150 ರೂಪಾಯಿ ಟಿಕೆಟ್ ದರ ನಿಗದಿ ಮಾಡಿದರೂ ಜನ ಬರಲಿಲ್ಲ; ಉಲ್ಟಾ ಆಯ್ತು ‘ಆದಿಪುರುಷ್’ ಪ್ಲಾನ್
ತಂಡದವರು 150 ರೂಪಾಯಿ ಟಿಕೆಟ್ ಆಫರ್ ಕೊಟ್ಟರೂ ಜನರು ಸಿನಿಮಾ ನೋಡುತ್ತಿಲ್ಲ. ಈ ಬೆಳವಣಿಗೆಯಿಂದ ಪ್ರಭಾಸ್ ಸಿನಿಮಾ ಅತೀ ಶೀಘ್ರದಲ್ಲೇ ಒಟಿಟಿಗೆ ಕಾಲಿಡಲಿದೆ ಎನ್ನಲಾಗುತ್ತಿದೆ.
‘ಆದಿಪುರುಷ್’ ಚಿತ್ರ (Adipurush Movie) ಮೊದಲ ದಿನ ಅಬ್ಬರಿಸಿದ ಪರಿ ನೋಡಿ ಅನೇಕರು ಅಚ್ಚರಿಗೊಂಡರು. ಈ ಚಿತ್ರ ವೀಕೆಂಡ್ನಲ್ಲಿ ಕಮಾಯಿ ಮಾಡಿದ್ದಷ್ಟೇ, ವಾರದ ದಿನಗಳಲ್ಲಿ ಸಿನಿಮಾ ನೆಲಕಚ್ಚಿತು. ಮೊದಲ ದಿನ ಭಾರತದ ಬಾಕ್ಸ್ ಆಫೀಸ್ನಲ್ಲಿ 140 ಕೋಟಿ ರೂಪಾಯಿ ಬಾಚಿಕೊಂಡಿದ್ದ ಈ ಚಿತ್ರ ಏಳನೇ ದಿನಕ್ಕೆ ಕೇವಲ 5.5 ಕೋಟಿ ರೂಪಾಯಿ ಕಮಾಯಿ ಮಾಡಿ ತೃಪ್ತಿಪಟ್ಟುಕೊಂಡಿದೆ. ತಂಡದವರು 150 ರೂಪಾಯಿ ಟಿಕೆಟ್ ಆಫರ್ ಕೊಟ್ಟರೂ ಜನರು ಸಿನಿಮಾ ನೋಡುತ್ತಿಲ್ಲ. ಈ ಬೆಳವಣಿಗೆಯಿಂದ ಪ್ರಭಾಸ್ (Prabhas) ಸಿನಿಮಾ ಅತೀ ಶೀಘ್ರದಲ್ಲೇ ಒಟಿಟಿಗೆ ಕಾಲಿಡಲಿದೆ ಎಂಬುದು ಬಹುತೇಕ ಖಚಿತವಾಗಿದೆ.
ಮೊದಲು ಸಿನಿಮಾ ರಿಲೀಸ್ ಆಗಿ ಹಲವು ತಿಂಗಳ ಬಳಿಕ ಟಿವಿಯಲ್ಲಿ ಪ್ರಸಾರ ಕಾಣುತ್ತಿತ್ತು. ಅದರಲ್ಲೂ ಸೂಪರ್ ಹಿಟ್ ಚಿತ್ರಗಳು ಟಿವಿಯಲ್ಲಿ ಪ್ರಸಾರ ಕಾಣಬೇಕು ಎಂದರೆ ವಿಶೇಷ ದಿನ ಬರಬೇಕು. ಈ ಕಾರಣಕ್ಕೆ ಅನೇಕರು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಲು ಬಯಸುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಜನರು ಮೊದಲು ವಿಮರ್ಶೆ ನೋಡುತ್ತಾರೆ. ಚಿತ್ರ ಚೆನ್ನಾಗಿದ್ದರೆ ಮಾತ್ರ ಥಿಯೇಟರ್ಗೆ ಹೋಗುತ್ತಾರೆ. ವಿಮರ್ಶಕರು ಸ್ವಲ್ಪ ನೆಗೆಟಿವ್ ವಿಮರ್ಶೆ ನೀಡಿದರೂ ಸಿನಿಮಾನ ಒಟಿಟಿಯಲ್ಲಿ ನೋಡೋಣ ಎಂದು ಸುಮ್ಮನಾಗುತ್ತಾರೆ. ಈಗ ‘ಆದಿಪುರುಷ್’ ಚಿತ್ರವನ್ನು ಒಟಿಟಿಯಲ್ಲಿ ನೋಡೋಣ ಎಂದು ಅನೇಕರು ಸುಮ್ಮನಾಗಿದ್ದಾರೆ. ಹೀಗಾಗಿ, ಚಿತ್ರದ ಗಳಿಕೆಯಲ್ಲಿ ಇಳಿಕೆ ಆಗಿದೆ.
ಇದನ್ನೂ ಓದಿ: ‘ಆದಿಪುರುಷ್’ ಸಿನಿಮಾ ನೋಡಲು 5,500 ಕಿಮೀ ಪ್ರಯಾಣಿಸಿದ ಪ್ರಭಾಸ್ ಮಹಿಳಾ ಅಭಿಮಾನಿ
‘ಆದಿಪುರುಷ್’ ಸಿನಿಮಾ ವಿಶ್ವಮಟ್ಟದಲ್ಲಿ 400+ ಕೋಟಿ ರೂಪಾಯಿ ಗಳಿಸಿದೆ. ಭಾರತದಲ್ಲಿ ಎಲ್ಲಾ ಭಾಷೆಗಳಿಂದ ಈ ಚಿತ್ರ ಗಳಿಕೆ ಮಾಡಿದ್ದು 250+ ಕೋಟಿ ರೂಪಾಯಿ. ಗುರುವಾರ (ಜೂನ್ 22) ಈ ಚಿತ್ರ 5.5 ಕೋಟಿ ರೂಪಾಯಿಗೆ ತೃಪ್ತಿಪಟ್ಟುಕೊಂಡಿದೆ. ಈ ವೀಕೆಂಡ್ನಲ್ಲಿ ಸಿನಿಮಾ ಯಾವ ರೀತಿಯಲ್ಲಿ ಕಮಾಯಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಗುರುವಾರ ಮಲ್ಟಿಪ್ಲೆಕ್ಸ್ಗಳಲ್ಲಿ 150 ರೂಪಾಯಿಗೆ ಟಿಕೆಟ್ ಬೆಲೆ ಇಳಿಸಲಾಗಿತ್ತು. ಐನಾಕ್ಸ್, ಪಿವಿಆರ್ ಮೊದಲಾದ ಕಡೆಗಳಲ್ಲಿ ಈ ಆಫರ್ ಇತ್ತು. ಇಷ್ಟೇ ಅಲ್ಲದೆ ಸಿನಿಮಾದ ವಿವಾದಾತ್ಮಕ ಡೈಲಾಗ್ಗಳನ್ನು ಬದಲಿಸಲಾಗಿದೆ. ಆದಾಗ್ಯೂ ಜನರು ಸಿನಿಮಾ ನೋಡಲು ಬರುತ್ತಿಲ್ಲ. ಇದು ಚಿತ್ರತಂಡಕ್ಕೆ ಹಿನ್ನಡೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:18 am, Fri, 23 June 23