ಸಪ್ತಪದಿ ತುಳಿಯುವಾಗಲೇ ಕರ್ಣನಿಗೆ ಗೊತ್ತಾಯ್ತು ನಿಧಿ ಪ್ರೆಗ್ನೆನ್ಸಿ ವಿಚಾರ

ಕರ್ಣ ಧಾರಾವಾಹಿಯಲ್ಲಿ ಅನಿರೀಕ್ಷಿತ ಘಟನೆ ನಡೆದಿದೆ. ಪ್ರೀತಿ ನಿಧಿಯ ಮೇಲಿದ್ದರೂ ಕರ್ಣ ನಿತ್ಯಾಳನ್ನು ಮದುವೆಯಾಗಿದ್ದಾನೆ. ಸಪ್ತಪದಿ ತುಳಿಯುವಾಗ ನಿತ್ಯಾ ಗರ್ಭಿಣಿ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. ರಮೇಶ್ ಕುತಂತ್ರದಿಂದ ತೇಜಸ್ ಕಿಡ್ನ್ಯಾಪ್ ಆಗಿದ್ದು, ಕರ್ಣನ ಅಜ್ಜಿ ಬಂಗಾರಿ ನಿರ್ಧಾರ ಮದುವೆಗೆ ಕಾರಣವಾಗಿದೆ.

ಸಪ್ತಪದಿ ತುಳಿಯುವಾಗಲೇ ಕರ್ಣನಿಗೆ ಗೊತ್ತಾಯ್ತು ನಿಧಿ ಪ್ರೆಗ್ನೆನ್ಸಿ ವಿಚಾರ
ಕರ್ಣ
Updated By: ರಾಜೇಶ್ ದುಗ್ಗುಮನೆ

Updated on: Oct 16, 2025 | 7:50 AM

‘ಕರ್ಣ’ ಧಾರಾವಾಹಿಯಲ್ಲಿ (Karna Serial) ಯಾರೂ ಊಹಿಸದ ಘಟನೆ ಒಂದು ನಡೆದು ಹೋಗಿದೆ. ಕರ್ಣ ಹಾಗೂ ನಿಧಿ ಪ್ರೀತಿಸುತ್ತಿರುವಾಗಲೇ ಕರ್ಣ ಹಾಗೂ ನಿತ್ಯಾ ವಿವಾಹ ನೆರವೇರಿದೆ. ಇದನ್ನು ಯಾರೂ ಊಹಿಸರಲಿಲ್ಲ. ಈ ವಾರವೇ ವಿವಾಹ ಕಾರ್ಯ ನಡೆದಿದೆ. ಇದು ಭವ್ಯಾ ಗೌಡ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಮುಂದೇನಾಗುತ್ತದೆ ಎಂಬ ಕುತೂಹಲ ಮೂಡಿದೆ. ಸಪ್ತಪದಿ ತುಳಿಯುವಾಗಲೇ ನಿತ್ಯಾಳ ಪ್ರೆಗ್ನೆನ್ಸಿ ವಿಚಾರವೂ ಗೊತ್ತಾಗಿದೆ.

ನಿಧಿ ಹಾಗೂ ಕರ್ಣ ಮಧ್ಯೆ ನಿಧಾನವಾಗಿ ಪ್ರೀತಿ ಮೂಡುತ್ತಾ ಇತ್ತು. ರಮೇಶ್, ಇವರ ಪ್ರೀತಿಗೆ ಅಡ್ಡಿ ಆಗುವವನಿದ್ದ. ಆದರೆ, ನಂಬಿಸಿ ಮೋಸ ಮಾಡಲು ಆತ ನಿರ್ಧರಿಸಿದ್ದ. ಹೀಗಾಗಿ, ಒಳ್ಳೆಯವರಂತೆ ನಡೆದುಕೊಂಡ. ಇದು ಕೆಲಸ ಮಾಡಿದೆ. ಆತನ ಮಾತುಗಳನ್ನು ಕರ್ಣ ನಂಬಿದ್ದಾನೆ. ಇದೇ ಈಗ ದುಬಾರಿ ಆಗಿದೆ.

ತೇಜಸ್ ಕಿಡ್ನ್ಯಾಪ್

ಮದುವೆ ಮನೆಯಿಂದ ತೇಜಸ್ ಕಿಡ್ನ್ಯಾಪ್ ಆಗಿದ್ದಾನೆ. ಇದನ್ನು ಮಾಡಿಸಿದ್ದು ರಮೇಶ್. ತೇಜಸ್ ತಂದೆ-ತಾಯಿ ಬಳಿ ಮಾತನಾಡಿ ಈ ಬಗ್ಗೆ ರಮೇಶ್ ಮೊದಲೇ ಪ್ಲ್ಯಾನ್ ಮಾಡಿದ್ದ. ಅದು ಯಶಸ್ಸು ಕಂಡಿದೆ. ಇದರಿಂದ ನಿತ್ಯಾ ಮದುವೆ ಅರ್ಧಕ್ಕೆ ನಿಂತಿದೆ.

ಇದನ್ನೂ ಓದಿ
ಬಕ್ರಾ ಮಾಡಲು ಬಂದ ಜಾನ್ವಿ-ಅಶ್ವಿನಿಗೆ ಮಣ್ಣು ಮುಕ್ಕಿಸಿದ ರಕ್ಷಿತಾ ಶೆಟ್ಟಿ
ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್; ಆ ಇಬ್ಬರು ಔಟ್?
ಸ್ಪರ್ಧಿಗಳಿಗೆ ಕೊನೆಯ ಅವಕಾಶ ಕೊಟ್ಟ ‘ಬಿಗ್ ಬಾಸ್​’; ಮಾಡು ಇಲ್ಲವೇ ಮಡಿ
‘ಕಾಂತಾರ: ಚಾಪ್ಟರ್ 2’ ಯಾವಾಗ? ಕೊನೆಗೂ ಉತ್ತರಿಸಿದ ರಿಷಬ್ ಶೆಟ್ಟಿ

ಬಂಗಾರಿ ಆದೇಶ

ತೇಜಸ್ ಓಡಿ ಹೋದ ಬಳಿಕ ನಿತ್ಯಾ ಹಾಗೂ ಆಕೆಯ ಅಜ್ಜಿ ಶಾಂತಿ ಕಂಗಾಲಾಗಿದ್ದಾರೆ. ಪ್ರತಿಯೊಬ್ಬರ ಬಳಿ ತೆರಳಿ ನನ್ನ ಮಗಳನ್ನು ಮದುವೆ ಮಾಡಿಕೊಳ್ಳಿ ಎಂದು ಶಾಂತಿ ಕೋರಿಕೊಳ್ಳುತ್ತಿದ್ದಾಳೆ. ಆದರೆ, ಯಾರೊಬ್ಬರೂ ಇದಕ್ಕೆ ರೆಡಿ ಇಲ್ಲ. ಈ ವೇಳೆ ಕರ್ಣನ ಅಜ್ಜಿ ಬಂಗಾರಿ ಘೋಷಣೆ ಒಂದನ್ನು ಮಾಡಿದಳು. ‘ಹುಡುಗನಿಗಾಗಿ ಯಾರೂ ಹುಡುಕೋದು ಬೇಡ. ಕರ್ಣನೇ ಮದುವೆ ಆಗುತ್ತಾನೆ’ ಎಂದು ಘೋಷಣೆ ಮಾಡಿದಳು. ಇದನ್ನು ಕೇಳಿ ಕರ್ಣ ಶಾಕ್ ಆಗಿದ್ದಾನೆ. ಈ ವಿಚಾರವನ್ನು ಬಂಗಾರಿ ತಲೆಯಲ್ಲಿ ತುಂಬಿದ್ದು ರಮೇಶ್.

ಇದನ್ನೂ ಓದಿ: ರುಕ್ಮಿಣಿ ಕೈಯಿಂದ ‘ಜನಪ್ರಿಯ ನಟಿ’ ಅವಾರ್ಡ್ ಪಡೆದ ‘ಕರ್ಣ’ ನಟಿ ಭವ್ಯಾ ಗೌಡ

ಸಪ್ತಪದಿ..

ಕರ್ಣ ಹಾಗೂ ನಿತ್ಯಾ ಮದುವೆ ನಡೆದಿದೆ. ಸಪ್ತಪದಿ ತುಳಿಯುವಾಗಲೇ ನಿತ್ಯಾಳ ಪ್ರೆಗ್ನೆನ್ಸಿ ವಿಚಾರವೂ ರಿವೀಲ್ ಆಗಿದೆ. ಮುಂದೊಂದು ದಿನ ಕರ್ಣ ಹಾಗೂ ನಿಧಿ ವಿವಾಹ ಕೂಡ ನಡೆಯುವ ಸಾಧ್ಯತೆ ಇದೆ. ಇಬ್ಬರ ಪತ್ನಿಯ ಮುದ್ದಿನ ಗಂಡ ಆಗಲು ಕರ್ಣ ರೆಡಿ ಆಗುತ್ತಿದ್ದಾನೆ. ಸದ್ಯ ಕರ್ಣ ಮನಸ್ಸು ಒಬ್ಬರಿಗೆ ಕೊಟ್ಟು, ಮತ್ತೊಬ್ಬರನ್ನು ವಿವಾಹ ಆಗುತ್ತಿದ್ದಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.