AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈ ವಾರ ನನ್ನ ಹೊರಗೆ ಕಳುಹಿಸಿ’; ಸುಸ್ತಾದ ಧ್ರುವಂತ್, ಬಿಗ್ ಬಾಸ್ ಎದುರು ಕೋರಿಕೆ

ಧ್ರುವಂತ್ ಬಿಗ್ ಬಾಸ್ ಮನೆಯಲ್ಲಿ ವಿಭಿನ್ನವಾಗಿ ವರ್ತಿಸಿ ವಿವಾದ ಸೃಷ್ಟಿಸಿದ್ದಾರೆ. ಸ್ಪರ್ಧಿಗಳಿಂದ ಟೀಕೆಗೆ ಗುರಿಯಾದ ಧ್ರುವಂತ್, ನಿರ್ಗಮಿಸಲು ನಿರ್ಧರಿಸಿದ್ದಾರೆ. ಸುದೀಪ್ ಹೊರಹೋಗಲು ಒಪ್ಪದಿದ್ದರೂ, ಧ್ರುವಂತ್ ಕ್ಯಾಮೆರಾ ಮುಂದೆ ಹೊರಗೆ ಕಳುಹಿಸುವಂತೆ ಮನವಿ ಮಾಡಿದ್ದಾರೆ. ಇದು ಅವರ ಸ್ವಂತ ನಿರ್ಧಾರವೇ ಅಥವಾ ಆಟದ ತಂತ್ರವೇ ಎಂಬುದು ಕುತೂಹಲ ಮೂಡಿಸಿದೆ.

‘ಈ ವಾರ ನನ್ನ ಹೊರಗೆ ಕಳುಹಿಸಿ’; ಸುಸ್ತಾದ ಧ್ರುವಂತ್, ಬಿಗ್ ಬಾಸ್ ಎದುರು ಕೋರಿಕೆ
ಧ್ರುವಂತ್
ರಾಜೇಶ್ ದುಗ್ಗುಮನೆ
|

Updated on: Dec 01, 2025 | 8:56 AM

Share

ಧ್ರುವಂತ್ ಅವರು ಬಿಗ್ ಬಾಸ್ (Bigg Boss) ಮನೆಯಲ್ಲಿ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಯಾವ ಕ್ಷಣದಲ್ಲಿ ಯಾರ ಜೊತೆ ಅವರು ಹೇಗಿರುತ್ತಾರೆ ಎಂಬುದನ್ನು ಊಹಿಸೋದು ಕೂಡ ಕಷ್ಟ. ಒಬ್ಬರ ಜೊತೆ ಒಳ್ಳೆಯ ರೀತಿಯಲ್ಲಿ ಮಾತನಾಡಿ, ನಂತರ ಅವರ ವಿರುದ್ಧವೇ ಪಿತೂರಿ ಮಾಡುತ್ತಾರೆ. ಈ ವಿಷಯ ಮನೆಯ ಇತರ ಸ್ಪರ್ಧಿಗಳಿಗೆ ಇಷ್ಟ ಆಗಿಲ್ಲ. ಇದನ್ನು ಸುದೀಪ್ ಎದುರು ಎಲ್ಲರೂ ಹೇಳಿದ್ದಾರೆ. ಹೀಗಾಗಿ, ಧ್ರುವಂತ್ ಅವರು ಬಿಗ್ ಬಾಸ್​ನಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ.

ಭಾನುವಾರ ಸುದೀಪ್ ಒಂದು ಚಟುವಟಿಕೆ ನೀಡಿದರು. ಈ ಚಟುವಟಿಕೆ ಪ್ರಕಾರ ಟೇಬಲ್ ಮೇಲಿರುವ ಕೆಲವು ಬೋರ್ಡ್​ಗಳನ್ನು ಸರಿ ಹೊಂದುವ ಸ್ಪರ್ಧಿಗಳಿಗೆ ನೀಡಬೇಕು. ಇಲ್ಲಿ ಎಲ್ಲವೂ ನೆಗೆಟಿವ್ ಟ್ಯಾಗ್​ಗಳೇ ಇದ್ದವು. ಅನೇಕರು ಧ್ರುವಂತ್ ಹೆಸರನ್ನು ತೆಗೆದುಕೊಂಡರು. ಆಗಲೇ ಅವರಿಗೆ ಬೇಸರವಾಗಿ ಹೊರ ಹೋಗುತ್ತೇನೆ ಎಂದು ಸುದೀಪ್ ಬಳಿ ಹೇಳಿಕೊಂಡರು.

ಇದಕ್ಕೆ ಸುದೀಪ್ ಅವರು ಒಪ್ಪಿಗೆ ಕೊಟ್ಟಿಲ್ಲ. ‘ಒಳಕ್ಕೆ ಹೋಗೋದು ಮಾತ್ರ ನಿಮ್ಮ ನಿರ್ಧಾರ. ಆ ಬಳಿಕ ಏನೇ ಆದರೂ ಜನ ನಿರ್ಧರಿಸಬೇಕು. ನಿಮ್ಮ ಅಗ್ರಿಮೆಂಟ್​ನಲ್ಲಿ ಏನಿದೆ ಎಂಬುದು ನಿಮಗೆ ಗೊತ್ತಿದೆ ಅಲ್ಲವೆ’ ಎಂದು ಸುದೀಪ್ ನೆಪಿಸಿದರು. ಶೋ ಮುಗಿದ ಬಳಿಕ ಧ್ರುವಂತ್ ಅವರು ಕ್ಯಾಮೆರಾ ಬಳಿ ಮಾತನಾಡಿದ್ದಾರೆ.

ಇದನ್ನೂ ಓದಿ: ಗಿಲ್ಲಿ-ರಘು ಗೆಳೆತನದಲ್ಲಿ ಬಿರುಕು; ಜಗಳ ತಪ್ಪಿಸಲು ಇಡೀ ಮನೆ ಬರಬೇಕಾಯ್ತು ‘ನನ್ನ ಕ್ಯಾರೆಕ್ಟರ್ ಜೊತೆ ಕಾಂಪ್ರಮೈಸ್ ಆಗಬೇಕಾದ ದಿನ ಬಂದಾಗ ನಾನು ಬದುಕಿರೋದಿಲ್ಲ. ಇಲ್ಲಿ ಇರುವುದಕ್ಕೆ ಅಥವಾ ಪೇಮೆಂಟ್ ಸಿಗುತ್ತದೆ ಎಂಬ ಕಾರಣಕ್ಕೆ ಸೇಫ್ ಗೇಮ್ ಆಡೋಕೆ ನನಗೆ ಇಷ್ಟ ಇಲ್ಲ. ಈ ಗೇಮ್ ಅಲ್ಲಿ ಮುಂದುವರಿಯಬೇಕು ಎಂಬ ಕಾರಣಕ್ಕೆ ಬಹಳ ಒಳ್ಳೆಯವನ ರೀತಿ ಇರೋಕೆ ಸಾಧ್ಯವಿಲ್ಲ. ಈ ಶೋನಿಂದ ಹೊರ ಹೋಗೋದು ನನಗೆ ಇಷ್ಟ. ನಿಮ್ಮ ಜೊತೆ ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದೇನೆ. ಇಲ್ಲಿಂದ ನನ್ನನ್ನು ಕಳುಹಿಸಿ’ ಎಂದು ಧ್ರುವಂತ್ ಅವರು ಕ್ಯಾಮೆರಾ ಎದುರು ಕೋರಿಕೆ ಇಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು