ಮಲತಾಯಿ ಧೋರಣೆ ತಿಳಿದೋಯ್ತು; ಗೌತಮ್ ಮನೆ ಬಿಟ್ಟು ಹೋಗೋ ಸಮಯ ಬಂದೇಬಿಡ್ತು
ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾಳ ಮೋಸದಿಂದಾಗಿ ಗೌತಮ್ ಮನೆ ಬಿಟ್ಟು ಹೋಗುತ್ತಾನೆ. ಅವನ ಮಲತಾಯಿ ಶಕುಂತಲಾ ಅವನನ್ನು ಮತ್ತು ಭೂಮಿಕಾಳನ್ನು ಬೇರ್ಪಡಿಸುತ್ತಾಳೆ. ಗೌತಮ್ ನಿಜವಾದ ಸತ್ಯ ತಿಳಿದುಕೊಂಡು ನೋವಿನಿಂದ ಮನೆ ಬಿಟ್ಟು ಹೋಗುತ್ತಾನೆ. ಐದು ವರ್ಷಗಳ ನಂತರದ ಕಥೆಯಲ್ಲಿ ಗೌತಮ್ ಕಾರು ಚಾಲಕನಾಗಿ ಕೆಲಸ ಮಾಡುತ್ತಾ ಇರುತ್ತಾನೆ.

‘ಅಮೃತಧಾರೆ’ ಧಾರಾವಾಹಿ (Amruthadhaare Serial) ಈಗ ಪ್ರಮುಖ ಘಟ್ಟ ತಲುಪಿದೆ. ಗೌತಮ್ಗೆ ಮಲತಾಯಿಯಿಂದ ನಿರಂತರವಾಗಿ ಮೋಸಗಳು ಆಗುತ್ತಲೇ ಬರುತ್ತಾ ಇದ್ದವು. ಈ ಮೋಸ ಗೌತಮ್ಗೆ ತಿಳಿಯುತ್ತಲೇ ಇರಲಿಲ್ಲ. ಕೊನೆಗೂ ಈ ಮೋಸದ ಬಗ್ಗೆ ಗೌತಮ್ಗೆ ಗೊತ್ತಾಗುವ ಸಮಯ ಬಂದಿದೆ. ಇದು ಗೊತ್ತಾದ ಬಳಿಕವೇ ಆತ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದಾನೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿಯು ಹಂಚಿಕೊಂಡಿದೆ.
‘ಅಮೃತಧಾರೆ’ ಧಾರಾವಾಹಿಯಲ್ಲಿ ಪ್ರಮುಖ ವಿಲನ್ ಶಕುಂತಲಾ. ಈಕೆ ಗೌತಮ್ಗೆ ಸಾಕಷ್ಟು ದ್ರೋಹ ಬಗೆದಿದ್ದಾಳೆ. ಮಲತಾಯಿ ಧೋರಣೆ ತೋರಿದ್ದಾಳೆ. ಈಗ ಅವಳಿಂದ ಒಂದು ದೊಡ್ಡ ತಪ್ಪು ನಡೆದು ಹೋಗಿದೆ. ಭೂಮಿಕಾ ಹಾಗೂ ಗೌತಮ್ನ ಸಂಪೂರ್ಣವಾಗಿ ದೂರ ಮಾಡಿದ್ದಾಳೆ. ಆ ಬಳಿಕ ‘ಮತ್ತೊಂದು ಮಗುವಿನ ಬಗ್ಗೆ ನಿಜ ಹೇಳದ ಕಾರಣ ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ’ ಎಂದು ಭೂಮಿಕಾ ಹೆಸರಲ್ಲಿ ಶಕುಂತುಲಾಳೇ ಪತ್ರ ಬರೆದಿದ್ದಾಳೆ.
ಈ ವಿಚಾರವನ್ನು ನಿಜವಾದ ತಾಯಿಯು ಗೌತಮ್ಗೆ ಮನವರಿಕೆ ಮಾಡಿಸಿದ್ದಾಳೆ. ಈ ವಿಚಾರ ತಿಳಿಯತ್ತಿದ್ದಂತೆ ಗೌತಮ್ ಓಡೋಡಿ ಮನೆಗೆ ಬಂದಿದ್ದಾನೆ. ಅಲ್ಲಿ ಶಕುಂತಲಾ ಹಾಗೂ ಅವಳ ಮಗ ಜಯದೇವ್ ಈ ಬಗ್ಗೆ ಚರ್ಚೆ ಮಾಡುತ್ತಾ ಕೂತಿರುತ್ತಾರೆ. ಇದನ್ನು ಕೇಳಿ ಗೌತಮ್ಗೆ ಸಾಕಷ್ಟು ಬೇಸರ ಆಗುತ್ತದೆ. ‘ಯಾಕೆ ಹೀಗೆ ಮಾಡಿದಿರಿ’ ಎಂದು ನೊಂದುಕೊಂಡು ಮನೆ ಬಿಟ್ಟು ಹೊರಡುತ್ತಾನೆ.
ಇದನ್ನೂ ಓದಿ: ‘ಅಮೃತಧಾರೆ’ ಹೊಸ ಅಧ್ಯಾಯ; ಮನೆಬಿಟ್ಟು ಹೋದ ಭೂಮಿ, ಕ್ಯಾಬ್ ಡ್ರೈವರ್ ಆದ ಗೌತಮ್
‘ನನಗೆ ಶಾಂತಿ-ನೆಮ್ಮದಿ ಬೇಕಿದೆ. ಈ ಆಸ್ತಿಯೆಲ್ಲವೂ ನಿಮ್ಮದು’ ಎಂದು ತಾಯಿ ಹೆಸರಿಗೆ ಆಸ್ತಿ ಬರೆದಿಟ್ಟು ಗೌತಮ್ ಹೊರಟೇ ಬಿಡುತ್ತಾನೆ. ಈ ಮೊದಲೇ ಬಿಡುಗಡೆ ಮಾಡಿರೋ ಪ್ರೋಮೋದಲ್ಲಿ ತೋರಿಸಿರುವಂತೆ ಧಾರಾವಾಹಿಯಲ್ಲಿ 5 ವರ್ಷಗಳ ನಂತರದ ಕಥೆ ಬರಲಿದೆ. ಅದು ಯಾವಾಗಿನಿಂದ ಆರಂಭ ಆಗುತ್ತದೆ ಎಂಬ ಕುತೂಹಲ ಮೂಡಿದೆ.
ಐದು ವರ್ಷದ ಬಳಿಕೆ ಆಗೋದೇನು?
ಗೌತಮ್ ಕಾರು ಡ್ರೈವರ್ ಆಗಿದ್ದಾನೆ. ಭೂಮಿಕಾಳ ಹುಡುಕುತ್ತಾ ಐದು ವರ್ಷಗಳೇ ಕಳೆದು ಹೋಗಿವೆ. ಈ ವೇಳೆ ಒಮ್ಮೆ ಅವನಿಗೆ ಮಗ ಸಿಗುತ್ತಾನೆ. ಇದನ್ನು ನೋಡಿ ಆತ ಖುಷಿ ಪಡುತ್ತಾನೆ. ಮತ್ತೆ ಇವರು ಒಂದಾಗುತ್ತಾರಾ ಎಂಬುದು ಸದ್ಯದ ಕುತೂಹಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







