‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಬಂತು ಮತ್ತೊಂದು ಶಕ್ತಿ
Na Ninna Bidalare: ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಸದ್ಯ ಮೂರು ಬಲವಾದ ಶಕ್ತಿಗಳು ಇವೆ. ಮೊದಲನೆಯದು ದುರ್ಗಾ ತಂದೆ. ಆತ ಒಳ್ಳೆಯವನ ಸಾಲಿಗೆ ಸೇರುತ್ತಾನೆ. ಆತ್ಮ ಆಗಿರೋ ಅಂಬಿಕಾ ಕೂಡ ಒಳ್ಳೆಯವಳೇ. ಅವಳು ತನ್ನ ಶಕ್ತಿಯನ್ನು ಒಳ್ಳೆಯದಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾಳೆ. ಆದರೆ, ಮಾಳವಿಕಾ ಮಾತ್ರ ಕೆಟ್ಟವಳು. ಆಕೆ ತನ್ನ ಶಕ್ತಿಯನ್ನು ದುಷ್ಟ ಕೆಲಸಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾಳೆ. ಹೀಗಿರುವಾಗಲೇ ಧಾರಾವಾಹಿಗೆ ಮತ್ತೊಂದು ಶಕ್ತಿಯ ಎಂಟ್ರಿ ಆಗಿದೆ.

‘ನಾ ನಿನ್ನ ಬಿಡಲಾರೆ’ (Na Ninna Bidalare) ಧಾರಾವಾಹಿ ಎಲ್ಲಾ ಧಾರಾವಾಹಿಗಿಂತ ಭಿನ್ನವಾಗಿ ಕಾಣಲು ಒಂದು ಕಾರಣವೂ ಇದೆ. ಇಲ್ಲಿ ಅತ್ತೆ-ಸೊಸೆ ಜಗಳ ಇಲ್ಲ. ಬದಲಿಗೆ ದುಷ್ಟ ಶಕ್ತಿಗಳ ಆಟ ಹಾಗೂ ಕಾಟವಿದೆ. ಈ ಕಾರಣಕ್ಕೆ ಧಾರಾವಾಹಿ ಉತ್ತಮ ಟಿಆರ್ಪಿ ಪಡೆದು ಸಾಗುತ್ತಾ ಇದೆ. ಈಗ ಧಾರಾವಾಹಿಯಲ್ಲಿ ಮತ್ತೊಂದು ಶಕ್ತಿಯ ಎಂಟ್ರಿ ಆಗಿದೆ. ಈ ಶಕ್ತಿ ಕೆಟ್ಟದ್ದೋ ಅಥವಾ ಒಳ್ಳೆಯದೋ ಎನ್ನವು ಪ್ರಶ್ನೆ ಮೂಡಿದೆ.
‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಸದ್ಯ ಮೂರು ಬಲವಾದ ಶಕ್ತಿಗಳು ಇವೆ. ಮೊದಲನೆಯದು ದುರ್ಗಾ ತಂದೆ. ಆತ ಒಳ್ಳೆಯವನ ಸಾಲಿಗೆ ಸೇರುತ್ತಾನೆ. ಆತ್ಮ ಆಗಿರೋ ಅಂಬಿಕಾ ಕೂಡ ಒಳ್ಳೆಯವಳೇ. ಅವಳು ತನ್ನ ಶಕ್ತಿಯನ್ನು ಒಳ್ಳೆಯದಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾಳೆ. ಆದರೆ, ಮಾಳವಿಕಾ ಮಾತ್ರ ಕೆಟ್ಟವಳು. ಆಕೆ ತನ್ನ ಶಕ್ತಿಯನ್ನು ದುಷ್ಟ ಕೆಲಸಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾಳೆ. ಹೀಗಿರುವಾಗಲೇ ಧಾರಾವಾಹಿಗೆ ಮತ್ತೊಂದು ಶಕ್ತಿಯ ಎಂಟ್ರಿ ಆಗಿದೆ.
‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಶರತ್ ಹಾಗೂ ದುರ್ಗಾಳ ಮದುವೆ ನಡೆದಿದೆ. ಈ ಮದುವೆಯನ್ನು ಹಿತಾಗೆ ಸಹಿಸಲಾಗುತ್ತಿಲ್ಲ. ದುರ್ಗಾ ಕೆಟ್ಟದ್ದೇ ಮಾಡುತ್ತಾಳೆ ಎಂದು ನಂಬಿದ್ದಾಳೆ ಹಿತಾ. ಈ ಕಾರಣದಿಂದಲೇ ಆಕೆಯನ್ನು ಅಮ್ಮ ಎಂದು ಒಪ್ಪಿಕೊಳ್ಳಲಾಗದೆ ಮನೆ ಬಿಟ್ಟು ಹೋಗಲು ನಿಂತಿದ್ದಳು.
ಆಕೆ ರಸ್ತೆಯಲ್ಲಿ ನಡೆದು ಹೋಗುವಾಗ ಕಾರೊಂದು ಅಪಘಾತ ಮಾಡಲು ಬಂದಿದೆ. ಆದರೆ, ಅಪಘಾತ ಆಗದೆ ಆಕೆ ನೇರವಾಗಿ ಮೇಲಕ್ಕೆ ಹಾರಿದ್ದಾಳೆ. ಆಕೆಯನ್ನು ದುರ್ಗಾಳ ತಂದೆ ನಂತರ ರಕ್ಷಿಸಿದ್ದಾನೆ. ಮಾಳವಿಕಾ ಈಗಾಗಲೇ ಅಂಬಿಕಾಳನ್ನು ಬಲಿ ಕೊಟ್ಟಿದ್ದಾಳೆ. ಮತ್ತೊಂದು ಬಲಿ ಕೊಡಲು ಆಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಳೆ. ಅದು ಹಿತಾ ಎನ್ನಲಾಗುತ್ತಿದೆ. ಹೀಗಾಗಿ ಈಗ ಬಂದಿರೋ ಶಕ್ತಿ ಹಿತಾಳ ರಕ್ಷಣೆಗೆ ಬಂದಿರೋ ಶಕ್ತಿಯೇ ಎನ್ನುವ ಪ್ರಶ್ನೆ ಮೂಡಿದೆ.
ಅಂಬಿಕಾಳ ತಾಯಿಯನ್ನೂ ಮಾಳವಿಕಾ ಸಾಯಿಸಿದ್ದಾಳೆ ಎನ್ನಲಾಗುತ್ತಿದೆ. ಆಕೆಯ ಆತ್ಮವನ್ನು ಕೂಡಿಡಲಾಗಿದೆ. ಈಗ ಹಿತಾಳನ್ನು ರಕ್ಷಿಸಲು ಬಂದಿದ್ದು ಇದೇ ಆತ್ಮ ಇರಬಹುದು ಎಂದು ಅನೇಕರು ಊಹಿಸಿದ್ದಾರೆ. ಈ ಪ್ರಶ್ನೆಗೆ ಉತ್ತರ ಇನ್ನಷ್ಟೇ ಸಿಗಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:02 pm, Tue, 9 September 25



