ಎಲ್ಲರೂ ಮೆಚ್ಚುವ ಕೆಲಸ ಮಾಡಿದ ಧ್ರುವಂತ್; ಈ ವಾರ ಕಿಚ್ಚನ ಚಪ್ಪಾಳೆ ಫಿಕ್ಸ್?
ಬಿಗ್ ಬಾಸ್ ಮನೆಯಲ್ಲಿ ಏಕಾಂಗಿಯಾಗಿರೋ ಧ್ರುವಂತ್, ಜೋಡಿ ಟಾಸ್ಕ್‌ಗೆ ಯಾರೂ ಆಯ್ಕೆ ಮಾಡದಿದ್ದರೂ ಕುಗ್ಗಲಿಲ್ಲ. ಬದಲಿಗೆ, 'ರಿಂಗ ರಿಂಗ' ಟಾಸ್ಕ್ ಅನ್ನು ಶ್ರದ್ಧೆಯಿಂದ ನಿರ್ವಹಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಕಣ್ಣು ಮುಚ್ಚಿ ರಿಂಗ್ ಎಸೆದು ಪ್ರಾಮಾಣಿಕತೆ ತೋರಿದ್ದರಿಂದ, ಈ ವಾರ ಅವರಿಗೆ ಕಿಚ್ಚನ ಚಪ್ಪಾಳೆ ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ಅವರ ಪರಿಶ್ರಮಕ್ಕೆ ಸಿಕ್ಕ ಫಲ.

ಬಿಗ್ ಬಾಸ್ ಮನೆಯಲ್ಲಿರೋ ಧ್ರುವಂತ್ (Dhruvanth) ಅವರು ಕಳೆದ ಕೆಲವು ದಿನಗಳಿಂದ ಮನೆಯಿಂದ ಹೊರ ಹೋಗುವ ಬಗ್ಗೆ ಯೋಚಿಸುತ್ತಿದ್ದಾರೆ. ಮನೆಯಲ್ಲಿ ಎಲ್ಲರೂ ಅವರನ್ನು ಕೀಳಾಗಿ ಕಾಣುತ್ತಿರುವುದು ಅವರ ಬೇಸರಕ್ಕೆ ಕಾರಣ. ಈ ವಾರ ಜೋಡಿ ಟಾಸ್ಕ್ ನಡೆದಿದೆ. ಯಾರೊಬ್ಬರೂ ಅವರನ್ನು ಟಾಸ್ಕ್‌ಗೆ ತೆಗೆದುಕೊಂಡಿಲ್ಲ. ಹಾಗಂತ ಅವರು ಕುಗ್ಗಿಲ್ಲ. ಅವರಿಗೆ ಕೊಟ್ಟ ಉಸ್ತುವಾರಿಯನ್ನು ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. ಅದರಲ್ಲೂ ‘ರಿಂಗ ರಿಂಗ’ ಟಾಸ್ಕ್ನಲ್ಲಿ ಅವರು ನಡೆದುಕೊಂಡ ರೀತಿಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಾ ಇದ್ದಾರೆ.
ಧ್ರುವಂತ್ ಅವರದ್ದು ತುಂಬಾನೇ ವಿಚಿತ್ರ ಸ್ವಭಾವ. ಅವರು ಯಾವಾಗ ಯಾರ ಜೊತೆ ಇರುತ್ತಾರೆ ಎಂದು ಹೇಳೋಕೆ ಸಾಧ್ಯವಿಲ್ಲ. ಯಾರ ಬಳಿಯಾದರೂ ಒಳ್ಳೆಯ ರೀತಿಯಲ್ಲಿ ಮಾತನಾಡಿದರೆ, ಸ್ವಲ್ಪ ಹೊತ್ತಿನಲ್ಲೇ ಅವರು ಉಲ್ಟಾ ಹೊಡೆಯುತ್ತಾರೆ. ಅವರ ವಿರುದ್ಧವೇ ಪಿತೂರಿ ಮಾಡುತ್ತಾರೆ. ಈ ಕಾರಣದಿಂದಲೇ ಕಳೆದ ವಾರ ಅವರಿಗೆ ಈ ರೀತಿಯ ಸಾಕಷ್ಟು ಬಿರುದುಗಳು ಸಿಕ್ಕವು. ಅವರನ್ನು ಕೆಲವರು ಊಸರವಳ್ಳಿ ಎಂದರು, ಕೆಲವರು ಕಪಟಿ ಎಂದರು. ಹೀಗೆ ನಾನಾ ರೀತಿಯಲ್ಲಿ ಕರೆಯಲಾಯಿತು. ಹೀಗಾಗಿ, ಬಿಗ್ ಬಾಸ್ನಿಂದ ಹೊರ ಹೋಗುತ್ತೇನೆ ಎಂದು ಅವರು ಹೇಳಿದರು. ಆದರೆ, ಇದಕ್ಕೆ ಸುದೀಪ್ ಒಪ್ಪಿಲ್ಲ.
ಈ ವಾರ ಅವರನ್ನು ಕುಗ್ಗಿಸೋ ಮತ್ತೊಂದು ಘಟನೆ ನಡೆಯಿತು. ಅದೇನೆಂದರೆ ಜೋಡಿ ಟಾಸ್ಕ್ನಲ್ಲಿ ಯಾರೊಬ್ಬರೂ ಧ್ರುವಂತ್ ಅವರನ್ನು ಆಯ್ಕೆ ಮಾಡಿಯೇ ಇಲ್ಲ. ಮನೆಯಲ್ಲಿ ಅವರು ಯಾರಿಗೂ ಬೇಡವಾದರು. ಹೀಗಾಗಿ ಬಿಗ್ ಬಾಸ್ ಅವರಿಗೆ ಉಸ್ತುವಾರಿ ವಹಿಸಿದ್ದಾರೆ. ಇದು ಸಣ್ಣ ಕೆಲಸ ಎಂದು ಭಾವಿಸದೆ ತಮಗೆ ಸಿಕ್ಕ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ಇದರಿಂದ ಅವರು ಮೆಚ್ಚುಗೆ ಪಡೆದಿದ್ದಾರೆ.
ಇದನ್ನೂ ಓದಿ: ‘ಈ ವಾರ ನನ್ನ ಹೊರಗೆ ಕಳುಹಿಸಿ’; ಸುಸ್ತಾದ ಧ್ರುವಂತ್, ಬಿಗ್ ಬಾಸ್ ಎದುರು ಕೋರಿಕೆ
ರಿಂಗ್ನ ಎಸೆಯುವ ಕೆಲಸ ಧ್ರುವಂತ್ಗೆ ನೀಡಲಾಗಿತ್ತು. ಕಣ್ಣನ್ನು ಬಿಟ್ಟು ಎಸೆದರೆ ‘ನೀನು ಫೇವರಿಸಂ ಮಾಡಿದೆ’ ಎಂಬ ಮಾತನ್ನು ಕೇಳಬೇಕಾಗುತ್ತದೆ. ಈ ಕಾರಣದಿಂದಲೇ ಧ್ರುವಂತ್ ಅವರು ಕಣ್ಣು ಮುಚ್ಚಿಕೊಂಡು ರಿಂಗ್ನ ಎಸೆದಿದ್ದಾರೆ. ಅವರ ಈ ಆಟಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಅವರಿಗೆ ಈ ವಾರ ಕಿಚ್ಚನ ಚಪ್ಪಾಳೆ ಫಿಕ್ಸ್ ಎಂಬ ಮಾತುಗಳು ಕೇಳಿ ಬಂದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:57 am, Thu, 4 December 25




