ಇದು ಛತ್ರ ಅಲ್ಲ, ವೇದಿಕೆಯನ್ನು ಹಾಳು ಮಾಡಬೇಡಿ; ತಾಳ್ಮೆ ಕಳೆದುಕೊಂಡ ಸುದೀಪ್

ಈ ವಾರ ಧ್ರುವಂತ್ ಬಗ್ಗೆ ಒಂದು ಗಂಭೀರ ಆರೋಪ ಕೇಳಿಬಂತು. ‘ರಾಶಿಕಾ ಅವರು ಅಭಿಗೆ ಟ್ರೈ ಮಾಡಿದರು. ಅವರು ಸಿಗದೇ ಇದ್ದಿದ್ದಕ್ಕೆ ನನ್ನ ಟ್ರೈ ಮಾಡಿದರು’ ಎಂದು ಧ್ರುವಂತ್ ಹೇಳಿದ್ದರು. ಇದರ ವಿಟಿಯನ್ನು ಕೂಡ ತೋರಿಸಲಾಯಿತು. ಧ್ರುವಂತ್ ಅವರು ಹೇಳಿದ ಮಾತಲ್ಲಿ ತಪ್ಪಿದೆ ಎಂದು ರಾಶಿಕಾ ಹೇಳಿದರು. ಈ ವಿಚಾರದ ಬಗ್ಗೆ ಸುದೀಪ್ ಅವರು ಸಾಕಷ್ಟು ಚರ್ಚೆ ಮಾಡಿದರು.

ಇದು ಛತ್ರ ಅಲ್ಲ, ವೇದಿಕೆಯನ್ನು ಹಾಳು ಮಾಡಬೇಡಿ; ತಾಳ್ಮೆ ಕಳೆದುಕೊಂಡ ಸುದೀಪ್
Sudeep Rashika
Edited By:

Updated on: Nov 15, 2025 | 11:04 PM

ಕಿಚ್ಚ ಸುದೀಪ್ ಅವರು ವೇದಿಕೆ ಮೇಲೆ ತಾಳ್ಮೆ ಕಳೆದುಕೊಳ್ಳುವುದು ಕಡಿಮೆ. ಆದರೆ, ಈ ವಾರ ಅವರು ತುಂಬಾನೇ ತಾಳ್ಮೆ ಕಳೆದುಕೊಂಡರು ಎಂದರೂ ತಪ್ಪಾಗಲಾರದು. ಇದಕ್ಕೆ ಕಾರಣವೂ ಇದೆ. ರಾಶಿಕಾ ಶೆಟ್ಟಿ ಹಾಗೂ ರಿಷಾ ಗೌಡ ಅವರು ನಡೆದುಕೊಂಡ ರೀತಿಯೇ ಕಾರಣ. ಅವರು ಚರ್ಚಿಸಿದ ಲವ್​ ಟ್ರ್ಯಾಕ್ ವಿಚಾರಕ್ಕೆ ಸುದೀಪ್ ಅವರು ತಾಳ್ಮೆ ಕಳೆದುಕೊಂಡರು. ಅಷ್ಟಕ್ಕೂ ಆಗಿದ್ದು ಏನು? ಆ ಬಗ್ಗೆ ಇಲ್ಲಿದೆ ವಿವರ.

ಈ ವಾರ ಧ್ರುವಂತ್ ಬಗ್ಗೆ ಒಂದು ಗಂಭೀರ ಆರೋಪ ಕೇಳಿಬಂತು. ‘ರಾಶಿಕಾ ಅವರು ಅಭಿಗೆ ಟ್ರೈ ಮಾಡಿದರು. ಅವರು ಸಿಗದೇ ಇದ್ದಿದ್ದಕ್ಕೆ ನನ್ನ ಟ್ರೈ ಮಾಡಿದರು’ ಎಂದು ಧ್ರುವಂತ್ ಹೇಳಿದ್ದರು. ಇದರ ವಿಟಿಯನ್ನು ಕೂಡ ತೋರಿಸಲಾಯಿತು. ಧ್ರುವಂತ್ ಅವರು ಹೇಳಿದ ಮಾತಲ್ಲಿ ತಪ್ಪಿದೆ ಎಂದು ರಾಶಿಕಾ ಹೇಳಿದರು. ಈ ವಿಚಾರದ ಬಗ್ಗೆ ಸುದೀಪ್ ಅವರು ಸಾಕಷ್ಟು ಚರ್ಚೆ ಮಾಡಿದರು. ಧ್ರುವಂತ್ ಕೂಡ ಇದು ತಪ್ಪು ಎಂದು ಒಪ್ಪಿಕೊಂಡರು.

ಆ ಬಳಿಕ ಸುದೀಪ್ ಅವರು ಈ ಕಥೆಯ ಮತ್ತೊಂದು ಆ್ಯಂಗಲ್ ಹೇಳಿದರು. ರಾಶಿಕಾ ಅವರು ಈ ಮೊದಲು ಧ್ರುವಂತ್ ಅವರ ಬೆಲ್ಟ್​ನ ತೆಗೆದುಕೊಂಡು ಇಟ್ಟುಕೊಂಡಿದ್ದರು. ಹೀಗೇಕೆ ಎನ್ನುವ ಪ್ರಶ್ನೆ ಮೂಡಿದೆ. ಈ ವಿಚಾರವನ್ನು ಸುದೀಪ್ ಕೂಡ ಕೇಳಿದರು. ಆಗ ರಾಶಿಕಾ ಏನನ್ನೋ ಹೇಳಲು ಹೋದರು. ಈ ವೇಳೆ ಮಾತನಾಡಿದ ಸುದೀಪ್, ‘ನಿಮಗೆ ಆಗದೆ ಇರುವ ವ್ಯಕ್ತಿಯ ನೀವು ಬೆಲ್ಟ್​ನ ತೆಗೆದುಕೊಂಡು ಇಟ್ಟುಕೊಂಡಿದ್ದೀರಿ ಎಂದಾಗ ಜನರಿಗೆ ಏನೋ ಇದೆ ಎಂದೇ ಅನಿಸುತ್ತದೆ’ ಎಂದು ಸುದೀಪ್ ಹೇಳಿದರು.

ಇದನ್ನೂ ಓದಿ: ಅಧಿಕ ಪ್ರಸಂಗ, ಓವರ್ ಕಾನ್ಫಿಡೆನ್ಸ್ ಬೇಡ; ಗಿಲ್ಲಿ ನಟನಿಗೆ ಕಿಚ್ಚನ ವಾರ್ನಿಂಗ್

ಆ ಬಳಿಕ ಸುದೀಪ್ ಅವರು ರಿಷಾ ಗೌಡ ಅವರ ವಿಷಯಕ್ಕೆ ಬಂದರು. ‘ಧ್ರುವಂತ್ ಜೊತೆ ಲವ್​​ ಟ್ರ್ಯಾಕ್ ಶುರು ಮಾಡಿ’ ಎಂದು ರಾಶಿಕಾ ಹೇಳಿದಾಗ ರಿಷಾ ಗೌಡ ವಾಕರಿಕೆ ಬಂದಂತೆ ನಡೆದುಕೊಂಡಿದ್ದರು. ಈ ವಿಚಾರಕ್ಕೆ ಸುದೀಪ್ ಸಿಟ್ಟಾದರು. ‘ಧ್ರುವಂತ್ ಕೂಡ ಯಾರೋ ಒಬ್ಬರ ಮಗನೇ. ಅವರ ಬಗ್ಗೆ ಹೀಗೆ ಹೇಳೋಕೆ ಹೇಗೆ ಮನಸ್ಸು ಬರುತ್ತದೆ? ಲವ್​ ಸ್ಟೋರಿ ಮಾಡಿ ಗೆಲ್ಲಬಹುದು ಎಂದುಕೊಳ್ಳಬೇಡಿ. ಇದು ಛತ್ರ ಅಲ್ಲ. ಈ ಮನೆಯನ್ನು ಹಾಳು ಮಾಡಬೇಡಿ’ ಎಂದು ರಾಶಿಕಾ ಹಾಗೂ ರಿಷಾಗೆ ಎಚ್ಚರಿಕೆ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.