AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ನಿರ್ದೇಶಕನ ಚಿತ್ರದಲ್ಲಿ ಒಟ್ಟಾಗಿ ನಟಿಸಲಿದ್ದಾರೆ ನಾಗ ಚೈತನ್ಯ-ಕೀರ್ತಿ ಸುರೇಶ್

‘ಕಾರ್ತಿಕೇಯ 2’ ನಿರ್ದೇಶಕ ಚಂದು ಮುಂಡೇಟಿ ಸಿನಿಮಾದಲ್ಲಿ ನಾಗ ಚೈತನ್ಯ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಗ ಚೈತನ್ಯಗೆ ಜೊತೆಯಾಗಿ ಕೀರ್ತಿ ಸುರೇಶ್ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

ಖ್ಯಾತ ನಿರ್ದೇಶಕನ ಚಿತ್ರದಲ್ಲಿ ಒಟ್ಟಾಗಿ ನಟಿಸಲಿದ್ದಾರೆ ನಾಗ ಚೈತನ್ಯ-ಕೀರ್ತಿ ಸುರೇಶ್
ಕೀರ್ತಿ ಸುರೇಶ್-ನಾಗ ಚೈತನ್ಯ
Follow us
ರಾಜೇಶ್ ದುಗ್ಗುಮನೆ
|

Updated on: Jun 25, 2023 | 6:45 AM

ನಾಗ ಚೈತನ್ಯ ಅಕ್ಕಿನೇನಿ (Naga Chaitanya) ದೊಡ್ಡ ಹಿಟ್‌ಗಾಗಿ ಕಾಯುತ್ತಿದ್ದಾರೆ. 2019ರಲ್ಲಿ ರಿಲೀಸ್ ಆದ ‘ಮಜಿಲಿ’ ಚಿತ್ರವೇ ಕೊನೆ. ಇದಾದ ಬಳಿಕ ಅವರಿಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಶೇಖರ್ ಕಮ್ಮುಲ ನಿರ್ದೇಶನದ ‘ಲವ್ ಸ್ಟೋರಿ’ ಸಿನಿಮಾ (Love Story Movie) ಸಾಧಾರಣ ಹಿಟ್ ಎನಿಸಿಕೊಂಡಿತು. ‘ಮಜಿಲಿ’ ಮತ್ತು ‘ಲವ್ ಸ್ಟೋರಿ’ ಚಿತ್ರಗಳಲ್ಲಿನ ಅವರ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈಗ ನಾಗ ಚೈತನ್ಯ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಜೊತೆಯಾಗಿ ಕೀರ್ತಿ ಸುರೇಶ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

‘ದೂತ’ ಹೆಸರಿನ ವೆಬ್ ಸೀರಿಸ್ ತಯಾರಾಗುತ್ತಿದೆ. ಸಾಗರ್ ಹೆಸರಿನ ಪಾತ್ರವನ್ನು ನಾಗ ಚೈತನ್ಯ ಮಾಡುತ್ತಿದ್ದಾರೆ. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಈ ಸೀರಿಸ್ ರಿಲೀಸ್ ಆಗಲಿದೆ. ಇದರ ಜೊತೆ ‘ಕಾರ್ತಿಕೇಯ 2’ ನಿರ್ದೇಶಕ ಚಂದು ಮುಂಡೇಟಿ ಸಿನಿಮಾದಲ್ಲಿ ನಾಗ ಚೈತನ್ಯ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಗ ಚೈತನ್ಯಗೆ ಜೊತೆಯಾಗಿ ಕೀರ್ತಿ ಸುರೇಶ್ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ನಾಗ ಚೈತನ್ಯ ಮತ್ತು ಚಂದು ಮುಂಡೇಟಿ ಕಾಂಬಿನೇಷನ್​ನಲ್ಲಿ ಈ ಮೊದಲು ‘ಪ್ರೇಮಂ’ ಮತ್ತು ‘ಸವ್ಯಸಾಚಿ’ ತೆರೆಕಂಡಿವೆ. ಇವರ ಕಾಂಬಿನೇಷನ್​ನಲ್ಲಿ ಮೂರನೇ ಸಿನಿಮಾ ಬರುತ್ತಿದೆ.

ನಾಗ ಚೈತನ್ಯಗೋಸ್ಕರ ಚಂದು ಈಗಾಗಲೇ ರೋಚಕ ಕಥೆಯನ್ನು ಸಿದ್ಧಪಡಿಸಿದ್ದಾರೆ. ಕೀರ್ತಿ ಸುರೇಶ್‌ಗೆ ಈ ಕಥೆ ಸರಿಯಾಗಿ ಹೊಂದುತ್ತದೆ ಎಂಬುದು ಮೂಲಗಳ ಮಾಹಿತಿ. ಈ ಹಿಂದೆ ಕೀರ್ತಿ ಸುರೇಶ್ ಅಭಿನಯದ ಮಹಾನಟಿ ಚಿತ್ರದಲ್ಲಿ ನಾಗ ಚೈತನ್ಯ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಅಕ್ಕಿನೇನಿ ನಾಗೇಶ್ವರ ರಾವ್ ಪಾತ್ರದಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಪಡೆದಿದ್ದರು.

ಇದನ್ನೂ ಓದಿ: ಮಾಮನನ್ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಕೀರ್ತಿ ಸುರೇಶ್ ಕಂಗೊಳಿಸಿದ್ದು ಹೀಗೆ

ಹೊಸ ಸಿನಿಮಾದಲ್ಲಿ ಅನುಪಮಾ ಪರಮೇಶ್ವರನ್ ಅವರಿಗೆ ಮಣೆ ಹಾಕಲು ತಂಡ ಪ್ಲ್ಯಾನ್ ಮಾಡಿತ್ತು. ಆದರೆ ಅವರು ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವುದರಿಂದ ಡೇಟ್ಸ್ ಹೊಂದಿಸಲು ಆಗಿಲ್ಲ. ಹೀಗಾಗಿ ಅವರು ಚಿತ್ರ ಒಪ್ಪಿಲ್ಲ. ಈ ಕಾರಣಕ್ಕೆ ಕೀರ್ತಿಯನ್ನು ಫೈನಲ್ ಮಾಡಲಾಗಿದೆ. ನಾಗ ಚೈತನ್ಯ ಹಾಗೂ ಕೀರ್ತಿ ಸುರೇಶ್​ನ ತೆರೆಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ. ಚಂದು ಎಂದಿನಂತೆ ಥ್ರಿಲ್ಲರ್ ಕಥೆಯೊಂದಿಗೆ ಬರುತ್ತಾರಾ ಅಥವಾ ಯಾವುದಾದರೂ ಪ್ರೇಮಕಥೆಯನ್ನು ಪ್ರೇಕ್ಷಕರ ಮುಂದಿಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ