AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ ಮನೆಯಲ್ಲಿದ್ದುಕೊಂಡೇ ಲಕ್ಷ ಲಕ್ಷ ಖರ್ಚು ಮಾಡಿದ ಜಾನ್ವಿ; ಸಂಭಾವನೆ ಬಗ್ಗೆಯೂ ಮಾತು

ಬಿಗ್ ಬಾಸ್ ಕನ್ನಡ 12ರಿಂದ ಎಲಿಮಿನೇಟ್ ಆದ ಜಾನ್ವಿ ಟಿವಿ9 ಕನ್ನಡಕ್ಕೆ ಸಂದರ್ಶನ ನೀಡಿದ್ದಾರೆ. ಮನೆಯಲ್ಲಿದ್ದ ಅವಧಿಯಲ್ಲಿ ತಮ್ಮ ಡ್ರೆಸ್ ಹಾಗೂ ಮೇಕಪ್‌ಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾಗಿ ಬಹಿರಂಗಪಡಿಸಿದ್ದಾರೆ. ತಮ್ಮ ಬಿಗ್ ಬಾಸ್ ಸಂಭಾವನೆಗಿಂತ ಬಟ್ಟೆಗೆ ಮಾಡಿರೋ ಖರ್ಚು ಹೆಚ್ಚಾಗಿದೆ ಎಂದು ಜಾನ್ವಿ ಅವರು ಹೇಳಿದ್ದಾರೆ.

ಬಿಗ್ ಬಾಸ್​ ಮನೆಯಲ್ಲಿದ್ದುಕೊಂಡೇ ಲಕ್ಷ ಲಕ್ಷ ಖರ್ಚು ಮಾಡಿದ ಜಾನ್ವಿ; ಸಂಭಾವನೆ ಬಗ್ಗೆಯೂ ಮಾತು
ಜಾನ್ವಿ
ರಾಜೇಶ್ ದುಗ್ಗುಮನೆ
|

Updated on:Dec 03, 2025 | 8:27 AM

Share

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (BBK 12) ಸ್ಪರ್ಧಿಸಿದ್ದ ಜಾನ್ವಿ ಅವರು ಕಳೆದ ವಾರ ಎಲಿಮಿನೇಟ್ ಆದರು. ಅವರಿಗಿಂತ ವೀಕ್ ಸ್ಪರ್ಧಿಗಳು ಬಿಗ್ ಬಾಸ್​ನಲ್ಲಿ ಇದ್ದಾರೆ ಎಂಬುದು ಅವರ ಅಭಿಪ್ರಾಯ. ಆದಾಗ್ಯೂ ಅವರು ದೊಡ್ಮನೆಯಿಂದ ಹೊರ ಬರಬೇಕಾದ ಪರಿಸ್ಥಿತಿ ಬಂತು. ಬಿಗ್ ಬಾಸ್ ಆಟದಲ್ಲಿ ಜನರ ವೋಟ್​ಗಳ ಜೊತೆ ಲಕ್ ಕೂಡ ಮುಖ್ಯವಾಗುತ್ತದೆ. ಒಂದು ವಾರ ನಾಮಿನೇಷನ್​ನಿಂದ ಬಚಾವ್ ಆದರೆ ಕೆಲವು ವಾರ ಬಿಗ್ ಬಾಸ್ ಮನೆಯಲ್ಲಿ ಮುಂದುವರಿಯೋ ಅವಕಾಶ ಇರುತ್ತದೆ. ಇದನ್ನು ಅವರು ಬಲವಾಗಿ ನಂಬುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದುಕೊಂಡೇ ಲಕ್ಷ ಲಕ್ಷ ಕರ್ಚು ಮಾಡಿದ ಬಗ್ಗೆ ಜಾನ್ವಿ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಜಾನ್ವಿ ಅವರು ಡ್ರೆಸ್ ಹಾಗೂ ಮೇಕಪ್​ಗೆ ತುಂಬಾನೇ ಪ್ರಾಮುಖ್ಯತೆ ಕೊಡುತ್ತಿದ್ದರು. ಅವರು ಒಂದೇ ಒಂದು ದಿನ ಕೂಡ ನಾರ್ಮಲ್ ಡ್ರೆಸ್ ಹಾಕಿ ಕಾಣಿಸಿಕೊಂಡವರಲ್ಲ. ಎದ್ದ ತಕ್ಷಣ ತಿಂಡಿ ತಿಂದು, ಸ್ನಾನ ಮಾಡಿ ರೆಡಿ ಆಗಿ ಕುಳಿತುಕೊಳ್ಳುತ್ತಿದ್ದರು. ಈಗ ಜಾನ್ವಿ ಅವರು ಇದಕ್ಕೆಲ್ಲ ಎಷ್ಟು ಖರ್ಚಾಯಿತು ಎಂಬುದನ್ನು ವಿವರಿಸಿದ್ದಾರೆ.

‘ನಾನು ಡ್ರೆಸ್​ಗೆ ತುಂಬಾನೇ ಪ್ರಾಮುಖ್ಯತೆ ಕೊಡುತ್ತಿದ್ದೆ. ಬಿಗ್ ಬಾಸ್ ರೀಚ್ ಏನು ಎಂಬುದು ನನಗೆ ಗೊತ್ತಿತ್ತು. ಕೋಟ್ಯಂತರ ಜನರು ನೋಡುತ್ತಿರುತ್ತಾರೆರೆ. ಹೀಗಾಗಿ, ಹೂಡಿಕೆ ಮಾಡಲೇಬೇಕಿತ್ತು. ಡ್ರೆಸ್ ವಿಚಾರದಲ್ಲಿ ಕಾಂಪ್ರಮೈಸ್ ಆಗಲೇಬಾರದು ಎಂದುಕೊಂಡಿದ್ದೆ. ಪಿಆರ್, ಮೇಕಪ್ ಹಾಗೂ ಡ್ರೆಸ್​ನಿಂದ ನಾಲ್ಕು ಲಕ್ಷ ರೂಪಾಯಿ ಖರ್ಚಾಗಿದೆ’ ಎಂದು ಜಾನ್ವಿ ಹೇಳಿದ್ದಾರೆ.

‘ಸಂಭಾವನೆಗಿಂತ ಹೆಚ್ಚು ಮೇಕಪ್​ಗೆ ಖರ್ಚಾಗಿದೆಯಲ್ಲ’ ಎಂಬ ಪ್ರಶ್ನೆಯನ್ನು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಅಂದರೆ ಎರಡು ತಿಂಗಳು ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದಕ್ಕೆ ಅವರಿಗೆ ನಾಲ್ಕು ಲಕ್ಷಕ್ಕಿಂತ ಕಡಿಮೆ ಸಂಭಾವನೆ ಸಿಕ್ಕಿದೆ.

ಇದನ್ನೂ ಓದಿ: ಗಿಲ್ಲಿನೇ ಬಿಗ್ ಬಾಸ್ ಟ್ರೋಫಿ ಗೆಲ್ಲೋದು: ಭವಿಷ್ಯ ನುಡಿದ ಜಾಹ್ನವಿ

ಈ ಬಾರಿಯ ಬಿಗ್ ಬಾಸ್​ನ ಗಿಲ್ಲಿಯೇ ಗೆಲ್ಲೋದು ಪಕ್ಕಾ ಎಂದು ಜಾನ್ವಿ ಭವಿಷ್ಯ ನುಡಿದಿದ್ದಾರೆ. ಗಿಲ್ಲಿಗೆ ಯಾವ ರೀತಿಯ ಕ್ರೇಜ್ ಸೃಷ್ಟಿ ಆಗಿದೆ ಎಂಬುದರ ಐಡಿಯಾ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಸೂಚನೆ ಸಿಕ್ಕಿತ್ತು. ಹೊರ ಬಂದಮೇಲೆ ಅದರಲ್ಲಿ ಅವರಿಗೆ ಸ್ಪಷ್ಟತೆ ಸಿಕ್ಕಿದೆ. ಜಾನ್ವಿ ಹಾಗೂ ಗಿಲ್ಲಿ ಮಧ್ಯೆ ಬಿಗ್ ಬಾಸ್ ಮನೆಯಲ್ಲಿದ್ದಾಗ ಸಾಕಷ್ಟು ಕಿರಿಕ್​ಗಳು ಆಗಿದ್ದವು. ಜಾನ್ವಿ ಹಾಗೂ ಅಶ್ವಿನಿ ಮೇಲೆ ಹೇಳಿದ್ದ ‘ದೊಡ್ಡವ್ವ ದೊಡ್ಡವ್ವ ದ್ವಾಸೆ (ದೋಸೆ) ಕೊಡು..’ ಡೈಲಾಗ್ ಹಾಡಾಗಿ ಬದಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:00 am, Wed, 3 December 25

ಡಿಕೆಶಿ ಬಳಿ ದೆಹಲಿಗೆ ಬನ್ನಿ ಎಂದಿದ್ದರೂ ರಾಹುಲ್ ಗಾಂಧಿ ಸಿಗೋದು ಅನುಮಾನ!
ಡಿಕೆಶಿ ಬಳಿ ದೆಹಲಿಗೆ ಬನ್ನಿ ಎಂದಿದ್ದರೂ ರಾಹುಲ್ ಗಾಂಧಿ ಸಿಗೋದು ಅನುಮಾನ!
ಗವಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶ: ಇದರ ವಿಶೇಷ ಏನು ಗೊತ್ತೇ?
ಗವಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶ: ಇದರ ವಿಶೇಷ ಏನು ಗೊತ್ತೇ?
ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ
ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ