ಅದ್ದೂರಿಯಾಗಿ ಭುವಿಗೆ ಪ್ರಪೋಸ್​ ಮಾಡಲು ‘ಕನ್ನಡತಿ’ ಹರ್ಷ ರೆಡಿ; ವಿಲನ್​ ಯಾರು?

ಭುವಿ ಶೀಘ್ರದಲ್ಲೇ ಬರ್ತ್​ಡೇ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಜನ್ಮದಿನವನ್ನು ವಿಶೇಷವಾಗಿ ಆಚರಿಸಬೇಕು ಅನ್ನೋದು ಹರ್ಷನ ಪ್ಲ್ಯಾನ್​. ಇದಕ್ಕಾಗಿ ಅವರು ಇವೆಂಟ್​ ಮ್ಯಾನೇಜ್​ಮೆಂಟ್​ಗೆ ಡೀಲ್​ ಕೂಡ ನೀಡಿದ್ದಾರೆ.

ಅದ್ದೂರಿಯಾಗಿ ಭುವಿಗೆ ಪ್ರಪೋಸ್​ ಮಾಡಲು ‘ಕನ್ನಡತಿ’ ಹರ್ಷ ರೆಡಿ; ವಿಲನ್​ ಯಾರು?
ಹರ್ಷ-ಭುವಿ
Updated By: ಮದನ್​ ಕುಮಾರ್​

Updated on: Sep 28, 2021 | 7:16 AM

‘ಕನ್ನಡತಿ’ ಧಾರಾವಾಹಿ ಪ್ರತಿ ವಾರ ಹೊಸಹೊಸ ತಿರುವು ಪಡೆದುಕೊಳ್ಳುತ್ತಿದೆ. ಮೂರು ತಿಂಗಳಲ್ಲಿ ಹರ್ಷ (ಕಿರಣ್​ ರಾಜ್​) ಮದುವೆ ಆಗೋಕೆ ನಿರ್ಧರಿಸಿದ್ದಾರೆ. ಭುವಿಯನ್ನು (ರಂಜನಿ ರಾಘವನ್​) ಹರ್ಷ ಪ್ರೀತಿಸುತ್ತಿದ್ದಾರೆ. ಆದರೆ, ಈ ವಿಚಾರವನ್ನು ಅವರು ತಮ್ಮ ಮನಸ್ಸಲ್ಲಿಯೇ ಇಟ್ಟುಕೊಂಡಿದ್ದಾರೆ. ಬಾಯ್ಬಿಟ್ಟು ಅದನ್ನು ಈವರೆಗೆ ಹೇಳಿಲ್ಲ. ಭುವಿಗೂ ಹರ್ಷನ ಮೇಲೆ ಅಪಾರ ಪ್ರೀತಿ ಇದೆ. ಆದರೆ, ಅವರು ಕೂಡ ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಈಗ ಭುವಿ ಜನ್ಮದಿನಕ್ಕೆ ವಿಶೇಷವಾಗಿ ಪ್ರಪೋಸ್​ ಮಾಡೋಕೆ ಹರ್ಷ ಪ್ಲ್ಯಾನ್​ ಒಂದನ್ನು ರೂಪಿಸಿದ್ದಾರೆ. ಈ ಆಲೋಚನೆಗೆ ವರುಧಿನಿ (ಸಾರಾ ಅಣ್ಣಯ್ಯ) ವಿಲನ್​ ಆಗುವ ಸಾಧ್ಯತೆ ಇದೆ.

ಭುವಿ ಶೀಘ್ರದಲ್ಲೇ ಬರ್ತ್​ಡೇ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಜನ್ಮದಿನವನ್ನು ವಿಶೇಷವಾಗಿ ಆಚರಿಸಬೇಕು ಅನ್ನೋದು ಹರ್ಷನ ಪ್ಲ್ಯಾನ್​. ಇದಕ್ಕಾಗಿ ಅವರು ಇವೆಂಟ್​ ಮ್ಯಾನೇಜ್​ಮೆಂಟ್​ಗೆ ಡೀಲ್​ ಕೂಡ ನೀಡಿದ್ದಾರೆ. ಈ ಬಗ್ಗೆ ವರುಧಿನಿಗೆ ಅನುಮಾನ ಬಂದಿದೆ. ಹರ್ಷನನ್ನು ಹಿಂಬಾಲಿಸೋಕೆ ಪ್ರಾರಂಭಿಸಿದ್ದಾರೆ ಅವರು. ಇದು ಹರ್ಷನಿಗೂ ಗೊತ್ತಾಗಿದೆ.

ಹರ್ಷ ಅವರನ್ನು ವರುಧಿನಿ ಪ್ರೀತಿಸುತ್ತಿದ್ದರು. ಕೆಲವು ತಪ್ಪು ಕಲ್ಪನೆಯಿಂದಾಗಿ ಹರ್ಷ ನನ್ನನ್ನೇ ಪ್ರೀತಿಸುತ್ತಿದ್ದಾರೆ ಎಂಬರ್ಥದಲ್ಲಿ ವರುಧಿನಿ ಇದ್ದರು. ಪ್ರಪೋಸ್​ ಮಾಡೋಕೆ ವಿಶೇಷವಾಗಿ ಪಾರ್ಟಿ ಕೂಡ ಆಯೋಜನೆ ಮಾಡಿದ್ದರು. ಆದರೆ, ಹರ್ಷಗೆ ಇದು ಇಷ್ಟವಾಗಲೇ ಇಲ್ಲ. ವರುಧಿನಿಯನ್ನು ನಾನು ಪ್ರೀತಿಸುತ್ತಿಲ್ಲ ಎಂದು ನೇರವಾಗಿಯೇ ಹೇಳಿದ್ದರು. ಇದು ವರುಗೂ ಬೇಸರ ತರಿಸಿತ್ತು. ಈಗ ಹರ್ಷ ಬೇರೊಬ್ಬರನ್ನು ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರ ಅವರಿಗೆ ಬೇಸರ ತರಿಸಿದೆ.

ವರುಧಿನಿಯನ್ನು ಚೇಂಬರ್​ಗೆ ಕರೆಸಿ ಈ ಬಗ್ಗೆ ಹರ್ಷ ಎಚ್ಚರಿಕೆ ನೀಡಿದ್ದಾರೆ. ಶೀಘ್ರದಲ್ಲೇ ಪ್ರೀತಿಸಿದ ಹುಡುಗಿಗೆ ಪ್ರಪೋಸ್​ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ವರುಧಿನಿಗೆ ಬೇಸರವಾಗಿದೆ. ಅವರು ಹರ್ಷನ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಇದೆ. ಅಲ್ಲದೆ, ಹರ್ಷ ಪ್ರೀತಿಸುತ್ತಿರುವುದು ಭುವಿಯನ್ನೇ ಎನ್ನುವ ವಿಚಾರ ಗೊತ್ತಾದರೆ ವರುಧಿನಿ ಯಾವ ಮಟ್ಟಕ್ಕೆ ತಿರುಗಿದರೂ ಅಚ್ಚರಿ ಇಲ್ಲ.

ಇದನ್ನೂ ಓದಿ:

ಕನ್ನಡತಿ ಅಪ್​ಡೇಟ್​; ತಿಳಿದೂ ತಪ್ಪು ಮಾಡಿದ ಸಾನಿಯಾ; ಎಂ.ಡಿ. ಪಟ್ಟ ಭುವಿಗೆ

‘ಕನ್ನಡತಿ’ ರಂಜನಿ ರಾಘವನ್​ ಬರೆದ ಕಥಾ ಸಂಕಲನದ ಹೆಸರೇನು? ಸರಿ ಉತ್ತರ ಹೇಳಿದವರಿಗೆ ಇದೆ ಬಹುಮಾನ