ನಿಧಿ-ನಿತ್ಯಾ ಇಬ್ಬರನ್ನೂ ಮದವೆ ಆಗ್ತಾನೆ ಕರ್ಣ? ಸಿಕ್ತು ದೊಡ್ಡ ಸೂಚನೆ

Karna Kannada serial: ಕರ್ಣನಿಗೆ (ಕಿರಣ್ ರಾಜ್) ನಿಧಿ (ಭವ್ಯಾ ಗೌಡ) ಮೇಲೆ ಪ್ರೀತಿ ಮೂಡಿದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ. ಈಗಾಗಲೇ ನಿಧಿಯು ಕರ್ಣನಿಗೆ ತನ್ನ ಪ್ರೀತಿ ಹೇಳಾಗಿದೆ. ಆದರೆ, ಕರ್ಣ ಮಾತ್ರ ಇನ್ನೂ ಪ್ರೀತಿಯನ್ನು ವ್ಯಕ್ತಪಡಿಸಿಲ್ಲ. ಒಳಗೊಳಗೆ ಪ್ರೀತಿ ಮಾಡುತ್ತಿದ್ದಾನೆ. ಅತ್ತ ನಿತ್ಯಾಳು ತೇಜಸ್​ನ ಲವ್ ಮಾಡುತ್ತಿದ್ದಾಳೆ. ಇಬ್ಬರ ಮದುವೆ ಕೂಡ ನಿಶ್ಚಯವಾಗಿದೆ. ಧಾರಾವಾಹಿಯಲ್ಲಿ ಏನಾಯ್ತು? ಇಲ್ಲಿದೆ ನೋಡಿ ಮಾಹಿತಿ...

ನಿಧಿ-ನಿತ್ಯಾ ಇಬ್ಬರನ್ನೂ ಮದವೆ ಆಗ್ತಾನೆ ಕರ್ಣ? ಸಿಕ್ತು ದೊಡ್ಡ ಸೂಚನೆ
Bhavya Gowda (3)
Updated By: ಮಂಜುನಾಥ ಸಿ.

Updated on: Sep 10, 2025 | 1:21 PM

‘ಕರ್ಣ’ ಧಾರಾವಾಹಿಯು ಉತ್ತಮ ಟಿಆರ್​ಪಿಯೊಂದಿಗೆ ಮುನ್ನುಗ್ಗುತ್ತಿದೆ. ಈ ಧಾರಾವಾಹಿಯಲ್ಲಿ ಕಿರಣ್​ ರಾಜ್, ಭವ್ಯಾ ಗೌಡ ಹಾಗೂ ನಮ್ರತಾ ಗೌಡ ನಟಿಸುತ್ತಿದ್ದಾರೆ. ಈ ಮೂವರಿಗೂ ದೊಡ್ಡ ಅಭಿಮಾನಿ ಬಳಗ ಇರೋದ್ರಿಂದ ಸಾಕಷ್ಟು ಕುತೂಹಲ ಮೂಡಿದೆ. ಹೀಗಾಗಿ, ದೊಡ್ಡ ಸಂಖ್ಯೆಯಲ್ಲಿ ಇದನ್ನು ವೀಕ್ಷಿಸಲಾಗುತ್ತಿದೆ. ಹೀಗಿರುವಾಗಲೇ ಧಾರಾವಾಹಿಯ ಕಥೆಯ ಬಗ್ಗೆ ಒಂದು ದೊಡ್ಡ ಸೂಚನೆ ಸಿಕ್ಕಿದೆ. ಕರ್ಣನು ನಿಧಿ ಹಾಗೂ ನಿತ್ಯಾ ಇಬ್ಬರನ್ನೂ ಮದುವೆ ಆಗುತ್ತಾನೆ ಎನ್ನಲಾಗುತ್ತಿದೆ.

ಕರ್ಣನಿಗೆ (ಕಿರಣ್ ರಾಜ್) ನಿಧಿ (ಭವ್ಯಾ ಗೌಡ) ಮೇಲೆ ಪ್ರೀತಿ ಮೂಡಿದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ. ಈಗಾಗಲೇ ನಿಧಿಯು ಕರ್ಣನಿಗೆ ತನ್ನ ಪ್ರೀತಿ ಹೇಳಾಗಿದೆ. ಆದರೆ, ಕರ್ಣ ಮಾತ್ರ ಇನ್ನೂ ಪ್ರೀತಿಯನ್ನು ವ್ಯಕ್ತಪಡಿಸಿಲ್ಲ. ಒಳಗೊಳಗೆ ಪ್ರೀತಿ ಮಾಡುತ್ತಿದ್ದಾನೆ. ಅತ್ತ ನಿತ್ಯಾಳು ತೇಜಸ್​ನ ಲವ್ ಮಾಡುತ್ತಿದ್ದಾಳೆ. ಇಬ್ಬರ ಮದುವೆ ಕೂಡ ನಿಶ್ಚಯವಾಗಿದೆ.

ಇತ್ತೀಚೆಗೆ ಕರ್ಣ, ನಿಧಿ ನಿತ್ಯಾ ಹಾಗೂ ಕುಟುಂಬದವರು ಮಾರಿಗುಡಿಗೆ ಪೂಜೆಗೆ ಹೊರಟಿದ್ದರು. ಈ ಊರಿಗೆ ತೆರಳುವ ಮೊದಲು ದಾರಿ ಮಧ್ಯದಲ್ಲಿ ಒಂದು ಫೈಟ್ ನಡೆಯುತ್ತದೆ. ಈ ಫೈಟ್​ನಲ್ಲಿ ನಿಧಿ ಮೇಲೆ ಅರಿಶಿಣ ಹಾಗೂ ನಿತ್ಯಾ ಮೇಲೆ ಕುಂಕುಮ ಬೀಳುತ್ತದೆ. ಹೀಗಾಗಿ, ಕರ್ಣನು ಇಬ್ಬರನ್ನೂ ವಿವಾಹ ಆಗುತ್ತಾನೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಬಂತು ಮತ್ತೊಂದು ಶಕ್ತಿ

ನಿತ್ಯಾ ಹಾಗೂ ತೇಜಸ್ ನಿಶ್ಚಿತಾರ್ಥ ನಡೆದು ಹೋಗಿದೆ. ಹಾಗಂತ ಇವರ ವಿವಾಹ ನಡೆಯುತ್ತದೆ ಎನ್ನಲು ಬಲವಾದ ಕಾರಣಗಳು ಇಲ್ಲ. ಇವರಿಬ್ಬರ ಮದುವೆ ಮುರಿದು ಬೀಳುವ ಎಲ್ಲಾ ಸಾಧ್ಯತೆ ಇದೆ. ಆ ಬಳಿಕ ಕರ್ಣನು ನಿತ್ಯಾ ಹಾಗೂ ನಿಧಿ ಇಬ್ಬರನ್ನೂ ವಿವಾಹ ಆಗುವ ಕ್ಷಣ ಹೇಗೆ ಬರುತ್ತದೆ ಎಂಬ ಕುತೂಹಲ ಮೂಡಿದೆ.

ಸದ್ಯ ‘ಕರ್ಣ’ ದಾರಾವಾಹಿ ಆರಂಭಿಕ ಹಂತದಲ್ಲಿ ಇದೆ. ಮುಂದೆ ಯಾವ ರೀತಿಯ ತಿರುವುಗಳನ್ನು ಧಾರಾವಾಹಿ ಪಡೆದುಕೊಂಡು ಸಾಗಲಿದೆ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ. ಧಾರಾವಾಹಿಯ ಕಥೆ ಮಾರಿಗುಡಿಗೆ ಸಾಗಿದ್ದು, ಅಲ್ಲಿ ದೊಡ್ಡ ತಿರುವನ್ನು ನಿರೀಕ್ಷಿಸಲಾಗಿದೆ. ‘ಕರ್ಣ’ ಧಾರಾವಾಹಿ ಹಾಗೂ ‘ಅಣ್ಣಯ್ಯ’ ಧಾರಾವಾಹಿಗೆ ಕನೆಕ್ಷನ್ ಕೊಡೋಸಾಧ್ಯತೆಯೂ ಇದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ