‘ನನಗೆ ಸಾಕಾಗಿದೆ’; ಗಿಲ್ಲಿ ಗೆಳೆತನ ಮಾಡಿ ಕೇಳಿದ ಮಾತಿಂದ ಸುಸ್ತಾದ ಕಾವ್ಯಾ
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಕಾವ್ಯಾ ಮತ್ತು ಗಿಲ್ಲಿ ನಡುವಿನ ಗೆಳೆತನ ಕಾವ್ಯಾ ಆಟಕ್ಕೆ ಅಡ್ಡಿಯಾಗಿದೆ. ರಾಶಿಕಾ ಈ ಗೆಳೆತನದ ಕಾರಣ ನೀಡಿ ಕಾವ್ಯಾ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇದು ಕಾವ್ಯಾ ಅವರಿಗೆ ಬೇಸರ ಮೂಡಿಸಿದ್ದು, ತಮ್ಮ ಆಟ ಸ್ವತಂತ್ರವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಆರೋಪಗಳಿಂದ ತಮಗೆ ಸಾಕಾಗಿದೆ ಎಂದು ಕಾವ್ಯಾ ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ (Bigg Boss) ಮನೆಯಲ್ಲಿ ಕಾವ್ಯಾ ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇವರು ಯಾವಾಗಲೂ ಜೊತೆಯಲ್ಲಿ ಇರುತ್ತಾರೆ. ಆಟ ಎಂಬುದು ಬಂದಾಗ ವೈಯಕ್ತಿಕವಾಗಿ ತಮ್ಮ ಆಟ ತೋರಿಸುತ್ತಾರೆ. ಯಾರೇ ತಪ್ಪು ಮಾಡಿದರೂ ಅದನ್ನು ತಪ್ಪು ಎಂದು ಹೇಳುತ್ತಾರೆ. ಆದರೆ, ಗೊತ್ತಿದ್ದೋ ಗೊತ್ತಿಲ್ಲದೆಯೋ ಗಿಲ್ಲಿ ಜೊತೆಗಿನ ಗೆಳೆತನ ಕಾವ್ಯಾ ಆಟಕ್ಕೆ ತೊಂದರೆ ತರುತ್ತಿದೆ. ಬೇರೆಯವರು ಚುಚ್ಚಿ ಆಡುವ ಮಾತು ಕಾವ್ಯಾಗೆ ಬೇಸರ ಮೂಡಿಸಿದೆ.
ನವೆಂಬರ್ 2ರ ಎಪಿಸೋಡ್ನಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಈ ವೇಳೆ ಕಾವ್ಯಾ ಅವರನ್ನು ರಾಶಿಕಾ ಅವರುನ ನಾಮಿನೇಟ್ ಮಾಡಿದರು. ಈ ನಾಮಿನೇಷನ್ ವೇಳೆ ಅವರು ಕೊಟ್ಟಿದ್ದು ಗಿಲ್ಲಿ ಜೊತೆಗಿನ ಗೆಳೆತನದ ಕಾರಣ. ‘ಗಿಲ್ಲಿಗಾಗಿ ಕಾವ್ಯಾ ಸ್ಟ್ಯಾಂಡ್ ತೆಗೆದುಕೊಳ್ಳುತ್ತಾಳೆ. ತನಗಾಗಿ ಆಕೆ ಸ್ಟ್ಯಾಂಡ್ ತೆಗೆದುಕೊಂಡಿಲ್ಲ’ ಎಂದು ರಾಶಿಕಾ ಆರೋಪಿಸಿದರು. ಇದು ಕಾವ್ಯಾಗೆ ಬೇಸರ ಮೂಡಿಸಿದೆ.
‘ಗಿಲ್ಲಿ.. ಗಿಲ್ಲಿ.. ಗಿಲ್ಲಿ. ಈ ವಿಷಯ ಯಾವಾಗ ಹೋಗುತ್ತೆ ಅನ್ನೋದು ನನಗೂ ಗೊತ್ತಿಲ್ಲ.ಗಿಲ್ಲಿ ಜೊತೆಗಿನ ಗೆಳೆತನ ಕಣ್ಣು ಕುಕ್ಕುತ್ತಿದೆ ಎಂದರೆ ಯಾರೂ ಏನೂ ಮಾಡೋಕೆ ಆಗಲ್ಲ. ನಾವು ಪ್ರ್ಯಾಕ್ಟಿಕಲ್ ಆಗಿ ಇದ್ದೇವೆ. ನಮ್ಮ ವಿಷಯ ಬಂದಾಗ ನಾವು ಸ್ಟ್ಯಾಂಡ್ ತೆಗೆದುಕೊಳ್ಳುತ್ತೇವೆ. ನಾನು ಇಂಡಿಪೆಂಡೆಂಟ್ ಆಗಿ ಆಟ ಆಡುತ್ತಿದ್ದೇನೆ. ಹಾಗೆ ಆಟ ಆಡದೆ ಇದ್ದಿದ್ದರೆ ನಾನು ಇಲ್ಲಿವರೆಗೆ ಬರುತ್ತಾ ಇರಲಿಲ್ಲ’ ಎಂದರು ಕಾವ್ಯಾ.
‘ಇತ್ತೀಚಿನ ದಿನಗಳಲ್ಲಿ ಗಿಲ್ಲಿ ತಪ್ಪು ಮಾಡಿದಾಗ ನಾನು ಅವನ ಪರವಾಗಿ ನಿಂತಿದ್ದೆ ಎಂಬ ಒಂದು ನಿದರ್ಶನ ತೋರಿಸಿ. ನನಗೂ ಇದೆಲ್ಲ ಸಾಕಾಗಿ ಹೋಗಿದೆ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಗಿಲ್ಲಿ ಜೊತೆಗಿನ ಗೆಳೆತನ ಇಟ್ಟುಕೊಂಡು ನಾಮಿನೇಟ್ ಮಾಡೋದನ್ನು ಅವರಿಂದ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿದ್ದುಕೊಂಡೇ ಲಕ್ಷ ಲಕ್ಷ ಖರ್ಚು ಮಾಡಿದ ಜಾನ್ವಿ;ಸಂಭಾವನೆ ಬಗ್ಗೆಯೂ ಮಾತು ಬಿಗ್ ಬಾಸ್ ಮನೆಯಲ್ಲಿ 24 ಗಂಟೆಯೂ ಆಟ ನಡೆಯುತ್ತಲೇ ಇರುತ್ತದೆ. ಆದರೆ, ಜನರಿಗೆ ತೋರಿಸೋದು ಒಂದು ಗಂಟೆ ಮಾತ್ರ. ಹೀಗಾಗಿ, ಯಾವ ಯಾವ ವಿಷಯ ಟೆಲಿಕಾಸ್ಟ್ ಆಯಿತು, ಯಾರ ಕ್ರೇಜ್ ಯಾವ ರೀತಿ ಇದೆ ಎಂಬ ಐಡಿಯಾ ಬಿಗ್ ಬಾಸ್ ಮನೆಯಲ್ಲಿ ಇದ್ದವರಿಗೆ ಸಿಕ್ಕಿರೋದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




