‘ನನ್ನ ಹಣೆ ಬರಹದ ಬಗ್ಗೆ ಬೇಸರ ಆಗುತ್ತಿದೆ’; ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಬೇಸರ

|

Updated on: Jan 06, 2025 | 8:57 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ ರಲ್ಲಿ ಸ್ಪರ್ಧಿಗಳ ವರ್ತನೆಯಿಂದ ಕಿಚ್ಚ ಸುದೀಪ್ ಅವರು ಬೇಸರಗೊಂಡಿದ್ದಾರೆ. ಸ್ಪರ್ಧಿಗಳ ಅಸಭ್ಯ ವರ್ತನೆ ಮತ್ತು ಅರ್ಥಹೀನ ಕೃತ್ಯಗಳಿಗೆ ಪ್ರತಿಕ್ರಿಯಿಸುತ್ತಾ, ತಮ್ಮ ತಾಳ್ಮೆಯ ಮಿತಿ ಮೀರಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಅವರು ನಿರಾಶೆ ವ್ಯಕ್ತಪಡಿಸಿದ್ದಾರೆ. ಆ ಬಗ್ಗೆ ಚರ್ಚೆ ನಡೆಯುತ್ತಿದೆ.

‘ನನ್ನ ಹಣೆ ಬರಹದ ಬಗ್ಗೆ ಬೇಸರ ಆಗುತ್ತಿದೆ’; ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಬೇಸರ
ಚೈತ್ರಾ-ಸುದೀಪ್
Follow us on

ಕಿಚ್ಚ ಸುದೀಪ್ ಅವರು ಸಾಕಷ್ಟು ತಾಳ್ಮೆಯಿಂದ ಬಿಗ್ ಬಾಸ್​ನ ನಡೆಸಿಕೊಡುತ್ತಾ ಇದ್ದಾರೆ. ಸ್ಪರ್ಧಿಗಳು ಏನೇ ಹೇಳಿದರು ಅದನ್ನು ಕೇಳಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಸ್ಪರ್ಧಿಗಳು ನಡೆದುಕೊಳ್ಳುವ ರೀತಿ ಮಿತಿಮೀರಿ ಇರುತ್ತದೆ. ಆದಾಗ್ಯೂ ಸುದೀಪ್ ಇದಕ್ಕೆಲ್ಲ ಬೇಸರ ಮಾಡಿಕೊಳ್ಳುವುದಿಲ್ಲ. ಬದಲಿಗೆ ಶಾಂತ ಚಿತ್ತರಾಗಿ ಉತ್ತರಿಸುತ್ತಾರೆ. ಸುದೀಪ್ ಅವರು ಈ ಸೀಸನ್​ನಲ್ಲಿ ಸಾಕಷ್ಟು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಈಗ ಸುದೀಪ್ ಅವರು ‘ನನ್ನ ಹಣೆ ಬರಹದ ಬಗ್ಗೆ ಬೇಸರ ಆಗುತ್ತಿದೆ’ ಎಂದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಮೀಮ್​ಗಳನ್ನು ಹರಿಬಿಡಲಾಗುತ್ತಿದೆ. ಇದನ್ನು ಬಿಗ್ ಬಾಸ್ ವೇದಿಕೆ ಮೇಲೆ ತೋರಿಸಲಾಗಿದೆ. ಕಳೆದ ವಾರ ಎಲ್ಲ ಸ್ಪರ್ಧಿಗಳು ಎದುರಾಳಿಯ ಮುಖಕ್ಕೆ ಕಾಡಿಗೆ ಬಡಿದು ವಿಚಿತ್ರ ವೇಷ ಮಾಡಿದ್ದರು. ಇದನ್ನು ಮೀಮ್ ಮಾಡಲಾಗಿತ್ತು. ಹನುಮಂತ ಅವರು ಮುಖಕ್ಕೆ ಮಸಿ ಬಳಿದುಕೊಳ್ಳುತ್ತಾರೆ. ‘ಹೀಗೆ ಮಾಡಿದ್ರೆ ಫಿನಾಲೆ ತಲುಪುತ್ತಾರೆ’ ಎಂದು ಹನುಮಂತ ಹೇಳಿದಂತೆಯೂ, ಈ ಮಾತು ಕೇಳಿ ಮತ್ತೆ ಮೂವರು ಮಸಿ ಬಳಿದುಕೊಳ್ಳುವಂತೆ ಮೀಮ್ ಮಾಡಲಾಗಿತ್ತು. ಇದಕ್ಕೆ ಸಾಕಷ್ಟು ಅರ್ಥ ಇದೆ ಎಂದು ಸುದೀಪ್ ಹೇಳಿದರು.

ಆದರೆ, ಇದು ಚೈತ್ರಾಗೆ ಅರ್ಥ ಆಗಲೇ ಇಲ್ಲ. ಈ ಬಗ್ಗೆ ಸುದೀಪ್ ಅವರು ಕೇಳಿದಾಗ, ಏನು ಏನೋ ಹೇಳುತ್ತಾ ಹೋದರು. ಅವರಿಗೆ ಅರ್ಥ ಮಾಡಿಸುವ ಪ್ರಯತ್ನವನ್ನು ಸುದೀಪ್ ಮಾಡಿದರೂ ಚೈತ್ರಾ ತಲೆಗೆ ಹೋಗಲೇ ಇಲ್ಲ. ತಮಗೆ ಏನು ಅನ್ನಿಸಿತೋ ಅದನ್ನೇ ಹೇಳುತ್ತಾ ಉಳಿದರು. ಆಗ ಸುದೀಪ್ ಅವರು ತಾಳ್ಮೆಯಿಂದಲೇ ಕೌಂಟರ್ ಕೊಟ್ಟರು. ‘ನನಗೆ ನಿಮ್ಮ ಬಗ್ಗೆ ಏನೂ ಅನ್ನಿಸುತ್ತಿಲ್ಲ. ನನ್ನ ಹಣೆ ಬರಹದ ಬಗ್ಗೆ ನನಗೆ ಬೇಸರ ಆಗುತ್ತಿದೆ’ ಎಂದರು.

ಇದನ್ನೂ ಓದಿ: ಸುದೀಪ್ ಸಿಕ್ಕ ಮೇಲೆ ಬದುಕು ಬದಲಾಯಿತು; ಅರ್ಜುನ್ ಜನ್ಯ ಹೇಳಿದ ಅಪರೂಪದ ವಿಚಾರ

‘ಕಲರ್ಸ್ ಅವರು ಬಿಗ್ ಬಾಸ್ ಆಫರ್​ನ ನನಗೆ ಕೊಟ್ಟಿಲ್ಲ ಎಂದುಕೊಳ್ಳೋಣ, ಅವರು ನನಗೆ ಪೇಮೆಂಟ್ ಮಾಡಿಲ್ಲ ಎಂದುಕೊಳ್ಳೋಣ. ಅವಾಗ ನನ್ನ ಎದುರು ಕುಳಿತು ಯಾರಾದ್ರೂ ಈ ರೀತಿ ಮಾತನಾಡಿದರು ಅಂದುಕೊಳ್ಳೋಣ..’ ಎಂದು ಪೌಸ್ ಕೊಟ್ಟರು. ಆ ಬಳಿಕ ‘ನನ್ನ ಹಣೆ ಬರಹ’ ಎಂದರು ಸುದೀಪ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.