Mahesh Babu: ಹಾಲಿವುಡ್ ಹೀರೋ ರೀತಿ ಕಾಣಿಸಿದ ಮಹೇಶ್ ಬಾಬು; ಸ್ಟೈಲಿಶ್ ಆಗಿ ಹೊಸ ಫೋಟೋಶೂಟ್ಗೆ ಪೋಸ್ ನೀಡಿದ ‘ಪ್ರಿನ್ಸ್’
Mahesh Babu New Photoshoot: ಟಾಲಿವುಡ್ನಲ್ಲಿ ಮಹೇಶ್ ಬಾಬು ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಂತ ಅವರ ಖ್ಯಾತಿ ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ.
Updated on: Jun 10, 2023 | 9:08 AM

ನಟ ಮಹೇಶ್ ಬಾಬು ಅವರು ಸದಾ ಟ್ರೆಂಡ್ನಲ್ಲಿ ಇರುತ್ತಾರೆ. ಅವರಿಗೆ ಫ್ಯಾಷನ್ ಬಗ್ಗೆ ಉತ್ತಮ ಅಭಿರುಚಿ ಇದೆ. ಈಗ ಮಹೇಶ್ ಬಾಬು ಹೊಸ ಫೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ.

ಟಾಲಿವುಡ್ನಲ್ಲಿ ಮಹೇಶ್ ಬಾಬು ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಂತ ಅವರ ಖ್ಯಾತಿ ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶಾದ್ಯಂತ ಮಹೇಶ್ ಬಾಬು ಹವಾ ಸೃಷ್ಟಿ ಮಾಡಿದ್ದಾರೆ.

ಇತ್ತೀಚೆಗೆಷ್ಟೇ ಮಹೇಶ್ ಬಾಬು ಅವರ ಹೊಸ ಸಿನಿಮಾದ ಟೈಟಲ್ ರಿವೀಲ್ ಆಯಿತು. ಆ ಚಿತ್ರಕ್ಕೆ ‘ಗುಂಟೂರು ಖಾರಂ’ ಎಂದು ಹೆಸರು ಇಡಲಾಗಿದೆ. ಇದರ ಬೆನ್ನಲ್ಲೇ ಅವರ ಹೊಸ ಫೋಟೋಗಳು ವೈರಲ್ ಆಗಿವೆ.

ಈ ಫೋಟೋಶೂಟ್ನಲ್ಲಿ ಮಹೇಶ್ ಬಾಬು ಅವರ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಪಕ್ಕಾ ಹಾಲಿವುಡ್ ಹೀರೋ ರೀತಿ ಮಹೇಶ್ ಬಾಬು ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಸಿನಿಮಾ ಕೆಲಸಗಳಲ್ಲಿ ಮಹೇಶ್ ಬಾಬು ಅವರು ಗಡಿಬಿಡಿ ಮಾಡುವುದಿಲ್ಲ. ಸಿನಿಮಾಗಳ ಜೊತೆಯಲ್ಲಿ ಅವರು ಫ್ಯಾಮಿಲಿಗೂ ಹೆಚ್ಚು ಸಮಯ ನೀಡುತ್ತಾರೆ. ಆದಷ್ಟು ಬೇಗ ಮತ್ತೆ ಅವರನ್ನು ದೊಡ್ಡ ಪರದೆಯಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ.
























