ಅಶ್ಲೀಲ ಸನ್ನೆ ಮಾಡಿ ಸಮತೋಲನದ ನೆಪ ಹೇಳಿದ ಚಕ್ರವರ್ತಿಗೆ ಸುದೀಪ್ ಸಖತ್​ ಕ್ಲಾಸ್​

| Updated By: ರಾಜೇಶ್ ದುಗ್ಗುಮನೆ

Updated on: Jul 24, 2021 | 10:10 PM

ಪ್ರಿಯಾಂಕಾಗೆ ಅವರು ಮಧ್ಯ ಬೆರಳು ತೋರಿಸಿದ್ದರು. ಸುದೀಪ್​ ಅವರು ಪದೇಪದೇ ಹೇಳಿದರೂ ಚಕ್ರವರ್ತಿ ಇದೇ ತಪ್ಪನ್ನು ಮಾಡುತ್ತಿದ್ದಾರೆ. ಹೀಗಾಗಿ ವಾರಂತ್ಯದಲ್ಲಿ ಸುದೀಪ್​  ಚಕ್ರವರ್ತಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಅಶ್ಲೀಲ ಸನ್ನೆ ಮಾಡಿ ಸಮತೋಲನದ ನೆಪ ಹೇಳಿದ ಚಕ್ರವರ್ತಿಗೆ ಸುದೀಪ್ ಸಖತ್​ ಕ್ಲಾಸ್​
ಅಶ್ಲೀಲ ಸನ್ನೆ ಮಾಡಿ ಸಮತೋಲನದ ನೆಪ ಹೇಳಿದ ಚಕ್ರವರ್ತಿಗೆ ಸುದೀಪ್ ಸಖತ್​ ಕ್ಲಾಸ್​
Follow us on

ಮೂರು ವಾರಗಳ ಹಿಂದಿನ ಮಾತು. ಬಿಗ್​ ಬಾಸ್​ನಲ್ಲಿ ಚಕ್ರವರ್ತಿ ಚಂದ್ರಚೂಡ್​ ವಿಚಿತ್ರವಾಗಿ ವರ್ತಿಸಿದ್ದರು. ಅವರು ಅಶ್ಲೀಲ ಪದ ಬಳಕೆ ಮಾಡಿದ್ದರಿಂದ ಬೀಪ್​ ಸೌಂಡ್​ ಹಾಕಲಾಗಿತ್ತು. ಇದಕ್ಕೆ ಕಿಚ್ಚ ಸುದೀಪ್​ ಅಸಮಾಧಾನ ಹೊರ ಹಾಕಿದ್ದರು. ಚಕ್ರವರ್ತಿ ಅವರೇ ನಿಮಗೆ ಇರುವ ಜ್ಞಾನಕ್ಕೆ ಇದು ಸಲ್ಲುವುದಿಲ್ಲ ಎಂದಿದ್ದರು. ಅದಾದ ನಂತರದಲ್ಲಿ ನಾನು ತಪ್ಪನ್ನು ತಿದ್ದಿಕೊಳ್ಳುತ್ತೇನೆ ಎಂದಿದ್ದರು ಚಕ್ರವರ್ತಿ. ಇದಾದ ಒಂದೇ ವಾರದಲ್ಲಿ ಅವರು ಮತ್ತೆ ಅದೇ ತಪ್ಪನ್ನು ಮಾಡಿದ್ದರು. ಇದಕ್ಕೆ ಸುದೀಪ್​ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಜುಲೈ 18ರ ಎಪಿಸೋಡ್​ನಲ್ಲಿ ಪ್ರಿಯಾಂಕಾ ಎಲಿಮಿನೇಟ್​ ಆಗಿದ್ದರು. ಒಬ್ಬರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್​ ಮಾಡಬೇಕು. ಆಗ ಪ್ರಿಯಾಂಕಾ ತೆಗೆದುಕೊಂಡ ಹೆಸರು ಚಕ್ರವರ್ತಿ ಚಂದ್ರಚೂಡ್​ ಅವರದ್ದು. ಇದು ಚಕ್ರವರ್ತಿ ಚಂದ್ರಚೂಡ್​ಗೆ ಅಸಮಾಧಾನ ತರಿಸಿತ್ತು. ಹೀಗಾಗಿ, ಪ್ರಿಯಾಂಕಾಗೆ ಅವರು ಮಧ್ಯ ಬೆರಳು ತೋರಿಸಿದ್ದರು. ಸುದೀಪ್​ ಅವರು ಪದೇಪದೇ ಹೇಳಿದರೂ ಚಕ್ರವರ್ತಿ ಇದೇ ತಪ್ಪನ್ನು ಮಾಡುತ್ತಿದ್ದಾರೆ. ಹೀಗಾಗಿ ವಾರಂತ್ಯದಲ್ಲಿ​  ಚಕ್ರವರ್ತಿಗೆ ಸುದೀಪ್ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಮಧ್ಯ ಬೆರಳು ತೋರಿಸಿದ ಬಗ್ಗೆ ಕಿಚ್ಚ ಸುದೀಪ್​ ಅವರು ಚಕ್ರವರ್ತಿಗೆ ಪ್ರಶ್ನೆ ಮಾಡಿದರು. ‘ಎಲ್ಲಾ ಬೆರಳಿಗೂ ಅದರದೇ ಆದ ಅರ್ಥ ಇದೆ. ಟೀಚರ್ಸ್​ ಹೇಳಿಕೊಡದ್ದನ್ನು ನೀವು ತೋರ್ಸಿದ್ರಿ. ನೀವು ಕಳೆದವಾರ ಹೆಣ್ಣು ಮಗುವಿಗೆ ಮಧ್ಯ ಬೆರಳು ತೋರ್ಸಿದ್ರಿ. ಅದರ ಅರ್ಥವೇನು ನಂಗೆ ಗೊತ್ತಿಲ್ಲ. ಪ್ರತಿ ತಾಯಂದಿರೂ ನಮಗೆ ಕೇಳ್ತಾ ಇದಾರೆ. ದಯವಿಟ್ಟು ಇದಕ್ಕೆ ಅರ್ಥ ಹೇಳುವವರೆಗೆ ನಾನು ಇಲ್ಲಿಂದ ತೆರಳಲ್ಲ’ ಎಂದರು ಸುದೀಪ್​.

‘ಇದು ಸಮತೋಲನದ ಬೆರಳು’ ಎಂದು ಚಕ್ರವರ್ತಿ ಸಬೂಬು ಕೊಡೋಕೆ ಹೋದರು. ಇದಕ್ಕೆ ಸುದೀಪ್​ ಸಿಟ್ಟಾದರು. ‘ಇದರ ಅರ್ಥವೇನು? ಸಮತೋಲನದ ಬೆರಳು ಎಂದರೆ ಅದು ಹೇಗೆ ಅಸಭ್ಯವಾಗುತ್ತದೆ. ಇದನ್ನು ತೋರಿಸಿದ್ರೆ ಜಗಳ ನಡೆಯುತ್ತೆ. ಒಂದು ಹುಡುಗಿಗೆ ತೋರಿಸೋದು ಎಷ್ಟು ಸರಿ? ಮಾನ-ಮರ್ಯಾದೆ ಹರಾಜು ಹಾಕ್ಕೊಳೋಕೆ ಒಳಗೆ ಹೋಗಿದ್ದೀನಿ ಎಂದರೆ ಅದನ್ನು ನಾವು ತಡೆಯೋಕೆ ಆಗಲ್ಲ. ಹೆಣ್ಮಕ್ಳಿಗೆ ಗೌರವ ಕೊಡ್ತೀನಿ ಎಂದು ನೀವು ಹೇಳ್ತೀರಾ. ಅಂದರೆ ಎಷ್ಟು ಕೆಟ್ಟದಾಗಿ ಕಾಣಬಹುದು ಅಂತ ನೀವೇ ಆಲೋಚಿಸಿ’ ಎಂದರು ಸುದೀಪ್.

‘ಈವರೆಗೆ ಬಿಗ್​ ಬಾಸ್​ ಮನೆಗೆ 160 ಜನ ಹೋಗಿರಬಹುದು. ಮುಂದಿನ 10 ವರ್ಷಗಳಲ್ಲಿ 160 ಜನ ಹೋಗಬಹುದು. ಒಟ್ಟು 20 ವರ್ಷಗಳಲ್ಲಿ ಸುಮಾರು 300 ಜನ ಹೋಗಬಹುದು. ಈ ಅವಕಾಶಕ್ಕಾಗಿ ಎಲ್ಲರೂ ಕಾಯ್ತಾ ಇದಾರೆ. ನಿಮಗೆ ಅವಕಾಶ ಸಿಕ್ಕಿದೆ. ಆದ್ರೆ, ಅದನ್ನು ಸದ್ಬಳಕೆ ಮಾಡಿಕೊಂಡಿಲ್ಲ. ನೀವು ಮಾತು ಉಳಿಸಿಕೊಂಡಿಲ್ಲ. ನನಗೆ ತುಂಬಾ ನೋವಾಯ್ತು ಎಂದರು’ ಸುದೀಪ್​.

ಇದನ್ನೂ ಓದಿ: ಬಿಗ್​ ಬಾಸ್​ ಫಿನಾಲೆಗೂ ಮೊದಲೇ ಶುಭಾ ಪೂಂಜಾಗೆ ಬಿಗ್​ ಬಾಸ್​ ಕಡೆಯಿಂದ ಶಾಕ್​

ಪ್ರಿಯಾಂಕಾಗೆ ಅಶ್ಲೀಲ ಸನ್ನೆ ತೋರಿಸಿದ ಚಕ್ರವರ್ತಿ; ಬಿಗ್​ ಬಾಸ್​ ನೀಡ್ತೀರೋ ಶಿಕ್ಷೆ ಏನು?