Ranjani Raghavan: ‘ಕನ್ನಡತಿ’ ರಂಜನಿಗೆ ಹೆಮ್ಮೆಯ ಕ್ಷಣ; ಖುಷಿ ಹಂಚಿಕೊಂಡ ಕಿರುತೆರೆ ನಟಿ

| Updated By: ರಾಜೇಶ್ ದುಗ್ಗುಮನೆ

Updated on: Dec 04, 2021 | 1:47 PM

ರಂಜನಿ ಈ ಮೊದಲು ಸಾಕಷ್ಟು ಕಥೆಗಳನ್ನು ಬರೆದಿದ್ದಾರೆ. ಅವೆಲ್ಲವನ್ನೂ ಸೇರಿಸಿ ಈಗ ಪುಸ್ತಕದ ರೂಪದಲ್ಲಿ ಹೊರ ತಂದಿದ್ದಾರೆ. ಇದಕ್ಕೆ ‘ಕತೆ ಡಬ್ಬಿ’ ಎಂದು ಹೆಸರಿಟ್ಟಿದ್ದಾರೆ. ಇತ್ತೀಚೆಗೆ ಈ ಪುಸ್ತಕ ಲೋಕಾರ್ಪಣೆಗೊಂಡಿತ್ತು. ಈ ಪುಸ್ತಕವನ್ನು ಓದಿ ಸಾಕಷ್ಟು ಜನರು ಇಷ್ಟಪಟ್ಟಿದ್ದರು.

Ranjani Raghavan: ‘ಕನ್ನಡತಿ’ ರಂಜನಿಗೆ ಹೆಮ್ಮೆಯ ಕ್ಷಣ; ಖುಷಿ ಹಂಚಿಕೊಂಡ ಕಿರುತೆರೆ ನಟಿ
Follow us on

‘ಕನ್ನಡತಿ’ ರಂಜನಿ ರಾಘವನ್​ ಅವರು ಸಾಕಷ್ಟು ಖ್ಯಾತಿ ಗಳಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಅವರು ನಿರ್ವಹಿಸುತ್ತಿರುವ ಭುವನೇಶ್ವರಿ ಪಾತ್ರ ಸಾಕಷ್ಟು ಜನರಿಗೆ ಇಷ್ಟವಾಗಿದೆ. ಈ ಧಾರಾವಾಹಿ ಮೂಲಕ ಕನ್ನಡವನ್ನು ಬೆಳೆಸುವ ಕಾರ್ಯ ಕೂಡ ಆಗುತ್ತಿದೆ. ಈ ಕಾರಣಕ್ಕೂ ಧಾರಾವಾಹಿ ಹೆಚ್ಚು ಜನರಿಗೆ ಇಷ್ಟವಾಗಿದೆ. ರಂಜನಿ ಕೇವಲ ನಟನೆ ಮಾತ್ರವಲ್ಲ ಬರಹದ ಮೂಲಕವೂ ಗುರುತಿಸಿಕೊಂಡಿದ್ದಾರೆ. ಅವರು ‘ಕತೆ ಡಬ್ಬಿ’ ಹೆಸರಿನ ಕಥಾ ಸಂಕಲವನ್ನು ಹೊರ ತಂದಿದ್ದಾರೆ. ಈಗ ಅವರಿಗೆ ಹೆಮ್ಮೆ ಆಗುವಂತಹ ಘಟನೆಯೊಂದು ನಡೆದಿದೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ರಂಜನಿ ಈ ಮೊದಲು ಸಾಕಷ್ಟು ಕಥೆಗಳನ್ನು ಬರೆದಿದ್ದಾರೆ. ಅವೆಲ್ಲವನ್ನೂ ಸೇರಿಸಿ ಈಗ ಪುಸ್ತಕದ ರೂಪದಲ್ಲಿ ಹೊರ ತಂದಿದ್ದಾರೆ. ಇದಕ್ಕೆ ‘ಕತೆ ಡಬ್ಬಿ’ ಎಂದು ಹೆಸರಿಟ್ಟಿದ್ದಾರೆ. ಇತ್ತೀಚೆಗೆ ಈ ಪುಸ್ತಕ ಲೋಕಾರ್ಪಣೆಗೊಂಡಿತ್ತು. ಈ ಪುಸ್ತಕವನ್ನು ಓದಿ ಸಾಕಷ್ಟು ಜನರು ಇಷ್ಟಪಟ್ಟಿದ್ದರು. ಈಗ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ‘ಥಟ್​ ಅಂತ ಹೇಳಿ’ ಕಾರ್ಯಕ್ರಮದಲ್ಲಿಈ ಪುಸ್ತಕವನ್ನು  ಬಹುಮಾನವಾಗಿ ನೀಡಲಾಗಿದೆ. ಇದು ರಂಜನಿ ಅಭಿಮಾನಿಗಳಿಗೆ ಖುಷಿ ನೀಡಿದೆ.

‘ಕನ್ನಡಿಗರ ಹೆಮ್ಮೆಯ ರಸಪ್ರಶ್ನೆ ಕಾರ್ಯಕ್ರಮ ‘ಥಟ್ ಅಂತ ಹೇಳಿ’ಅಲ್ಲಿ ಕತೆ ಡಬ್ಬಿ ಪುಸ್ತಕವನ್ನು ಬಹುಮಾನವಾಗಿ ಕೊಡುತ್ತಿದ್ದಾರೆ. ಈ ಪುಸ್ತಕವನ್ನು ಗುರುತಿಸಿದ್ದಕ್ಕಾಗಿ ‘ಥಟ್ ಅಂತ ಹೇಳಿ’ ತಂಡಕ್ಕೆ ನನ್ನ ನಮನಗಳು’ ಎಂದು ರಂಜನಿ ರಾಘವನ್​ ಬರೆದುಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ‘ಈ ಕಾರ್ಯಕ್ರಮ ನೋಡಿದಾಗಲೆಲ್ಲ ನಿಮ್ಮ ಪುಸ್ತಕ ಜ್ಞಾಪಕ ಬರ್ತಿತ್ತು. ಈಗ ಅದನ್ನೇ ಬಹುಮಾನವಾಗಿ ಕೊಡುತ್ತಿದ್ದಾರೆ ಅಂತ ನೋಡಿ ಖುಷಿ ಆಗ್ತಿದೆ. ಹೀಗೆ ಬರೀತಿರಿ, ಬೆಳಿತಿರಿ’ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

‘ಕನ್ನಡತಿ’ ಧಾರಾವಾಹಿ ಸಾಕಷ್ಟು ಟ್ವಿಸ್ಟ್​ಗಳನ್ನು ಪಡೆದುಕೊಳ್ಳುತ್ತಿದೆ. ರಂಜನಿ ನಿರ್ವಹಿಸುತ್ತಿರುವ ಭುವಿ ಪಾತ್ರ ದಿನಕಳೆದಂತೆ ಮತ್ತಷ್ಟು ಸ್ಟ್ರಾಂಗ್​ ಆಗುತ್ತಿದೆ. ಭುವಿ ಎದುರು ಹರ್ಷ ಪ್ರೀತಿ ವ್ಯಕ್ತಪಡಿಸಿದ್ದಾನೆ. ಆದರೆ, ಅವಳ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ. ‘ಕನ್ನಡತಿ’ ಬಗ್ಗೆ ವೀಕ್ಷಕರಿಗೆ ಸಾಕಷ್ಟು ಕುತೂಹಲಗಳನ್ನು ಹುಟ್ಟು ಹಾಕುವ ಕೆಲಸವನ್ನು ಧಾರಾವಾಹಿ ತಂಡ ಮಾಡುತ್ತಿದೆ.

ಇದನ್ನೂ ಓದಿ: ನಟನೆಯಷ್ಟೇ ಅಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿದ ಕನ್ನಡತಿ;, ಇಲ್ಲಿದೆ ರಂಜನಿ ರಾಘವನ್ ಅವರ ಮನದಾಳದ ಮಾತು