AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಲ್ಡ್ ಕಾರ್ಡ್ ವಿಷಯದಲ್ಲಿ ದೊಡ್ಡ ಟ್ವಿಸ್ಟ್ ಕೊಡಲು ರೆಡಿ ಆದ ಬಿಗ್ ಬಾಸ್

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅನಿರೀಕ್ಷಿತ ಟ್ವಿಸ್ಟ್‌ಗಳು ಮುಂದುವರಿದಿವೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟ ರಾಜತ್ ಮತ್ತು ಚೈತ್ರಾ ಅವರನ್ನು ಈ ವಾರವೇ ಮನೆಯಿಂದ ಹೊರ ಕಳುಹಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಕೇವಲ ಒಂದು ವಾರ ಹೆಚ್ಚುವರಿಯಾಗಿ ಉಳಿಸಿಕೊಂಡು ವೀಕ್ಷಕರಿಗೆ ಮತ್ತು ಮನೆಯ ಸದಸ್ಯರಿಗೆ ಅಚ್ಚರಿ ನೀಡಲು ಬಿಗ್ ಬಾಸ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ವೈಲ್ಡ್ ಕಾರ್ಡ್ ವಿಷಯದಲ್ಲಿ ದೊಡ್ಡ ಟ್ವಿಸ್ಟ್ ಕೊಡಲು ರೆಡಿ ಆದ ಬಿಗ್ ಬಾಸ್
ಚೈತ್ರಾ-ರಜತ್
ರಾಜೇಶ್ ದುಗ್ಗುಮನೆ
|

Updated on: Dec 03, 2025 | 8:55 AM

Share

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (BBK 12) ಯಾರೂ ಊಹಿಸದ ಟ್ವಿಸ್ಟ್​ಗಳನ್ನು ಬಿಗ್ ಬಾಸ್ ನೀಡುತ್ತಿದ್ದಾರೆ. ವೀಕ್ಷಕರ ಊಹೆಗೆ ಮೀರಿ ತಿರುವುಗಳನ್ನು ನೀಡಲಾಗುತ್ತಿದೆ. ಕಳೆದ ಸೀಸನ್​ನ ಐದು ಸ್ಪರ್ಧಿಗಳನ್ನು ಕಳೆದ ವಾರ ಕರೆಸಲಾಗಿತ್ತು. ಈ ಪೈಕಿ ರಜತ್ ಹಾಗೂ ಚೈತ್ರಾ ಅವರನ್ನು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಉಳಿಸಿಕೊಳ್ಳಲಾಗಿದೆ. ಈಗ ಬಿಗ್ ಬಾಸ್ ಮತ್ತೊಂದು ಟ್ವಿಸ್ಟ್ ಕೊಡಲು ರೆಡಿ ಆಗಿದ್ದಾರೆ ಎಂಬ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.

ರಜತ್ ಹಾಗೂ ಚೈತ್ರಾ ಅವರನ್ನು ವೈಲ್ಡ್ ಕಾರ್ಡ್ ಆಗಿ ಉಳಿಸಿಕೊಳ್ಳುವ ಬಗ್ಗೆ ಕಿಚ್ಚ ಸುದೀಪ್ ವೀಕೆಂಡ್​ನಲ್ಲಿ ಘೋಷಣೆ ಮಾಡಿದರು. ಇಬ್ಬರೂ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದು 58ನೇ ದಿನ. ಮೊದಲ ವಾರ ಸಾಕಷ್ಟು ಬಿಸಿ ಮುಟ್ಟಿಸಿದ್ದ ಇವರು ನಂತರ ಕೂಲ್ ಆದರು. ಈಗ ರಜತ್ ಹಾಗೂ ಚೈತ್ರಾ ಎಲ್ಲರ ಜೊತೆ ಬೆರೆತಿದ್ದಾರೆ. ಈಗ ಕೇಳಿ ಬರುತ್ತಿರುವ ಮಾಹಿತಿ ಏನೆಂದರೆ ಇವರು ಈ ವಾರವರೇ ಹೊರ ಬರಲಿದ್ದಾರಂತೆ.

ಹೌದು, ಸೋಶಿಯಲ್ ಮೀಡಿಯಾದಲ್ಲಿ ಹೀಗೊಂದು ಸುದ್ದಿ ಹರಿದಾಡುತ್ತಿದೆ. ಚೈತ್ರಾ ಹಾಗೂ ರಜತ್ ಈ ವಾರಾಂತ್ಯದೊಳಗೆ ಮನೆಯಿಂದ ಹೊರ ನಡೆಯುತ್ತಾರೆ ಎಂದು ಹೇಳಲಾಗುತ್ತಾ ಇದೆ. ಮನೆಯವರಿಗೆ ಚಮಕ್ ಕೊಡೋ ದೃಷ್ಟಿಯಿಂದ ಇವರನ್ನು ಒಂದು ವಾರ ಹೆಚ್ಚುವರಿಯಾಗಿ ಉಳಿಸಿಕೊಳ್ಳಲಾಗಿತ್ತು ಎಂದು ಹೇಳಲಾಗುತ್ತಾ ಇದೆ.

ರಜತ್ ಹಾಗೂ ಚೈತ್ರಾ ಮಧ್ಯೆ ಸಾಕಷ್ಟು ಸಾಮ್ಯತೆ ಇದೆ. ರಜತ್ ಹಾಗೂ ಚೈತ್ರಾ ಇಬ್ಬರ ಮೇಲೂ ಕೇಸ್ ಇದೆ. ಇನ್ನು ಜಗಳ ಎಂಬ ವಿಷಯ ಬಂದಾಗ ಇವರು ದೊಡ್ಮನೆಯಲ್ಲಿ ಎಲ್ಲರಿಗಿಂತ ಮುಂದೆ ಇರುತ್ತಿದ್ದರು. ಹೀಗಾಗಿ ದೊಡ್ಮನೆಯಲ್ಲಿ ಅವರನ್ನು ಉಳಿಸಿಕೊಳ್ಳಲಾಗಿತ್ತು.

ಇದನ್ನೂ ಓದಿ: ಬಿಗ್ ಬಾಸ್​ ಮನೆಯಲ್ಲಿದ್ದುಕೊಂಡೇ ಲಕ್ಷ ಲಕ್ಷ ಖರ್ಚು ಮಾಡಿದ ಜಾನ್ವಿ; ಸಂಭಾವನೆ ಬಗ್ಗೆಯೂ ಮಾತು

ಬಿಗ್ ಬಾಸ್ ಆಟ ಈಗಾಗಲೇ ಎರಡು ತಿಂಗಳು ಪೂರೈಸಿದೆ. ಗಿಲ್ಲಿ ನಟ ಅವರು ಎಲ್ಲರ ಫೇವರಿಟ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಹಲವು ರಿಯಾಲಿಟಿ ಶೋಗಳನ್ನು ಮಾಡಿದ ಅನುಭವ ಅವರಿಗೆ ಇದೆ. ಈ ಅನುಭವ ‘ಬಿಗ್ ಬಾಸ್’ ಅಲ್ಲಿ ಸಹಕಾರಿ ಆಗುತ್ತಿದೆ. ಸಿನಿಮಾ ಡೈಲಾಗ್ ಹಾಗೂ ಸಿನಿಮಾ ದೃಶ್ಯಗಳನ್ನು ರೀ ಕ್ರಿಯೇಟ್ ಮಾಡಿ ಅವರು ಎಲ್ಲರಿಗೂ ಮನರಂಜನೆ ನೀಡುತ್ತಿದ್ದಾರೆ. ‘ಸೂರ್ಯವಂಶ’, ಕೆಜಿಎಫ್’ ಮೊದಲಾದ ಡೈಲಾಗಳನ್ನು ಅವರು ದೊಡ್ಮನೆಯಲ್ಲಿ ಹೇಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.