AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mahesh Babu: ಅಂದು ಯಶ್​, ಈಗ ಮಹೇಶ್​ ಬಾಬು; ರೇಂಜ್​ ರೋವರ್​ ಕಾರು ಖರೀದಿಸಿದ ಸೂಪರ್​ ಸ್ಟಾರ್ಸ್​

Range Rover: ಕೆಲವೇ ದಿನಗಳ ಹಿಂದೆ ‘ರಾಕಿಂಗ್​ ಸ್ಟಾರ್​’ ಯಶ್​ ಅವರು ರೇಂಜ್​ ರೋವರ್​ ಕಾರು ಖರೀದಿಸಿದ್ದರು. ಈಗ ಮಹೇಶ್​ ಬಾಬು ಮನೆಗೆ ಗೋಲ್ಡ್​ ಕಲರ್​ನ ರೇಂಜ್​ ರೋವರ್​ ಕಾರು ಬಂದಿದೆ.

Mahesh Babu: ಅಂದು ಯಶ್​, ಈಗ ಮಹೇಶ್​ ಬಾಬು; ರೇಂಜ್​ ರೋವರ್​ ಕಾರು ಖರೀದಿಸಿದ ಸೂಪರ್​ ಸ್ಟಾರ್ಸ್​
ಮಹೇಶ್​ ಬಾಬು, ರೇಂಜ್​ ರೋವರ್​
ಮದನ್​ ಕುಮಾರ್​
|

Updated on:Jun 25, 2023 | 8:55 AM

Share

ಸೆಲೆಬ್ರಿಟಿಗಳಿಗೆ ಕಾರುಗಳ ಬಗ್ಗೆ ವಿಶೇಷ ಕ್ರೇಜ್​ ಇರುತ್ತದೆ. ಈ ವಿಚಾರದಲ್ಲಿ ತೆಲುಗು ನಟ ಮಹೇಶ್​ ಬಾಬು (Mahesh Babu) ಕೂಡ ಹೊರತಾಗಿಲ್ಲ. ಟಾಲಿವುಡ್​ನಲ್ಲಿ ಸಖತ್​ ಬೇಡಿಕೆ ಹೊಂದಿರುವ ಅವರು ಈಗ ‘ಗುಂಟೂರು ಖಾರಂ’ (Guntur Kaaram) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಹೊಸ ಕಾರು ಖರೀದಿಸುವ ಮೂಲಕ ಸುದ್ದಿ ಆಗಿದ್ದಾರೆ. ಅಂದಹಾಗೆ, ಮಹೇಶ್ ಬಾಬು ಖರೀದಿಸಿರುವುದು ಗೋಲ್ಡ್​ ಕಲರ್​ನ ರೇಂಜ್​ ರೋವರ್​ ಕಾರು. ಸೋಶಿಯಲ್​ ಮೀಡಿಯಾದಲ್ಲಿ ಇದರ ಫೋಟೋ ವೈರಲ್​ ಆಗಿದೆ. ಇನ್ನು, ಇದರ ಬೆಲೆ ಕೇಳಿ ಅನೇಕರು ಹೌಹಾರಿದ್ದಾರೆ. ಹೌದು, ಈ ರೇಂಜ್​ ರೋವರ್​ (Range Rover) ಕಾರಿನ ಬೆಲೆ ಬರೋಬ್ಬರಿ 5.4 ಕೋಟಿ ರೂಪಾಯಿ!

ಕೆಲವೇ ದಿನಗಳ ಹಿಂದೆ ‘ರಾಕಿಂಗ್​ ಸ್ಟಾರ್​’ ಯಶ್​ ಕೂಡ ರೇಂಜ್​ ರೋವರ್​ ಕಾರು ಖರೀದಿಸಿದ್ದರು. ಕಪ್ಪು ಬಣ್ಣದ ರೇಂಜ್​ ರೋವರ್​ ಕಾರಿನ ಜೊತೆ ಅವರು ಪೋಸ್​ ನೀಡಿದ್ದ ಫೋಟೋ ವೈರಲ್​ ಆಗಿತ್ತು. ಈಗ ‘ಪ್ರಿನ್ಸ್​’ ಮಹೇಶ್​ ಬಾಬು ಕೂಡ ರೇಂಜ್​ ರೋವರ್​ ಕಾರು ಖರೀದಿಸಿದ್ದಾರೆ. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಇದ್ದಾರೆ. ಪ್ರತಿ ಸಿನಿಮಾಗೆ ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅದಕ್ಕೆ ತಕ್ಕಂತೆಯೇ ಅವರ ಲೈಫ್​ ಸ್ಟೈಲ್​ ಇದೆ. ಈಗ ಅವರ ಕಾರ್​ ಕಲೆಕ್ಷನ್​ಗೆ ರೇಂಜ್​ ರೋವರ್​ ಸೇರ್ಪಡೆ ಆಗಿದೆ. ಅನೇಕ ಐಷಾರಾಮಿ ಸೌಲಭ್ಯಗಳು ಈ ಕಾರಿನಲ್ಲಿ ಇವೆ. ಮೋಹನ್​ಲಾಲ್​, ಜೂನಿಯರ್​ ಎನ್​ಟಿಆರ್​, ಚಿರಂಜೀವಿ ಮುಂತಾದ ಸ್ಟಾರ್​ ನಟರ ಬಳಿಯೂ ಈ ಕಾರ್​ ಇದೆ.

ಇದನ್ನೂ ಓದಿ: Yash: ರೇಂಜ್​ ರೋವರ್ ಕಾರಲ್ಲಿ ಹೇಗಿತ್ತು ನೋಡಿ ಯಶ್ ಎಂಟ್ರಿ

ಸಿನಿಮಾ ವಿಚಾರಕ್ಕೆ ಬರೋದಾದರೆ, ಕೆಲವೇ ದಿನಗಳ ಹಿಂದೆ ಮಹೇಶ್​ ಬಾಬು ಅವರ ‘ಗುಂಟೂರು ಖಾರಂ’ ಸಿನಿಮಾದ ಟೈಟಲ್​ ಮತ್ತು ಫಸ್ಟ್​ ಲುಕ್​ ಪೋಸ್ಟರ್​ ಬಹಿರಂಗ ಆಯಿತು. ತ್ರಿವಿಕ್ರಮ್​ ಶ್ರೀನಿವಾಸ್​ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಕಾರಣಾಂತರಗಳಿಂದ ನಟಿ ಪೂಜಾ ಹೆಗ್ಡೆ ಅವರು ಈ ಸಿನಿಮಾದಿಂದ ಹೊರನಡೆದಿದ್ದಾರೆ. ಇನ್ನೋರ್ವ ನಾಯಕಿಯ ಪಾತ್ರದಲ್ಲಿ ಕನ್ನಡದ ನಟಿ ಶ್ರೀಲೀಲಾ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: Mahesh Babu: ಹಾಲಿವುಡ್​ ಹೀರೋ ರೀತಿ ಕಾಣಿಸಿದ ಮಹೇಶ್​ ಬಾಬು; ಸ್ಟೈಲಿಶ್​ ಆಗಿ ಹೊಸ ಫೋಟೋಶೂಟ್​ಗೆ ಪೋಸ್​ ನೀಡಿದ ‘ಪ್ರಿನ್ಸ್​’

ಪಾತ್ರವರ್ಗದ ಕಾರಣದಿಂದ ‘ಗುಂಟೂರು ಖಾರಂ’ ಸಿನಿಮಾ ಸುದ್ದಿ ಆಗುತ್ತಿದೆ. ಈ ಸಿನಿಮಾದಲ್ಲಿ ಮಹೇಶ್​ ಬಾಬು ಅವರ ತಾಯಿ ಪಾತ್ರವನ್ನು ರಮ್ಯಾ ಕೃಷ್ಣನ್​ ಮಾಡಲಿದ್ದಾರೆ ಎಂಬ ಗಾಸಿಪ್​ ಹರಡಿದೆ. ಆ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಖ್ಯಾತ ನಿರ್ದೇಶಕ ರಾಜಮೌಳಿ ಜೊತೆಗೂ ಮಹೇಶ್ ಬಾಬು ಸಿನಿಮಾ ಮಾಡಬೇಕಿದೆ. ಆ ಸಿನಿಮಾದ ಸ್ಕ್ರಿಪ್ಟ್​ ಕೆಲಸಗಳು ಭರದಿಂದ ಸಾಗುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:16 am, Sun, 25 June 23

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್