ಎಲಿಮಿನೇಷನ್ ವಿಷಯದಲ್ಲಿ ಕಣ್ಣೀರು ಹಾಕಿ ನಾಟಕ ಆಡಿದ್ದ ಧ್ರುವಂತ್; ಕರ್ಮ ಹೇಗೆ ತಿರುಗುತ್ತೆ ನೋಡಿ

ಕಳೆದ ವಾರ ಧ್ರುಂವತ್ ಅವರು ಸುದೀಪ್ ಜೊತೆ ಮಾತನಾಡುವಾಗ, ‘ಬಿಗ್ ಬಾಸ್ ಮನೆಯಲ್ಲಿ ಕರ್ಮ ಬೇಗ ಕೆಲಸ ಮಾಡುತ್ತದೆ’ ಎಂದು ಹೇಳಿದ್ದರು. ಆದರೆ, ಆಗ ಆಡಿದ ಮಾತನ್ನು ಅವರೇ ಗಂಭೀರವಾಗಿ ಸ್ವೀಕರಿಸಿಲ್ಲವಾ ಎನ್ನುವ ಪ್ರಶ್ನೆ ಮೂಡುತ್ತದೆ. ಏಕೆಂದರೆ ಅವರು ಈ ಮಾತನ್ನು ಹೇಳಾದ ಬಳಿಕ ಎಚ್ಚರಿಕೆಯಿಂದ ಇರಬೇಕಿತ್ತು ಎಂದರೂ ತಪ್ಪಾಗಲಿಕ್ಕಿಲ್ಲ.

ಎಲಿಮಿನೇಷನ್ ವಿಷಯದಲ್ಲಿ ಕಣ್ಣೀರು ಹಾಕಿ ನಾಟಕ ಆಡಿದ್ದ ಧ್ರುವಂತ್; ಕರ್ಮ ಹೇಗೆ ತಿರುಗುತ್ತೆ ನೋಡಿ
ಧ್ರುವಂತ್
Edited By:

Updated on: Jan 15, 2026 | 10:05 AM

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಧ್ರುವಂತ್ ಅವರು ಫಿನಾಲೆ ವಾರದಲ್ಲಿ ಮಧ್ಯದಲ್ಲಿ ಹೊರ ಹೋದರು. ಅವರು ಹೋಗುತ್ತಾರೆ ಎಂದು ಅವರೇ ಅಂದುಕೊಂಡಿರಲಿಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ. ಅವರು ಆಡಿದ ಮಾತು ಈಗ ವೈರಲ್ ಆಗುತ್ತಿದೆ. ಇಬ್ಬರು ಹೋಗ್ತಾರಲ್ಲ ಎಂದಾಗ ಅವರು ಕಣ್ಣಿರು ಹಾಕಿದಂತೆ ನಾಟಕ ಆಡಿದ್ದರು. ಕರ್ಮ ಹೇಗೆ ತಿರುಗಿ ಬರುತ್ತೆ ನೋಡಿ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.

ಕಳೆದ ವಾರ ಧ್ರುಂವತ್ ಅವರು ಸುದೀಪ್ ಜೊತೆ ಮಾತನಾಡುವಾಗ, ‘ಬಿಗ್ ಬಾಸ್ ಮನೆಯಲ್ಲಿ ಕರ್ಮ ಬೇಗ ಕೆಲಸ ಮಾಡುತ್ತದೆ’ ಎಂದು ಹೇಳಿದ್ದರು. ಆದರೆ, ಆಗ ಆಡಿದ ಮಾತನ್ನು ಅವರೇ ಗಂಭೀರವಾಗಿ ಸ್ವೀಕರಿಸಿಲ್ಲವಾ ಎನ್ನುವ ಪ್ರಶ್ನೆ ಮೂಡುತ್ತದೆ. ಏಕೆಂದರೆ ಅವರು ಈ ಮಾತನ್ನು ಹೇಳಾದ ಬಳಿಕ ಎಚ್ಚರಿಕೆಯಿಂದ ಇರಬೇಕಿತ್ತು ಎಂದರೂ ತಪ್ಪಾಗಲಿಕ್ಕಿಲ್ಲ.

ಧ್ರುವಂತ್ ಅವರು ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ಸೀಸನ್ ಚಪ್ಪಾಳೆ ಪಡೆದರು. ಸೀಕ್ರೆಟ್ ರೂಂ ಬಳಿಕ ಆ್ಯಕ್ಟೀವ್ ಆಗಿದ್ದ ಅವರು, ಈ ವಾರ ತಾವು ಹೋಗುವುದಿಲ್ಲ ಎಂಬ ಕಾನ್ಫಿಡೆನ್ಸ್​ ಅಲ್ಲಿ ಇದ್ದಂತೆ ಕಾಣಿಸುತ್ತಿತ್ತು. ‘ಈ ವಾರ ಇನ್ನೂ ಇಬ್ಬರು ಹೋಗ್ತಾರಲ್ಲ’ ಎಂದು ಅಶ್ವಿನಿ ಗೌಡ ಹೇಳಿದಾಗ ಕಣ್ಣೀರು ಹಾಕಿದಂತೆ ನಾಟಕ ಆಡಿದ್ದರು. ತಾನು ಹೋಗೋದಿಲ್ಲ, ಬೇರೆಯವರು ಹೋಗ್ತಾರೆ ಎಂಬ ರೀತಿಯಲ್ಲಿ ಇತ್ತು ಈ ನಾಟಕ.

ಇದನ್ನೂ ಓದಿ: ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಧ್ರುವಂತ್ ಔಟ್; ಕಿಚ್ಚನ ಚಪ್ಪಾಳೆಯೇ ಮುಳುವಾಯ್ತಾ?

ದುರಾದೃಷ್ಟ ಎಂದರೆ ಅವರೇ ಎಲಿಮಿನೇಟ್ ಆಗಿದ್ದಾರೆ. ವಾರದ ಮಧ್ಯದ ಎಲಿಮಿನೇಷನ್​ ಅಲ್ಲಿ ಧ್ರುವಂತ್ ಕಡಿಮೆ ವೋಟ್ ಪಡೆದು ಹೊರ ಹೋದರು. ‘ಮೇಕೋವರ್ ಆಗಬೇಕು’ ಎಂದು ಧ್ರುವಂತ್ ಅವರು ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಬಿಗ್ ಬಾಸ್ ಈಡೇರಿಸಿಲ್ಲ. ಧ್ರುವಂತ್ ಅವರು ತಾವು ಫಿನಾಲೆಗೆ ಏರುತ್ತೇನೆ ಎಂಬ ಕಾನ್ಫಿಡೆನ್ಸ್ ಅಲ್ಲಿದ್ದರು. ಆದರೆ, ಹಾಗಾಗಿಲ್ಲ. ಧ್ರುವಂತ್ ಆಪ್ತ ಎನಿಸಿಕೊಂಡಿದ್ದ ಅಶ್ವಿನಿ ಗೌಡ ಅವರು ಈಗ ಕಣ್ಣೀರು ಹಾಕುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.