ಧಾರಾವಾಹಿಗಳ ಟಿಆರ್ಪಿ ಬಗ್ಗೆ ವೀಕ್ಷಕರಿಗೆ ಹಾಗೂ ಆಯಾ ಧಾರಾವಾಹಿಗಳ ಅಭಿಮಾನಿಗಳಲ್ಲಿ ಒಂದಷ್ಟು ಕುತೂಹಲ ಅಂತೂ ಇದ್ದೇ ಇರುತ್ತದೆ. ಯಾವ ಧಾರಾವಾಹಿ ಯಾವ ಸ್ಥಾನದಲ್ಲಿ ಇದೆ ಎಂಬ ಪ್ರಶ್ನೆ ವೀಕ್ಷಕರಲ್ಲಿ ಇರುತ್ತದೆ. ಪ್ರತೀ ಗುರುವಾರ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ. ಈಗ ‘ಬಿಗ್ ಬಾಸ್’ ಹಾಗೂ ಧಾರಾವಾಹಿಗಳ ಟಿಆರ್ಪಿ ಸಿಕ್ಕಿದೆ. 2024ನೇ ವರ್ಷದ 50ನೇ ವಾರದ ಡೇಟಾ ಇದಾಗಿದೆ. ಈ ವರ್ಷದಲ್ಲಿ ನಾಲ್ಕು ವಾರಗಳು ಕಳೆದರೆ 2024 ಪೂರ್ಣಗೊಳ್ಳಲಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಸಾಕಷ್ಟು ಗಮನ ಸೆಳೆದ ಶೋ. ಈ ಶೋನ ಟಿಆರ್ಪಿ ಹೊರ ಬಿದ್ದಿದೆ. ವಾರದ ದಿನಗಳಲ್ಲಿ ನಗರ ಭಾಗದಲ್ಲಿ 8.6 ಟಿವಿಆರ್, ಶನಿವಾರ 9.2 ಟಿವಿಆರ್ ಹಾಗೂ ಭಾನುವಾರ 9.7 ಟಿವಿಆರ್ ಸಿಕ್ಕಿದೆ. ವೀಕೆಂಡ್ನಲ್ಲಿ ಸುದೀಪ್ ಅವರ ಕಾರಣಕ್ಕಾಗಿ ಹೆಚ್ಚಿನ ಟಿಆರ್ಪಿ ಸಿಗುತ್ತಿದೆ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.
ಡಿಕೆಡಿ ಫಿನಾಲೆ ಇತ್ತೀಚೆಗೆ ನಡೆದಿದೆ. ಜೀ ಕನ್ನಡದಲ್ಲಿ ಪ್ರಸಾರ ಕಂಡ ಈ ಶೋ ಟಿಆರ್ಪಿ ಕೂಡ ಹೊರ ಬಿದ್ದಿದೆ. ಈ ರಿಯಾಲಿಟಿ ಶೋಗೆ ನಗರ ಭಾಗಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಟಿಆರ್ಪಿ ದೊರೆತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಟಿಆರ್ಪಿಯನ್ನು ಹಿಂದಿಕ್ಕಲು ಇದರ ಬಳಿ ಸಾಧ್ಯವಾಗಿಲ್ಲ.
ಇದನ್ನೂ ಓದಿ:ಸಿಟ್ಟಿದ್ದವರ ಮೇಲೆ ಗುದ್ದಿ ಕೋಪ ತೀರಿಸಿಕೊಂಡ ಬಿಗ್ಬಾಸ್ ಸ್ಪರ್ಧಿಗಳು
ಧಾರಾವಾಹಿಗಳ ವಿಚಾರಕ್ಕೆ ಬರೋದಾದರೆ, ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಉತ್ತಮ ಟಿಆರ್ಪಿ ಪಡೆದಿದೆ. ಕಳೆದ ವಾರ ಈ ಧಾರಾವಾಹಿಗೆ ಎರಡನೇ ಸ್ಥಾನ ಸಿಕ್ಕಿತ್ತು. ಈ ಬಾರಿ ಅಚ್ಚರಿ ಎಂಬಂತೆ ಎರಡನೇ ಸ್ಥಾನ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಗೆ ಸಿಕ್ಕಿದೆ. ಮೂರನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಇದೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಲಕ್ಷ್ಮೀ ಬಾರಮ್ಮ’ ಹಾಗೂ ‘ಭಾಗ್ಯಲಕ್ಮೀ’ ಧಾರಾವಾಹಿಗಳು ಈ ಮೊದಲು ಟಾಪ್ ಐದರಲ್ಲಿ ಸ್ಥಾನ ಪಡೆಯಲು ಕಷ್ಟಪಡುತ್ತಿದ್ದವು. ಆದರೆ, ಈ ಬಾರಿ ಈ ಧಾರಾವಾಹಿಗಳಿಗೆ ಎರಡು ಹಾಗೂ ಮೂರನೇ ಸ್ಥಾನ ಸಿಕ್ಕಿದೆ. ನಾಲ್ಕನೇ ಸ್ಥಾನದಲ್ಲಿ ‘ಅಮೃತಧಾರೆ’ ಹಾಗೂ ಐದನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ