ರಕ್ಷಿತಾನ ತಬ್ಬಿಕೊಳ್ಳಲು ಹೋದ ಗಿಲ್ಲಿಗೆ ಖಡಕ್ ವಾರ್ನಿಂಗ್ ನೀಡಿದ ಕಾವ್ಯ

‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನಲ್ಲಿ 66 ದಿನಗಳು ಕಳೆದಿವೆ. ಆಟದ ತೀವ್ರತೆ ಹೆಚ್ಚಿದೆ. ಗಿಲ್ಲಿ ನಟ ಅವರು ಎಲ್ಲ ಸಂದರ್ಭದಲ್ಲೂ ಕಾಮಿಡಿ ಮಾಡುತ್ತಾರೆ ಎಂಬುದಕ್ಕೆ ಕಾವ್ಯ ಗರಂ ಆಗಿದ್ದಾರೆ. ಆದರೆ ಈಗಾಗಲೇ ಹಲವು ಬಾರಿ ಕಾವ್ಯ ಬುದ್ಧಿ ಹೇಳಿದ್ದರೂ ಕೂಡ ಗಿಲ್ಲಿ ಅವರು ಕಿಂಚಿತ್ತೂ ಬದಲಾಗಿಲ್ಲ.

ರಕ್ಷಿತಾನ ತಬ್ಬಿಕೊಳ್ಳಲು ಹೋದ ಗಿಲ್ಲಿಗೆ ಖಡಕ್ ವಾರ್ನಿಂಗ್ ನೀಡಿದ ಕಾವ್ಯ
Kavya, Rakshitha Shetty, Gilli Nata

Updated on: Dec 03, 2025 | 10:50 PM

ಬಿಗ್ ಬಾಸ್ (BBK 12) ಮನೆಯಲ್ಲಿ ಆಟದ ತೀವ್ರತೆ ಬದಲಾಗುತ್ತಿದೆ. ಮೊದಲು ಸ್ನೇಹಿತರಾಗಿ ಇದ್ದವರು ಈಗ ಎದುರುಬದರಾಗಿ ಪೈಪೋಟಿ ನೀಡುತ್ತಿದ್ದಾರೆ. ರಕ್ಷಿತಾ ಶೆಟ್ಟಿ (Rakshitha Shetty) ಮತ್ತು ಗಿಲ್ಲಿ ನಟ ಅವರೇ ಈ ಮಾತಿಗೆ ಸೂಕ್ತ ಉದಾಹರಣೆ. ರಕ್ಷಿತಾ ಶೆಟ್ಟಿ ಅವರನ್ನು ಗಿಲ್ಲಿ ನಟ ಮೊದಲಿನಿಂದಲೂ ಬೆಂಬಲಿಸುತ್ತಾ ಬಂದಿದ್ದರು. ಆದರೆ ಈಗ ರಕ್ಷಿತಾ ಶೆಟ್ಟಿ ಅವರೇ ಗಿಲ್ಲಿ ವಿರುದ್ಧ ಆಗಿದ್ದಾರೆ. ಹಾಗಿದ್ದರೂ ಕೂಡ ಅವರನ್ನು ತಬ್ಬಿಕೊಳ್ಳಲು ಗಿಲ್ಲಿ ನಟ (Gilli Nata) ಮುಂದಾದರು. ಆಗ ಕಾವ್ಯ ಅವರು ಗಿಲ್ಲಿಗೆ ಖಡಕ್ ಎಚ್ಚರಿಕೆ ನೀಡಿದರು. ಡಿಸೆಂಬರ್ 3ರ ಸಂಚಿಕೆಯಲ್ಲಿ ಈ ಪ್ರಸಂಗ ನಡೆಯಿತು.

ಟಾಸ್ಕ್ ವೇಳೆ ಗಿಲ್ಲಿ ನಟ ಮತ್ತು ಕಾವ್ಯ ಶೈವ ಅವರು ಜೋಡಿ ಆಗಿದ್ದರು. ಮಾಳು ನಿಪನಾಳ ಮತ್ತು ರಕ್ಷಿತಾ ಶೆಟ್ಟಿ ಅವರು ಜೋಡಿ ಆಗಿದ್ದರು. ಮೊದಲ ಹಂತದಲ್ಲಿ ಮಾಳು ನಿಪನಾಳ ಮತ್ತು ರಕ್ಷಿತಾ ಶೆಟ್ಟಿ ಅವರು ಟಾಸ್ಕ್ ಗೆದ್ದರು. ಅದನ್ನು ಬಿಗ್ ಬಾಸ್ ಘೋಷಿಸಿದಾಗ ಗಿಲ್ಲಿ ನಟ ಅವರು ರಕ್ಷಿತಾಳನ್ನು ಅಭಿನಂದಿಸಲು ಮುಂದಾದರು. ‘ನನ್ನ ವಂಶದ ಕುಡಿ’ ಎಂದು ರಕ್ಷಿತಾನ ತಬ್ಬಿಕೊಳ್ಳಲು ಹೋದ ಗಿಲ್ಲಿಗೆ ಕಾವ್ಯ ಅವರು ವಾರ್ನಿಂಗ್ ಕೊಟ್ಟರು.

ಕಾವ್ಯ ಅವರು ಎಚ್ಚರಿಕೆ ನೀಡುತ್ತಿದ್ದಂತೆಯೇ ಗಿಲ್ಲಿ ನಟ ಗಪ್ ಚುಪ್ ಆದರು. ಅಂದಹಾಗೆ, ಗಿಲ್ಲಿಗೆ ಕಾವ್ಯ ಅವರು ಈ ರೀತಿ ಎಚ್ಚರಿಕೆ ನೀಡಿದ್ದಕ್ಕೂ ಕಾರಣ ಇದೆ. ಗಿಲ್ಲಿ ಎಲ್ಲ ಸಂದರ್ಭದಲ್ಲೂ ಕಾಮಿಡಿ ಮಾಡುತ್ತಾರೆ. ಬಿಗ್ ಬಾಸ್ ಕೆಲವು ಘೋಷಣೆಗಳನ್ನು ಮಾಡುವಾಗಲೂ ಕೂಡ ಗಿಲ್ಲಿ ನಡುನಡುವೆ ಮಾತನಾಡಿ ಕಾಮಿಡಿ ಮಾಡಲು ಪ್ರಯತ್ನಿಸುತ್ತಾರೆ. ಅದಕ್ಕಾಗಿಯೇ ಗಿಲ್ಲಿಗೆ ಕಾವ್ಯ ಎಚ್ಚರಿಕೆ ನೀಡಿದರು.

ಮೊದಲು ಗಿಲ್ಲಿ ನಟ ಅವರನ್ನು ರಕ್ಷಿತಾ ಶೆಟ್ಟಿ ಹೆಚ್ಚು ಮೆಚ್ಚಿಕೊಂಡಿದ್ದರು. ಗಿಲ್ಲಿಗೂ ಕೂಡ ರಕ್ಷಿತಾ ಜೊತೆ ಒಳ್ಳೆಯ ಸ್ನೇಹ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲವೂ ಬದಲಾಗಿದೆ. ಗಿಲ್ಲಿಯ ಕೆಲವು ಮಾತು ಮತ್ತು ವರ್ತನೆಯನ್ನು ರಕ್ಷಿತಾ ಶೆಟ್ಟಿ ಅವರು ವಿರೋಧಿಸುತ್ತಾ ಬಂದಿದ್ದಾರೆ. ಪರಸ್ಪರ ಅವರಿಬ್ಬರು ನಾಮಿನೇಟ್ ಮಾಡಿಕೊಂಡಿದ್ದಾರೆ. ಕಾವ್ಯ ಕೂಡ ನಾಮಿನೇಟ್ ಆಗಿದ್ದಾರೆ.

ಇದನ್ನೂ ಓದಿ: ‘ನನಗೆ ಸಾಕಾಗಿದೆ’; ಗಿಲ್ಲಿ ಗೆಳೆತನ ಮಾಡಿ ಕೇಳಿದ ಮಾತಿಂದ ಸುಸ್ತಾದ ಕಾವ್ಯಾ

ಗಿಲ್ಲಿ ನಟ ಅವರು ಎಲ್ಲ ಸಂದರ್ಭದಲ್ಲೂ ಕಾಮಿಡಿ ಮಾಡಿದ್ದಕ್ಕಾಗಿ ಅವರನ್ನು ಬಿಗ್ ಬಾಸ್ ಮನೆಯ ಹಲವು ಸದಸ್ಯರು ವಿರೋಧಿಸುತ್ತಿದ್ದಾರೆ. ಅವರ ಕಾಮಿಡಿಯನ್ನೇ ಕಾರಣವಾಗಿ ಇಟ್ಟುಕೊಂಡು ಬಹುತೇಕರು ನಾಮಿನೇಟ್ ಮಾಡಿದ್ದಾರೆ. ಹಾಗಿದ್ದರೂ ಕೂಡ ಗಿಲ್ಲಿ ಅವರ ಕಾಮಿಡಿಯನ್ನು ಬಿಗ್ ಬಾಸ್ ವೀಕ್ಷಕರು ಎಂಜಾಯ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.