‘ಅಮೃತಧಾರೆ’ ಧಾರಾವಾಹಿ ಆರಂಭ ಆಗಿ ವರ್ಷಗಳೇ ಕಳೆದಿವೆ. ಆರಂಭದ ದಿನಗಳಲ್ಲಿ ಈ ಧಾರಾವಾಹಿಗೆ ಒಳ್ಳೆಯ ಟಿಆರ್ಪಿ ಸಿಗುತ್ತಿತ್ತು. ನಂತರದ ದಿನಗಳಲ್ಲಿ ಅಷ್ಟಾಗಿ ಟಿಆರ್ಪಿ ಸಿಕ್ಕಿಲ್ಲ. ಈಗ 39ನೇ ವಾರದ ಲಿಸ್ಟ್ನಲ್ಲಿ ‘ಅಮೃತಧಾರೆ’ ಧಾರಾವಾಹಿ ಕರ್ನಾಟಕದಲ್ಲಿ ನಂಬರ್ 1 ಸ್ಥಾನ ಪಡೆದಿದೆ. ಈ ಮೂಲಕ ಅಚ್ಚರಿಯ ಕಂಬ್ಯಾಕ್ ಮಾಡಿದೆ. ಇದು ತಂಡದ ಖುಷಿ ಹೆಚ್ಚಿಸಿದೆ. ಟಾಪ್ ಐದರಲ್ಲಿ ಇರುವ ಧಾರಾವಾಹಿಗಳ ಪಟ್ಟಿ ಇಲ್ಲಿದೆ.
‘ಅಮೃತಧಾರೆ’ ಧಾರಾವಾಹಿಯಲ್ಲಿ ರಾಜೇಶ್ ನಟರಂಗ, ಛಾಯಾ ಸಿಂಗ್ ಮೊದಲಾದವರು ನಟಿಸುತ್ತಿದ್ದಾರೆ. ಈ ದಾರಾವಾಹಿಗೆ ಮೊದಲ ಸ್ಥಾನ ಸಿಕ್ಕಿದೆ. ಈ ಧಾರಾವಾಹಿಯ ಕಂಬ್ಯಾಕ್ ಫ್ಯಾನ್ಸ್ಗೆ ಖುಷಿ ಕೊಟ್ಟಿದೆ. ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ‘ಪುಟ್ಟಕ್ಕನ ಮಕ್ಕಳು’ ಸಮಯ ಬದಲಾವಣೆ ನಂತರದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ನಂಬರ್ 1 ಸ್ಥಾನ ಕಾಪಾಡಿಕೊಳ್ಳುತ್ತಾ ಬರುತ್ತಿತ್ತು.
ಮೂರನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ನಾಲ್ಕನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಇದೆ. ಈ ಧಾರಾವಾಹಿಯ ಸಮಯ ಬದಲಾವಣೆ ಆದರೂ ಟಿಆರ್ಪಿಯಲ್ಲಿ ಹೆಚ್ಚಿನ ವ್ಯತ್ಯಾಸ ಏನು ಆಗಿಲ್ಲ ಅನ್ನೋದು ವಿಶೇಷ. ಐದನೇ ಸ್ಥಾನದಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಇದೆ. ಆರನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ. ಇತ್ತೀಚೆಗೆ ಆರಂಭವಾದ ಈ ಧಾರಾವಾಹಿ ಅಂದುಕೊಂಡಷ್ಟು ಟಿಆರ್ಪಿಯನ್ನು ಪಡೆದುಕೊಳ್ಳುತ್ತಿಲ್ಲ ಅನ್ನೋದು ಬೇಸರದ ವಿಚಾರ. ‘ಸೀತಾ ರಾಮ’ ಧಾರಾವಾಹಿಯ ಟಿಆರ್ಪಿ ಕೂಡ ಕುಗ್ಗಿದೆ.
ಇದನ್ನೂ ಓದಿ: ಭರ್ಜರಿ ಟಿಆರ್ಪಿ ಪಡೆದ ‘ಅಮೃತಧಾರೆ’ಗೆ ಎರಡನೇ ಸ್ಥಾನ; ಯಾವ ಧಾರಾವಾಹಿಗೆ ಎಷ್ಟನೇ ರ‍್ಯಾಂಕ್?
ಈಗಾಗಲೇ ಬಿಗ್ ಬಾಸ್ ಆರಂಭ ಆಗಿದೆ. ಮುಂದಿನ ವಾರದಿಂದ ಬಿಗ್ ಬಾಸ್ ಟಿಆರ್ಪಿ ಕೂಡ ಇದರಲ್ಲಿ ಲಭ್ಯವಾಗಲಿದೆ. ಬಿಗ್ ಬಾಸ್ ಸಮಯದಲ್ಲಿ ಪ್ರಸಾರ ಕಾಣುವ ಇತರ ಧಾರಾವಾಹಿಗಳ ಟಿಆರ್ಪಿ ಕುಗ್ಗೋ ಸಾಧ್ಯತೆ ಇದೆ. ಒಂದೊಮ್ಮೆ ಸುದೀಪ್ ಅವರು ಲಾಯರ್ ಜಗದೀಶ್ಗೆ ಕ್ಲಾಸ್ ತೆಗೆದುಕೊಂಡರೆ ವೀಕೆಂಡ್ನಲ್ಲಿ ಬಿಗ್ ಬಾಸ್ಗೆ ಭರ್ಜರಿ ಟಿಆರ್ಪಿ ಸಿಗೋ ನಿರೀಕ್ಷೆ ಇರುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:21 pm, Fri, 4 October 24