ಬಿಗ್ ಬಾಸ್ ಬಳಿ ಕೇಳದೇ ಸ್ಪರ್ಧಿಗಳ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಂಡ ಸುದೀಪ್

ಸಾಮಾನ್ಯವಾಗಿ ನಾಮಿನೇಷನ್ ಮಾಡುವಾಗ ಬಿಗ್ ಬಾಸ್ ಚಟುವಟಿಕೆ ಒಂದನ್ನು ನೀಡುತ್ತಾರೆ. ಆದರೆ, ಮುಂದಿನ ವಾರ ಆ ರೀತಿ ಇರೋದಿಲ್ಲ ಎಂದರು. ಬಿಗ್ ಬಾಸ್ ಈ ಬಾರಿ ಯಾವುದೇ ಚಟುವಟಿಕೆ ನೀಡೋದಿಲ್ಲ ಎಂದು ಸುದೀಪ್ ಹೇಳಿದರು. ಜೊತೆಗೆ ಎಲ್ಲರನ್ನೂ ನಾಮಿನೇಷನ್ ಮಾಡೋದಾಗಿ ಅವರು ಘೋಷಣೆ ಮಾಡಿಯೇ ಬಿಟ್ಟರು.

ಬಿಗ್ ಬಾಸ್ ಬಳಿ ಕೇಳದೇ ಸ್ಪರ್ಧಿಗಳ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಂಡ ಸುದೀಪ್
ಸುದೀಪ್
Updated By: ಮಂಜುನಾಥ ಸಿ.

Updated on: Nov 02, 2025 | 10:23 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಯಾರೂ ಊಹಿಸದಂತ ಘಟನೆಗಳು ನಡೆಯುತ್ತಿವೆ. ಸ್ಪರ್ಧಿಗಳ ಮಧ್ಯೆ ಸಾಕಷ್ಟು ಸ್ಪರ್ಧೆ ಇದೆ. ವೀಕೆಂಡ್ ಬಂತು ಎಂದರೆ ಎಲ್ಲರಿಗೂ ಖುಷಿ ಇರುತ್ತದೆ. ಇದಕ್ಕೆ ಕಾರಣ ಸುದೀಪ್ ಅವರು. ಸುದೀಪ್ ಅವರು ಎಲ್ಲರನ್ನು ರಂಜಿಸೋ ಕೆಲಸ ಮಾಡುತ್ತಾರೆ. ಈ ವಾರವೂ ಅವರು ವೀಕೆಂಡ್​ನಲ್ಲಿ ಪಂಚಾಯ್ತಿ ಮಾಡಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದರು. ಈಗ ಸುದೀಪ್ ಅವರು ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡರು. ಇದಕ್ಕೆ ಅವರು ಬಿಗ್ ಬಾಸ್ ಬಳಿ ಯಾವುದೇ ಪ್ರಶ್ನೆಯನ್ನೂ ಮಾಡಲಿಲ್ಲ.

ಸಾಮಾನ್ಯವಾಗಿ ನಾಮಿನೇಷನ್ ಮಾಡುವಾಗ ಬಿಗ್ ಬಾಸ್ ಚಟುವಟಿಕೆ ಒಂದನ್ನು ನೀಡುತ್ತಾರೆ. ಆದರೆ, ಮುಂದಿನ ವಾರ ಆ ರೀತಿ ಇರೋದಿಲ್ಲ ಎಂದರು. ಬಿಗ್ ಬಾಸ್ ಈ ಬಾರಿ ಯಾವುದೇ ಚಟುವಟಿಕೆ ನೀಡೋದಿಲ್ಲ ಎಂದು ಸುದೀಪ್ ಹೇಳಿದರು. ಜೊತೆಗೆ ಎಲ್ಲರನ್ನೂ ನಾಮಿನೇಷನ್ ಮಾಡೋದಾಗಿ ಅವರು ಘೋಷಣೆ ಮಾಡಿಯೇ ಬಿಟ್ಟರು. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ಏನು ಮಾಡಬೇಕು ಎಂಬುದೇ ಸ್ಪರ್ಧಿಗಳಿಗೆ ತಿಳಿದಿಲ್ಲ.

ಇದರ ಬೆನ್ನಲ್ಲೇ ಸುದೀಪ್ ಅವರು ಮತ್ತೊಂದು ನಿರ್ಧಾರ ತೆಗೆದುಕೊಂಡೇ ಬಿಟ್ಟರು. ಮುಂದಿನ ವಾರ ಯಾವುದೇ ಟಾಸ್ಕ್ ಇರೋದಿಲ್ಲ. ಆದರೂ ನೀವು ಜನರಿಗೆ ಮನರಂಜನೆ ನೀಡಬೇಕು. ಹೇಗೆ ಮನರಂಜನೆ ನೀಡುತ್ತೀರಾ ಎಂಬುದು ನಿಮಗೆ ಬಿಟ್ಟಿದ್ದು. ಆ ಬಳಿಕ ಜನರೇ ನಿರ್ಧರಿಸಲಿ ಎಂದು ಸುದೀಪ್ ಅವರು ತಿಳಿಸಿದರು. ಇದನ್ನು ಕೇಳಿ ಸ್ಪರ್ಧಿಗಳಿಗೆ ಶಾಕ್ ಆಯಿತು.

ಇದನ್ನೂ ಓದಿ: ‘ನೀವು ಜೋಕರ್ಸ್ ರೀತಿ ಕಾಣಿಸ್ತಾ ಇದೀರಾ, ನಿಮ್ಮಷ್ಟು ಮುಟ್ಠಾಳರು ಯಾರೂ ಇಲ್ಲ’; ಸುದೀಪ್ 

ಬಿಗ್ ಬಾಸ್ ಮನೆಯಲ್ಲಿ ಯಾರು ಹೊರ ಹೋಗುತ್ತಾರೆ ಎಂಬುದು ನಾಮಿನೇಷನ್ ಯಾರಾಗಿದ್ದಾರೆ ಎಂಬುದರ ಮೇಲೆ ನಿರ್ಧಾರ ಆಗುತ್ತದೆ. ಕೆಲವೊಮ್ಮೆ ಡಲ್ ಕ್ಯಾಂಡಿಡೇಟ್​ಗಳು ನಾಮಿನೇಟ್ ಆಗದೇ ಬಚಾವ್ ಆದ ಉದಾಹರಣೆ ಸಾಕಷ್ಟಿದೆ. ಆದರೆ, ಈ ಬಾರಿ ಎಲ್ಲರೂ ನಾಮಿನೇಟ್ ಆಗಿರುವುದರಿಂದ ಇಡೀ ಮನೆಯಲ್ಲಿ ಅನರ್ಹರು ಎಂಬುವವರೇ ಎಲಿಮಿನೇಟ್ ಆಗೋದು ಪಕ್ಕಾ ಆಗಿದೆ. ಅವರು ಯಾರು ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಿದೇ ಎಂದೇ ಹೇಳಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.