ್ತದೆ. ಸಾರಾ ಅಲಿ ಖಾನ್ ಅವರು ಹಲವು ಕಂಪನಿಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಅದೇ ರೀತಿ ಸೈಫ್ ಅಲಿ ಖಾನ್ ಕೂಡ ಜಾಹೀರಾತಗಳಿಂದ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.